ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಕಾವ್ಯ ಎಸ್ ಕೋಳಿವಾಡ್ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಜೀವಜಗತ್ತಿನ ದೀಪಾವಳಿ

ಜೀವಜಗತ್ತಿನ ದೀಪಾವಳಿ ಇದು.. Noctilluca scintillan  ಒಂದು ಬಗೆಯ ಸೂಕ್ಷ್ಮ ಜೀವಿ‌. ಸ್ವಯಂಪ್ರಕಾಶವಾದ ಬೆಳಕನ್ನು ಹೊರಸೂಸಿ ಇಡೀ ಸಮುದ್ರದ ತೀರವನ್ನು ನೀಲಿ ಸೀರಿಯಲ್ ಲೈಟ್ ಹಾಕಿ ಅಲಂಕರಿಸಿದಂತೆ ಕಾಣುತ್ತದೆ.  ಇವುಗಳನ್ನು 1773 ರಲ್ಲಿ ಮೊದಲಬಾರಿಗೆ ಫೆಡ್ರಿಕ್ ಮುಲ್ಲರ್ sea sparkle ‌ಕಡಲ ತೀರದ ನಕ್ಷತ್ರ ಅಂತ ಹೆಸರಿಸಿದ.  ನಮ್ಮ ಕರ್ನಾಟಕದ ಉಡುಪಿಯ ಮಟ್ಟು ಬೀಚ್ ಮತ್ತೆ ಗೋಕರ್ಣದ ಬೀಚ್ ನಲ್ಲಿ ಇವು ಕಾಣಸಿಗುತ್ತಿದ್ದು ಯಾವಾಗ ಅದು ಡಿಸ್ಟರ್ಬ್ ಆಗುತ್ತೋ ಆಗ ಈ ರೀತಿ ಬಣ್ಣಕೆ ಕಾರಣ ಆಗುತ್ತದೆ .  ಆದರೆ ಈ ವಿಷಯ ತುಂಬ ಖುಷಿ ಪಡುವಂತದ್ದೇನೂ ಅಲ್ಲ . ಇದು ಅತಿ ವೇಗದಲ್ಲಿ ಪುನರುತ್ಪತ್ತಿ ಆಗುತ್ತಾ planktonic tide / red tide ಗೆ ಕಾರಣ ಆಗುತ್ತದೆ .  ನೀರಿನ ಪೂರ್ತಿ ಈ ಬಗೆಯ ಶೈವಲಗಳು ಆವರಿಸಿ ನೀರಿನಡಿಯ ಜೀವ ವೈವಿಧ್ಯಕೆ ಬೇಕಾದ ಸೂರ್ಯನ ಕಿರಣಗಳನ್ನು ನೀರಿನಡಿಗೆ ತಲುಪಲು ಅಡ್ಡಿಯಾಗುತ್ತವೆ‌  ಈ ಸೂಕ್ಷ್ಮಜೀವಿಗಳು ಫ್ಲಾಜೆಲ್ಲಾ ಎಂಬ ವಿಶೇಷ ಚಲನಾಂಗವನ್ನು ಹೊಂದಿದ್ದು ಅದೇ ಕಾರಣಕ್ಕೆ ಇದನ್ನು ಡೈನೋಫ್ಲಾಜೆಲ್ಲೇಟ್ ಗುಂಪಿಗೆ ಸೇರಿಸುತ್ತಾರೆ.  ಇದು ಥೇಟ್ ನಮ್ಮ ಮಿಂಚುಹುಳು ಹಳದಿ ಬೆಳಕನ್ನು ಬೀರಿದ ಹಾಗೆ ಲ್ಯೂಸಿಫೆರಿನ್ ಎಂಬ ಕೆಮಿಕಲ್ ಆಮ್ಲಜನಕದೊಡನೆ ವರ್ತಿಸಿ  ಈ ಬಣ್ಣ ಬೀರುತ್ತದೆ.  ಇತ್ತೀಚೆಗೆ ಇದು ಪ್ರವಾಸಿಗರ ಮುಖ್ಯ ಆಕರ್ಷಣೆ ಕೂಡಾ... 😁

ವಿಷಕ್ಕೆ ನಾವೆಷ್ಟು ಹತ್ತಿರ

ವಿಷಾನಿಲಕ್ಕೆ ನಾವೇನೂ ದೂರವಿಲ್ಲ . ವಿಶಾಖಪಟ್ಟಣದ ಅನಿಲ ದುರಂತ ಘಟಿಸಿದ ಹೊತ್ತಲ್ಲೇ ನಾವು ಎಷ್ಟು ಸುರಕ್ಷಿತ ಅನಿಸುತ್ತೆ.  ಕಳೆದ ನವೆಂಬರ್ ಹೊತ್ತಿಗೆ ತೋರಣಗಲ್ಲಿಗೆ ಹೋಗಿದ್ದೆ.  ಅಲ್ಲಿಂದ ಸ್ನೇಹಿತರೆಲ್ಲ ಸೇರಿ ಸಂಡೂರಿಗೂ ಕುಮಾರಸ್ವಾಮಿ ಬೆಟ್ಟಕ್ಕೂ ಹೋಗಿದ್ವಿ.  ಬೆಳಿಗ್ಗೆ ಹನ್ನೊಂದಾದರೂ ಬೆಟ್ಟಕ್ಕೆ ಅದೇನೋ ಮುಸುಕು . ಬಹುಷಃ ಚಳಿಗಾಲವಲ್ವಾ ಅದಕ್ಕೆ ಇಬ್ಬನಿ ಏನೋ ಅಂದುಕೊಳ್ಳೋದಕ್ಕೆ  ಆಗಲೆ 27°c ದಾಟಿದೆ ತಾಪಮಾನ .  ಯಾವ ಬೆಟ್ಟವೂ ಕ್ಲಿಯರ್ ಆಗಿ ಕಾಣದಷ್ಟು ಮುಸುಕು . ನಂತರ ಎರಡು ಗಂಟೆ ಹೊತ್ತಿಗೂ ಕೂಡಾ.. ನಮ್ಮ ಎದುರಿನ ಬೆಟ್ಟವೂ ಮಬ್ಬು .  ಇದೇನಪ ಅಂತ ನೋಡುವಾಗ  ಅದು ಖಾರ್ಕಾನೆಗಳಿಂದ ಬಂದ ಮಾಲಿನ್ಯಕಾರಕ ಹೊಗೆ‌.   ಕ್ಲಾಸಲ್ಲಿ ವಾಯುಮಾಲಿನ್ಯ ಅಂತ ಓದಿದ್ದು ಪ್ರಾಯೋಗಿಕವಾಗಿ ಎದುರಿಗ್ ನೋಡೋಕ್ ಸಿಕ್ತಾ ಇತ್ತು.  ಆರ್ಸೆನಿಕ್ , ನೈಟ್ರೋಜನ್ ಆಕ್ಸೈಡ್ , ಸಲ್ಫರ್ ಆಕ್ಸೈಡ್ , ಹೈಡ್ರೋಕಾರ್ಬನ್ ಗಳು ,  ಕ್ಯಾಡ್ಮಿಯಂ , ಲೆಡ್ , ಸತು , ಇನ್ನೂ ಇತ್ಯಾದಿ ಅನಿಲಗಳು ಅಲ್ಲೇ ಇರುವ ಸ್ಟೀಲ್ ಖಾರ್ಕಾನೆಗಳಿಂದ ಬಂದು ಎತ್ತರದಲ್ಲಿ  ಕೆಮಿಕಲ್ ಪದರವನ್ನೇ ನಿರ್ಮಾಣ ಮಾಡಿರುತ್ತೆ .  ಈ ಪದರದ ಮೂಲಕ ಮಳೆ , ಇಬ್ಬನಿ ಬಂದಾಗ ಆ ನೀರಿನ ಕಣಗಳ ಜೊತೆ ಈ ಕೆಮಿಕಲ್ ಗಳು ಸೇರಿ ವಾಪಸ್ ಭೂಮಿಗೆ ಬರುತ್ತವೆ . ಇದನ್ನ ಆಮ್ಲಮಳೆ  ಅಂತಲೂ ಇಬ್ಬನಿ ಮತ್ತು ಹೊಗೆ ತುಂಬಿದರೆ sm...

ನೀಲಿ ನಾಯಿ

ನಾಯಿ ನೀಲಿಯಾದ ಕಥೆ ಪ್ರಕೃತಿ ಎಲ್ಲವನೂ ಸಹಿಸ್ತಾಳೆ ಅಂತ ನಾವು ಹಾಳುಗೆಡುವುದರಲ್ಲಿ ನಿಸ್ಸೀಮರು. ಲಾಭದ ಆಸೆಗೆ ಅಳತೆ ಮೀರಿ ಕಾರ್ಖಾನೆಗಳಿಗೆ ಪರವಾನಗಿ ನೀಡುವ ಸರ್ಕಾರದ ಸಂಸ್ಥೆಗಳಿಗೆ ಮುಂದಾಗುವ ಪರಿಣಾಮಗಳ ಅರಿವಿಲ್ಲ . ಕಠಿಣ ಕಾನೂನುಗಳು ಬರಬೇಕಿದೆ.  ಈಗ ಹೇಳೋಕ್ ಹೊರಟಿರೋದು ಮುಂಬೈನ ಬೀದಿನಾಯಿಗಳು ನೀಲಿಯಾದ ಕಥೆಯನ್ನ.  ಮುಂಬೈನ ತಲೋಜಾ ಜಿಲ್ಲೆಯ ಕೈಗಾರಿಕಾ ಪ್ರದೇಶದಲ್ಲಿ  ಬೀದಿನಾಯಿಗಳು ನೀಲಿ ಬಣ್ಣಕ್ಕೆ ತಿರುಗಿವೆ. ತುಸು ಲಕ್ಷ್ಯ ಕೊಟ್ಟು ಕೇಳಿಸಿಕೊಳ್ಳಬೇಕಿದೆ.. ಈ ಕೈಗಾರಿಕಾ ಪ್ರದೇಶ ಒಂದರಲ್ಲೇ ಸಾವಿರಕ್ಕೂ ಅಧಿಕ ಔಷಧ ತಯಾರಿಕಾ ಕಂಪನಿಯ ಕಾರ್ಖಾನೆಗಳು , ಬಣ್ಣವನ್ನು ಉತ್ಪಾದಿಸೋ ಕಾರ್ಖಾನೆಗಳಿಗೆ ,ಕೆಮಿಕಲ್ ಕಾರ್ಖಾನೆಗಳಿಗೆ ಅವಕಾಶ ನೀಡಿದೆ . ಈ ಕೈಗಾರಿಕೆಗಳ ವಿಷಯುಕ್ತ ತ್ಯಾಜ್ಯ ಸೇರುವುದು ಅಲ್ಲಿಯೇ ಸಮೀಪದ ಕಸಾಡಿ ಎಂಬ ನದಿಗೆ .  ಈ ನದಿಗೆ ಕೈಗಾರಿಕೆಗಳಿಂದ ಬರುವ ಹಾನಿಕಾರಕ ಸೈನೈಡ್ , ಹೈಡ್ರೋಕಾರ್ಬನ್ ,  ಇಂಡಿಗೋ , ಆಂಥ್ರಾಕ್ವಿನೋನ್,  ಸಲ್ಫರ್ , ನೈಟ್ರೋಜನ್  ಮುಂತಾದ ಆಸಿಡ್ ಡೈ ಗಳನ್ನು ಯಾವ ಶುದ್ಧಿಕರಣ ಇಲ್ಲದೇ ಬಿಡಲಾಗಿದೆ. ಜೊತೆ ಅತಿ ಹೆಚ್ಚು ಪ್ರಮಾಣದ ಕ್ಲೋರೈಡ್ ಆ ನೀರಿನಲ್ಲಿ  ಕಂಡುಬಂದಿದೆ.  ಕಸರಾಡಿ ನದಿಯ ಬಯಾಲಜಿಕಲ್ ಆಕ್ಸಿಜನ್ ಡಿಮಾಂಡ್  ನ ಪ್ರಮಾಣ 80mg/l  ಆಗಿದೆ . ಇದು ಅಪಾಯಕಾರಿ ಮಟ್ಟಕಿಂತ 14 ಪಟ್ಟು ಹೆಚ್ಚು .  BOD ಪ್ರಮಾಣ ಜಾಸ್...

