ವಿಷಯಕ್ಕೆ ಹೋಗಿ

ವಾಟರ್ ಮೆಲನ್ ಹಿಮ

ವಾಟರ್ ಮೆಲನ್ ಹಿಮ 

ಹಿಮ ಎಂದರೆ ಅಚ್ಚ ಬಿಳಿ
ಹಿಮ ಎಂದರೆ ಶುಭ್ರ 
ಹತ್ತಿಯ ಹಾಗೆ , ಹಾಲಿನಹಾಗೆ ಪರ್ವತಗಳನ್ನು ಆವರಿಸಿರುವ ಹಿಮವನ್ನು ನೋಡಿರುತ್ತೇವೆ. 

ಪಿಂಕು ಪಿಂಕು ಬಣ್ಣದ ಹಿಮದ ಬಗ್ಗೆ ಕೇಳಿದ್ದೀರಾ‌..? 

ಯುರೋಪಿನ ಆಲ್ಪ್ಸ್ ಪರ್ವತ ಶ್ರೇಣಿಯಲ್ಲಿ‌  ಹಿಮ ತಿಳಿಗುಲಾಬಿ ಬಣ್ಣಕ್ಕೆ ಬದಲಾಗಿದೆ.  ಎಷ್ಟು ಚಂದ ಅಲ್ವ... ಗುಲಾಬಿ ಹಿಮ 
ಇದಕ್ಕೆ ಕಾರಣವೇನು ಅಂತ ಹುಡುಕ್ತಾ ಹೋದಾಗ ಮೊದಲಿಗೆ ಸ್ಥಳೀಯರು ಕಬ್ಬಿಣದ ಆಕ್ಸೈಡ್ ಹಿಮದೊಂದಿಗೆ ಬೆರೆತಿರಬಹುದು ಅಂದುಕೊಂಡಿದ್ದರೆ  ಮತ್ತೆ ಕೆಲವರು ಯಾವುದಾದರೂ ಮರದಿಂದ ಈ ಬಣ್ಣ ಬಂದಿರಬಹುದು ಅಂತ ಊಹಿಸಿದ್ದರು .

ಇದೇನಾದ್ರೂ ಭಾರತದಲ್ಲಿ ಆಗಿದ್ದಿದ್ದರೆ ನಮ್ಮ ಮಾಧ್ಯಮಗಳು ರಕ್ತಪಿಪಾಸು ಹಿಮ , ರಣಗೆಂಪು ಬಣ್ಣದ ಹಿಮದ ಹಿಂದಿದ್ಯಾ ಮನುಕುಲದ ನಾಶ‌..? 
ಅಂತ ಬ್ರೇಕಿಂಗ್ ನ್ಯೂಸ್ ಮಾಡ್ತಿದ್ವು ... 

ವೈಜ್ಞಾನಿಕವಾಗಿ ಇದು ಒಂದು ಅಲಾರ್ಮಿಂಗ್ ಅಥವಾ ಅಲರ್ಟ್ ಆಗಬೇಕಾದ ಬದಲಾವಣೆ. 
ಈ ಹಿಂದೆ ಗ್ರೀನ್ ಲ್ಯಾಂಡ್ , ಅಂಟಾರ್ಟಿಕಾದ ಕೆಲ ಭಾಗ , ಕ್ಯಾಲಿಫೋರ್ನಿಯಾದಲ್ಲಿ ಕೂಡಾ ಈ ಹಿಂದಿನ ಕೆಲ ವರ್ಷಗಳಲ್ಲಿ ಕಾಣಿಸಿಕೊಂಡಿತ್ತು. 

ಇದಕ್ಕೆ ಕಾರಣ ಒಂದು ಬಗೆಯ  ಶೈವಲ ( ಆಲ್ಗಾ ) ