ಮುಗಿಯಲೊಲ್ಲದ ಆಷಾಢ
ಸಾಲು ದೀಪದ ಕುಡಿಯು ತುಡಿಯುವುದು ನಿನಗಾಗಿ
ನಿನ್ನ ಕನವರಿಕೆಯ ಸುಳಿಯ ನಡುವೆ.. ದೀಪವಾರಿಸೋ ಇರುಳ ಒಳ ಉಸಿರು ಸುಮ್ಮನೇ ತೋಳಲ್ಲಿ ನನ್ನ ಬಳಸು..
ಈ ಎಲ್ಲ ಹಂಬಲ ಎಷ್ಟು ಎಳಸು
ನಿಟ್ಟುಸಿರಿಗಿಲ್ಲಿ ತುಯ್ಯುತಿದೆ ದೀಪ
ಕಣ್ಣ ಕವಿತೆ ಓದುವ ನೀ ಬರುವಷ್ಟರಲೇ
ದೀಪವಾರಿಸಿ ಬಿಡಬಹುದು ತಂಗಾಳಿ
ನೆಪ ಹುಡುಕಿ ಮಾತು ಮರೆಸಿ
ರೆಪ್ಪೆಯ ಆಯದಲಿ ಮಲಗಿಸಿಬಿಡು
ಜಗತ್ತು ಹೊಟ್ಟೆ ಕಿಚ್ಚಿನಲಿ ಉರಿದು ಹೋಗಲಿ
ಕಿಡಿ ಹಾರುವುದೇ ನಿಕ್ಕಿ ಎಂದಮೇಲೆ ಕುಡಿಹುಬ್ಬು ಹಾರಿಸಿ ತೆಕ್ಕೆಗೆಳೆದುಕೊಳ್ಳೋದೂ ಅಪರಾಧವಲ್ಲ ಬಿಡು
ನಿದ್ರಿಸದ ರಾತ್ರಿಗಳ ಹಿತದ ಮುಗುಳು
ಇರುಳಿಂದ ಜಾರಿ ಕೆನ್ನೆ ಬಟ್ಟಲ ಒಲವ ಪಾಕದಲಿ ಬಿದ್ದ ಜಾ ಮೂನು
ರುಚಿನೋಡಲು ದಕ್ಕಿದ್ದು ಬೆರಳಿಗಂಟಿದ ಬೆರಗು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