ವಾಟರ್ ಮೆಲನ್ ಹಿಮ

ವಾಟರ್ ಮೆಲನ್ ಹಿಮ  ಹಿಮ ಎಂದರೆ ಅಚ್ಚ ಬಿಳಿ ಹಿಮ ಎಂದರೆ ಶುಭ್ರ  ಹತ್ತಿಯ ಹಾಗೆ , ಹಾಲಿನಹಾಗೆ ಪರ್ವತಗಳನ್ನು ಆವರಿಸಿರುವ ಹಿಮವನ್ನು ನೋಡಿರುತ್ತೇವೆ.  ಪಿಂಕು ಪಿಂಕು ಬಣ್ಣದ ಹಿಮದ ಬಗ್ಗೆ ಕೇಳಿದ್ದೀರಾ‌..?  ಯುರೋಪಿನ ಆಲ್ಪ್ಸ್ ಪರ್ವತ ಶ್ರೇಣಿಯಲ್ಲಿ‌  ಹಿಮ ತಿಳಿಗುಲಾಬಿ ಬಣ್ಣಕ್ಕೆ ಬದಲಾಗಿದೆ.  ಎಷ್ಟು ಚಂದ ಅಲ್ವ... ಗುಲಾಬಿ ಹಿಮ  ಇದಕ್ಕೆ ಕಾರಣವೇನು ಅಂತ ಹುಡುಕ್ತಾ ಹೋದಾಗ ಮೊದಲಿಗೆ ಸ್ಥಳೀಯರು ಕಬ್ಬಿಣದ ಆಕ್ಸೈಡ್ ಹಿಮದೊಂದಿಗೆ ಬೆರೆತಿರಬಹುದು ಅಂದುಕೊಂಡಿದ್ದರೆ  ಮತ್ತೆ ಕೆಲವರು ಯಾವುದಾದರೂ ಮರದಿಂದ ಈ ಬಣ್ಣ ಬಂದಿರಬಹುದು ಅಂತ ಊಹಿಸಿದ್ದರು . ಇದೇನಾದ್ರೂ ಭಾರತದಲ್ಲಿ ಆಗಿದ್ದಿದ್ದರೆ ನಮ್ಮ ಮಾಧ್ಯಮಗಳು ರಕ್ತಪಿಪಾಸು ಹಿಮ , ರಣಗೆಂಪು ಬಣ್ಣದ ಹಿಮದ ಹಿಂದಿದ್ಯಾ ಮನುಕುಲದ ನಾಶ‌..?  ಅಂತ ಬ್ರೇಕಿಂಗ್ ನ್ಯೂಸ್ ಮಾಡ್ತಿದ್ವು ...  ವೈಜ್ಞಾನಿಕವಾಗಿ ಇದು ಒಂದು ಅಲಾರ್ಮಿಂಗ್ ಅಥವಾ ಅಲರ್ಟ್ ಆಗಬೇಕಾದ ಬದಲಾವಣೆ.  ಈ ಹಿಂದೆ ಗ್ರೀನ್ ಲ್ಯಾಂಡ್ , ಅಂಟಾರ್ಟಿಕಾದ ಕೆಲ ಭಾಗ , ಕ್ಯಾಲಿಫೋರ್ನಿಯಾದಲ್ಲಿ ಕೂಡಾ ಈ ಹಿಂದಿನ ಕೆಲ ವರ್ಷಗಳಲ್ಲಿ ಕಾಣಿಸಿಕೊಂಡಿತ್ತು.  ಇದಕ್ಕೆ ಕಾರಣ ಒಂದು ಬಗೆಯ  ಶೈವಲ ( ಆಲ್ಗಾ ) ಅಥವಾ ಕೆರೆಯಲ್ಲಿ ಕಂಡುಬರುವ ಪಾಚಿ ಇದ್ದಂತೆ. Chlamydomonas nivelis  ಎಂಬ ಒಂದು ಆಲ್ಗೆ  .  ಹಸಿರು ಶೈವಲಗಳ ಗುಂಪಿಗೆ ಸೇರಿದ ಇದು chl...

ಆಷಾಢ

ಮುಗಿಯಲೊಲ್ಲದ ಆಷಾಢ ಸಾಲು ದೀಪದ ಕುಡಿಯು ತುಡಿಯುವುದು ನಿನಗಾಗಿ  ನಿನ್ನ ಕನವರಿಕೆಯ ಸುಳಿಯ ನಡುವೆ.. ದೀಪವಾರಿಸೋ ಇರುಳ ಒಳ ಉಸಿರು ಸುಮ್ಮನೇ  ತೋಳಲ್ಲಿ ನನ್ನ ಬಳಸು.. ಈ ಎಲ್ಲ ಹಂಬಲ ಎಷ್ಟು ಎಳಸು ನಿಟ್ಟುಸಿರಿಗಿಲ್ಲಿ ತುಯ್ಯುತಿದೆ ದೀಪ   ಕಣ್ಣ ಕವಿತೆ ಓದುವ ನೀ ಬರುವಷ್ಟರಲೇ  ದೀಪವಾರಿಸಿ ಬಿಡಬಹುದು ತಂಗಾಳಿ  ನೆಪ ಹುಡುಕಿ ಮಾತು ಮರೆಸಿ ರೆಪ್ಪೆಯ ಆಯದಲಿ ಮಲಗಿಸಿಬಿಡು  ಜಗತ್ತು ಹೊಟ್ಟೆ ಕಿಚ್ಚಿನಲಿ ಉರಿದು ಹೋಗಲಿ   ಕಿಡಿ ಹಾರುವುದೇ ನಿಕ್ಕಿ ಎಂದಮೇಲೆ  ಕುಡಿಹುಬ್ಬು ಹಾರಿಸಿ  ತೆಕ್ಕೆಗೆಳೆದುಕೊಳ್ಳೋದೂ ಅಪರಾಧವಲ್ಲ ಬಿಡು  ನಿದ್ರಿಸದ ರಾತ್ರಿಗಳ ಹಿತದ ಮುಗುಳು  ಇರುಳಿಂದ ಜಾರಿ ಕೆನ್ನೆ ಬಟ್ಟಲ ಒಲವ ಪಾಕದಲಿ ಬಿದ್ದ ಜಾ ಮೂನು ರುಚಿನೋಡಲು ದಕ್ಕಿದ್ದು ಬೆರಳಿಗಂಟಿದ ಬೆರಗು

ಅವನಿಗಷ್ಟೇ ಕೇಳಿಸಬೇಕಾದ ಮಾತು "

"ಅವನಿಗಷ್ಟೇ ಕೇಳಿಸಬೇಕಾದ ಮಾತು " ಸಾಗರದ ಅಲೆಯ ಕಪ್ಪೆಚಿಪ್ಪಿನ  ಮೇಲೆ ಮೀನ ಹೆಜ್ಜೆ ಹುಡುಕುವ ಹುಡುಗಾ ... ಕ್ಯಾಡ್ಬರಿಯ ಕೋಮಲತೆ ನಿನ್ನ ಪ್ರತಿ ನಗೆಯೊಳಗೂ ನನ್ನ ನೆನಪಿನ ಡಬ್ಬಿಯ ಸ್ವೀಟ್ ಮಿಲ್ಕೀ ಬಾರ್ ...  ...

ಇನ್ನಾದರೂ ತುಸು ಹೊತ್ತು

ಹುಡುಗಾ... ! ನಿನ್ನ ಹಚ್ಚಿಕೊಂಡಷ್ಟು ನನ್ನ ನಾ ಮೆಚ್ಚಿಕೊಂಡಿದ್ದರೆ ನಿನ್ನ ನಂಬಿದಷ್ಟು ನನ್ನ ಆಂತರ್ಯವ ನಾ ನಂಬಿದ್ದರೆ ನಿನ್ನ ನಗುವನ್ನ ಸಂಭ್ರಮಿಸುವಷ್ಟು ಹೊತ್ತು ನನಗು ನಗಲು ಬರುವುದೆಂದು ನನಗನಿಸಿ...

