ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಕವಿತೆ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕಡಲು

ಬಾನಂಗಳದ ತುಂಬೆಲ್ಲ‌ ಯಾರೋ  ಚಿತ್ತಾರ ಬಿಡಿಸಿಟ್ಟರು ಎವೆಯಿಕ್ಕದೆ ನೋಡಿ ಕಣ್ಣನೋಯಿಸಿಕೊಂಡೆನಷ್ಟೇ ಒಮ್ಮೊಮ್ಮೆ ಬದುಕೂ ಕೂಡ ಖಾಲಿಯೆಂತೆನಿಸುವುದು ಥೇಟು ನೀಲಿ ಬಾನಂತೆ. ಬೆನ್ನ ಹುರಿಯ ನೋವಿಗೆ ಬೆಚ್ಚಗಿನ ಮಜ್ಜನವೊಂದಾಗಲೇಬೇಕು ಮೈಸೆಡವಿಗೆ ಒಂದಷ್ಟು ಅತೃಪ್ತ ಸುಖ. ನೆತ್ತಿಮೇಲಿನ ನೀರಿಗೆ ಪಾದ ನೋಡುವ ಹುರುಪಿದೆ ನಡುವೆ ನಡೆವ ಸವರಿಕೆಗೆಲ್ಲ ಹಾದರದ ಮೆಲುಕೇ?. ಜಗಜ್ಜಾಹಿರಾಗಲಿ ಎಲ್ಲವೂ ಮುಚ್ಚಿಡುವುದೇನಿದೆ ಜಗದಿ ನಾಲ್ಕು ಗೋಡೆಯೊಳಗಿನದ್ದು ಒಳಗೇ ಇರಲಿ ಕೆಲವೊಂದು ಮಾತ್ರ  ಬಯಲಾಗದಿರಲಿ. ಈಗಷ್ಟೇ ಯಾರೋ ಬೆನ್ನಿಗಂಟಿಕುಳಿತರು ಬೆಚ್ಚಗಾಯಿತಷ್ಟೇ ದೇಹ ಒಂದೈದು ನಿಮಿಷ ಮತ್ತದೇ ಖಾಲಿತನದ ಪರಮಾವಧಿ ಮತ್ತೆ ತುಂಬಿಕೊಳಲು ಕಾಯಬೇಕು. ಕಡಲು😍

ಆಷಾಢ

ಮುಗಿಯಲೊಲ್ಲದ ಆಷಾಢ ಸಾಲು ದೀಪದ ಕುಡಿಯು ತುಡಿಯುವುದು ನಿನಗಾಗಿ  ನಿನ್ನ ಕನವರಿಕೆಯ ಸುಳಿಯ ನಡುವೆ.. ದೀಪವಾರಿಸೋ ಇರುಳ ಒಳ ಉಸಿರು ಸುಮ್ಮನೇ  ತೋಳಲ್ಲಿ ನನ್ನ ಬಳಸು.. ಈ ಎಲ್ಲ ಹಂಬಲ ಎಷ್ಟು ಎಳಸು ನಿಟ್ಟುಸಿರಿಗಿಲ್ಲಿ ತುಯ್ಯುತಿದೆ ದೀಪ   ಕಣ್ಣ ಕವಿತೆ ಓದುವ ನೀ ಬರುವಷ್ಟರಲೇ  ದೀಪವಾರಿಸಿ ಬಿಡಬಹುದು ತಂಗಾಳಿ  ನೆಪ ಹುಡುಕಿ ಮಾತು ಮರೆಸಿ ರೆಪ್ಪೆಯ ಆಯದಲಿ ಮಲಗಿಸಿಬಿಡು  ಜಗತ್ತು ಹೊಟ್ಟೆ ಕಿಚ್ಚಿನಲಿ ಉರಿದು ಹೋಗಲಿ   ಕಿಡಿ ಹಾರುವುದೇ ನಿಕ್ಕಿ ಎಂದಮೇಲೆ  ಕುಡಿಹುಬ್ಬು ಹಾರಿಸಿ  ತೆಕ್ಕೆಗೆಳೆದುಕೊಳ್ಳೋದೂ ಅಪರಾಧವಲ್ಲ ಬಿಡು  ನಿದ್ರಿಸದ ರಾತ್ರಿಗಳ ಹಿತದ ಮುಗುಳು  ಇರುಳಿಂದ ಜಾರಿ ಕೆನ್ನೆ ಬಟ್ಟಲ ಒಲವ ಪಾಕದಲಿ ಬಿದ್ದ ಜಾ ಮೂನು ರುಚಿನೋಡಲು ದಕ್ಕಿದ್ದು ಬೆರಳಿಗಂಟಿದ ಬೆರಗು

ಮನನ

ಈ ಹೆಜ್ಜೆ ಕೆಸರಿನ ಕವಲು ದಾರಿಯಲೀಗ ನನ್ನದೇ ಒಂಟಿ ಹೆಜ್ಜೆಯ ಹುಡುಕಾಟ  ಪಾದಕಂಟಿದ ಬಿಳಲುಗಳಿಗೆ ಬೇರಿನ ಕನವರಿಕೆ  ನಾಭಿಯಿಂದೆದ್ದ ಸ್ವರಗಳ್ಯಾಕೊ ಕಿವಿಯ ಆಳವನು ತಲುಪುವಲ್ಲಿ ಸೋಲುತ್ತಾ ಮುಚ್ಚಿಟ್ಟ ಬೆರಳುಗಳ ಸಡಿಲಿಸಲು ಹೆಣಗುತಿದೆ ಕಾಲ   ನಿಲ್ಲುತಿಲ್ಲ ಆಲಾಪ ಸೊಲ್ಲ ಸವರುವ ನೆಪದ ತಂಗಾಳಿ ಸುಡುವುದನು ಬಿಟ್ಟಿಲ್ಲ . ಎದೆಗತ್ತಲ ಕಿರುದಾರಿಯಲೀಗ ಮಿಂಚುಹುಳದ ಎಡವು ನಡಿಗೆ ಹನಿಬೆಳಕ ಸೋಕಿನಲಿ ಕವಿತೆಗಾಗಿ ತಡವರಿಸುವ ಎಳಸು ಕೈ .. ಸುರಳಿಗುರುಳಲಿ ಜೋಲಿಯಾಡಿದ ಬದುಕು      ನೀಲ ಕಾವಳದ ಮುಸುಕು ಸರಿಸಿ ಬೆಚ್ಚಿ ಬಿದ್ದ ಅಕ್ಷರಗಳ ಹುಡುಕಿ ಹೊರಟ ಅಲೆಮಾರಿ  ಖಾಲಿ ಪುಟಗಳ ರಾಶಿ ನಡುವೆ ನಿರಾಳ ವೈರುಧ್ಯ . ಇರುಳ ಚಂದ್ರನ ಕರುಳಗಾಯಕೆ ಕಣ್ಣೀರಿಟ್ಟ ಮುಗಿಲು  ಬೊಗಸೆಯೊಳಗೆ ದಕ್ಕಿದ ಬೆಳದಿಂಗಳಲ್ಲೀಗ ಮೈ ಸುಟ್ಟ ಕಮಟು ‌... 

ಬೆಳಕ ಜಾಡು

ಬೆಳಕ ಜಾಡು ಕತ್ತಲ ಮರಿಹೂವನ್ನು ಆರಿಸುತ್ತಾ ಬಂದವಳು ಬೆಳಕ ಕವಲುದಾರಿಗೆ ಹೆದರಿದ ಎಳೆಗೆಂಪು ಹೂ ಹಸಿರುಗತ್ತಲಲಿ ಸಾಗುವ ಆರು ಚಕ್ರದ ಆಮೆಗಾಲಿನ ನಡಿಗೆ ... ಬೇರಿಗಿಳಿವ ನೋವಿನ ಹನಿಗಳೊಳಗೆ ಗಾಯಗೊಂಡ ಗರ...

ಶೀರ್ಷಿಕೆ ನೀವೆ ಕೊಟ್ಟು ಬಿಡಿ

ಗುಂಡು ಸಿಡಿವ ಬಂದೂಕಿನಲಿ ಪಾರಿವಳ ಗೂಡು ಕಟ್ಟಬಾರದೇ ಎಂದು ಸೈನಿಕನ ಮುದ್ದು ಮಗು ಪ್ರಾರ್ಥಿಸಿತ್ತು ಪುಟ್ಟ ಕಂಗಳಿಂದ ಉದುರಿದ ಹನಿ ತಂಗಾಳಿಯನೂ ಬಿಸಿಯಾಗಿಸಿತ್ತು . ಇರಿದ ಚೂರಿಯ ಮೇಲಿನ ರಕ್ತದ ಕಲೆಯಲ...

ನಿರುತ್ತರಿ

ಇಲ್ಲಿ , ಅಪ್ಪನ ಮಡಿಲಲಿ ಬುದ್ಧನ ನಗುವನೂ ಮೀರಿಸುತ್ತಾ ಮೂರುತಿಂಗಳ ಮಗಳು ಸುಖ ನಿದ್ದೆಯಲಿದ್ದಾಳೆ ... ಮುಗ್ಧ ಮಗಳ ಮುಗುಳು ನಗು ಅಪ್ಪನನ್ನೂ ಬೆಚ್ಚಗಿಟ್ಟಿದೆ... ಅಲ್ಲಿ , ಅಪ್ಪನ ಮುಖವನೇ ನೋಡದ ಹುಡುಗಿಯ ಕಣ...

ಮುಖವಾಡ

ಯಾವುದೋ ಊರಿನ ಸಂತೆ ನೆರೆದಿತ್ತು ಎಲ್ಲೆಡೆಯೂ ಗದ್ದಲ ಹಣ್ಣಿನಂಗಡಿ,  ತರಕಾರಿಯಂಗಡಿಗಳ ನಡುವಲ್ಲಿ ಜನರಿಂದ ಗಿಜಿಗುಡುವ ಒಂದು ಅಂಗಡಿ ಅದೇ ಮುಖವಾಡದಂಗಡಿ ಮುಖವಾಡ,  ಮುಖವಾಡ,  ತನ್ನತನವನೇ ಮರೆಯಿಸುವ ...

ಈ ನೆನಪುಗಳೇ ಹೀಗೆ..

ನೆನಪಿನ ಕಂತೆಯದು ಬಿಚ್ಚಿದಷ್ಟೂ ಗೋಜಲು ಅನುಭವಕೆ ಒಂದಷ್ಟು ಫಸಲು ಭಾವುಕತೆಗೆ ಒಂದಷ್ಟು ನೆರಳು ಮನಸೆಂಬ ಆಭರಣದ ಹೊಳೆವ ಹರಳು ಇದು ತಪ್ಪು ಇದು ಸರಿ ಎಂದು ತಿಳಿಸಿ ತಿದ್ದುವ ಕರುಳು ಅದು ಅನುಭಾವದ ಒರಳ...

ಸಮಾಧಿ .

ಸಮಾಧಿ ಕಟ್ಟಿ ಬಿಟ್ಟಿದ್ದೇನೆ ನನ್ನೊಳಗಿನ ಕನಸುಗಳಿಗೆ ..----------- ಮುದ್ದು ಕೂಸಿನ ತರದ ಕನಸುಗಳವು ಅದೆಷ್ಟು ಪ್ರೀತಿಸಿದ್ದೆ ಅವುಗಳನ್ನು ಇಂದು ಪ್ರತಿಯೊಂದೂ ಕಲ್ಲಿಗೆ ಕುಕ್ಕಿ  ಕೊಲೆಗೈಯಲ್ಪಟ್ಟಿವೆ... ಕೊಲ...