ಕನಸು ,ಇಳಿಜಾರು , ಬೆಂಕಿ , ಹಬ್ಬ

ಕನಸು ಇಳಿಜಾರು ಬೆಂಕಿ ಹಬ್ಬ . ರೆಕ್ಕೆ ಮೂಡದ ಪುಟ್ಟ ಕನಸಿನ ಮರಿಗಳಿಗೆ  ಬೆಚ್ಚನೆ ಕಾವು ಕೊಟ್ಟು  ಜಡಿ ಮಳೆಯಲಿ ತಾನು ಒದ್ದೆಯಾದ ಅಮ್ಮನಂತ  ಕವಿತೆ ಎದ್ದು ಬಂದಿತ್ತು . ಈ ಕವಲು ಹಾದಿಯ ಇಳಿಜಾರಿನಲ್ಲೊಂದ...

ಬೆಳಕಿಗೆ

ಪ್ರಿಯಾ ಹೀಗೆ ಒಡಲ ಕತ್ತಲ ಚೆಲ್ಲಿ ನೋವ ಅರಿವಿರದೇ ಬೆಳಕ ಹೆರಬೇಕಿದೆ ‌ನಾನು ಮುಷ್ಟಿ ಬಿಡಿಸಿ  ಬೆರಳ‌ ಎಣಿಸಿ‌ ಲೆಕ್ಕ ಹಾಕಿಡು ನೀನು ನಸುಕತ್ತಲಾಳದ ಸುಳಿಬೆಳಕ ಹೆರಬೇಕಿದೆ ನಾನು .‌ ಹೂ ಮೊಗವಾಡದ ಹುಸಿ ...

ಸೊಲ್ಲು

ಮುದ್ದು ಮನದ ಸಖಿಯ ಸೊಲ್ಲ ಕೇಳಲೊಲ್ಲ ಯಾಕೋ ಗೊಲ್ಲ ಆ ಬಿದಿರಿನ ಆಜನ್ಮ ಪುಣ್ಯ . ನಿನ್ನ ನವಿರು ಬೆರಳಲಿ ವಿರಮಿಸಿದೆ ಉಸಿರನಿತ್ತು ಕೊಳಲಾಗುವ ಪರಿ ಜೀವ ತರಿಸಿದೆ ಕಲ್ಲೊಳಗೆ ರಾಧೆಯಾಗುವ ತವಕದಿ ನಾನೂ‌ ನಿ...

ಮನನ

ಈ ಹೆಜ್ಜೆ ಕೆಸರಿನ ಕವಲು ದಾರಿಯಲೀಗ ನನ್ನದೇ ಒಂಟಿ ಹೆಜ್ಜೆಯ ಹುಡುಕಾಟ  ಪಾದಕಂಟಿದ ಬಿಳಲುಗಳಿಗೆ ಬೇರಿನ ಕನವರಿಕೆ  ನಾಭಿಯಿಂದೆದ್ದ ಸ್ವರಗಳ್ಯಾಕೊ ಕಿವಿಯ ಆಳವನು ತಲುಪುವಲ್ಲಿ ಸೋಲುತ್ತಾ ಮುಚ್ಚಿಟ್ಟ ಬೆರಳುಗಳ ಸಡಿಲಿಸಲು ಹೆಣಗುತಿದೆ ಕಾಲ   ನಿಲ್ಲುತಿಲ್ಲ ಆಲಾಪ ಸೊಲ್ಲ ಸವರುವ ನೆಪದ ತಂಗಾಳಿ ಸುಡುವುದನು ಬಿಟ್ಟಿಲ್ಲ . ಎದೆಗತ್ತಲ ಕಿರುದಾರಿಯಲೀಗ ಮಿಂಚುಹುಳದ ಎಡವು ನಡಿಗೆ ಹನಿಬೆಳಕ ಸೋಕಿನಲಿ ಕವಿತೆಗಾಗಿ ತಡವರಿಸುವ ಎಳಸು ಕೈ .. ಸುರಳಿಗುರುಳಲಿ ಜೋಲಿಯಾಡಿದ ಬದುಕು      ನೀಲ ಕಾವಳದ ಮುಸುಕು ಸರಿಸಿ ಬೆಚ್ಚಿ ಬಿದ್ದ ಅಕ್ಷರಗಳ ಹುಡುಕಿ ಹೊರಟ ಅಲೆಮಾರಿ  ಖಾಲಿ ಪುಟಗಳ ರಾಶಿ ನಡುವೆ ನಿರಾಳ ವೈರುಧ್ಯ . ಇರುಳ ಚಂದ್ರನ ಕರುಳಗಾಯಕೆ ಕಣ್ಣೀರಿಟ್ಟ ಮುಗಿಲು  ಬೊಗಸೆಯೊಳಗೆ ದಕ್ಕಿದ ಬೆಳದಿಂಗಳಲ್ಲೀಗ ಮೈ ಸುಟ್ಟ ಕಮಟು ‌... 

ಉಸಿರೂ ಮಾರಾಟಕ್ಕಿದೆ

ಊದುತ್ತಲೇ ಇದ್ದೇನೆ ಬದುಕನ್ನು ಹಾಗೆ ಹಾಗೆ ಗಾಳಿ ತೂರಿ ಒಳಹೋಗಿ ಅಷ್ಟುದ್ದ ಮೈಲುಗಲ್ಲನು ತಾಗುವ ಹಾಗೆ ಜಾತ್ರೆಯ ಜಂಗುಳಿಯೊಳಗೆ ಕಳೆದೋದ ಆಸೆಗಳ ಎದೆಗವಚಿಕೊಂಡು ನಕ್ಕ‌ ನಗೆಯ ಜೊತೆ ಉಸಿರೂ ಮಾರಾಟಕ್ಕ...

ಬೆಳಕ ಜಾಡು

ಬೆಳಕ ಜಾಡು ಕತ್ತಲ ಮರಿಹೂವನ್ನು ಆರಿಸುತ್ತಾ ಬಂದವಳು ಬೆಳಕ ಕವಲುದಾರಿಗೆ ಹೆದರಿದ ಎಳೆಗೆಂಪು ಹೂ ಹಸಿರುಗತ್ತಲಲಿ ಸಾಗುವ ಆರು ಚಕ್ರದ ಆಮೆಗಾಲಿನ ನಡಿಗೆ ... ಬೇರಿಗಿಳಿವ ನೋವಿನ ಹನಿಗಳೊಳಗೆ ಗಾಯಗೊಂಡ ಗರ...

ವನಸುಂದರಿ

*ವನ ಸುಂದರಿ* ವೈಶಿಷ್ಟ್ಯಗಳಿಗೆ ಮತ್ತೊಂದು ಹೆಸರು ಪ್ರಕೃತಿಯೆ ಇರಬೇಕು . ಅದರಲ್ಲೂ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಅನನ್ಯ ವನರಾಶಿಯು ತನ್ನ ಗರ್ಭದೊಳಗೆ ಅಡಗಿಸಿಕೊಂಡ ಜೀವವೈವಿಧ್ಯ ಅತ್ಯಪೂರ್ವ. ಅದೇ ಸಾಲ...

ಶೀರ್ಷಿಕೆ ನೀವೆ ಕೊಟ್ಟು ಬಿಡಿ

ಗುಂಡು ಸಿಡಿವ ಬಂದೂಕಿನಲಿ ಪಾರಿವಳ ಗೂಡು ಕಟ್ಟಬಾರದೇ ಎಂದು ಸೈನಿಕನ ಮುದ್ದು ಮಗು ಪ್ರಾರ್ಥಿಸಿತ್ತು ಪುಟ್ಟ ಕಂಗಳಿಂದ ಉದುರಿದ ಹನಿ ತಂಗಾಳಿಯನೂ ಬಿಸಿಯಾಗಿಸಿತ್ತು . ಇರಿದ ಚೂರಿಯ ಮೇಲಿನ ರಕ್ತದ ಕಲೆಯಲ...

ಗೊಲ್ಲನ ನೆನಪಲ್ಲಿ

ಜುಗಲ್ಬಂದಿ ಹಣತೆ ಹಚ್ಚಿಟ್ಟ ಮಾಗಿ ಚಳಿಗೂ ಬೆಚ್ಚಗಿನ ನೆನಪು ಕುಹುಕವಾಡುತ್ತದೆ ವಿನಾಕಾರಣ ಖ್ಯಾತೆ ತೆಗಿಯುವ ಮಂದಹಾಸ ಕವಲೊಡೆಯುವುದೇ ಆಗ ಮುದ್ದು ಸುರಿವ ಅವನ ಕನವರಿಕೆ ಶುರುವಾದಾಗ ಶೀತಲ ಗಾಳಿ ಯೂ ಬ...

I am not that woman . ಅನುವಾದ

ಮೂಲ : ಕೀಶ್ವರ್ ನಯೀದ್ ಪಾಕಿಸ್ತಾನದ ಕವಯಿತ್ರಿ ಪದ್ಯ : I am not that woman ನಾನು ಅವಳಲ್ಲ . ನಾನು ಆ ಹೆಣ್ಣಲ್ಲ . ನಿನಗೆ ಸಾಕ್ಸ್  ಶೂ ಮಾರುವ ಅವಳಲ್ಲ . ನೆನಪಿಸಿಕೊ ನನ್ನ , ನಾನು ಅವಳೇ ನೀನು ತಂಗಾಳಿಯಂತೆ ಸ್ವಚ್ಛಂದ ವಿಹರಿಸ...

ಹೀಗೊಂದು ಜುಗಲ್ಬಂದಿ

ನನ್ನ ಹೊಸತನದ ಪುರಾವೆಗೆ ನಿನ್ನೆ ಕಂಡ ಕನಸು  ಉತ್ತಮ ಉದಾಹರಣೆಯಾಗಿದೆ ಅವಳಳೊಂದಿಷ್ಟು ಕನಿಷ್ಟ ಅನುಮೋದನೆಗಳ ಕೇಳಬೇಕಾದ ನನ್ನ ಉಮೇದು ಈಡೇರಿದ್ದು ಚಂದ್ರನ ಉಪಸ್ಥಿಯ ರಾತ್ರಿಯಲ್ಲೇ ಸುಳ್ಳು ಮಂಟಪಕ್...

ವಾಸ್ತವ

ಕುವೆಂಪುರವರು ಬರೆದ ಮೀನಾಕ್ಷಿ ಮನೆ ಮೇಷ್ಟ್ರು ಅನ್ನೋ ಒಂದು ಕಥೆಯಲ್ಲಿ ಮೇಷ್ಟರು ತನ್ನ ಊಹಾ ಪ್ರಪಂಚದಲ್ಲಿ ಮೀನಾಕ್ಷಿಯ ಬಗ್ಗೆ ಇಲ್ಲದ ಕಲ್ಪನೆ ಕಟ್ಟಿಕೊಂಡು ಕೊನೆಗೆ ಅದು ನೆರವೇರದಿದ್ದಾಗ ಆಕೆಯ ಗಂಡ...

ಶಿಕಾರಿ

ಕೃತಿ ; ಶಿಕಾರಿ ನಾನು ಓದಿರುವ ಒಂದು ಚಂದದ ಕೃತಿ . ವಿಜ್ಞಾನದ ವಿದ್ಯಾರ್ಥಿ ಆದ ನನಗೆ ಇಷ್ಟ ಆಯ್ತು. ನನಗೆ ತೀರಾ ಗಂಭೀರ ಅನಿಸುವಂತ ಕೃತಿಗಳು ಆ ಕ್ಷಣಕೆ ರುಚಿಸದೇ  ಇದ್ದರೂ ಸಹ ಮುಗಿಸಲೇಬೇಕು ಎಂಬ ಜಿದ್ದಿನಿ...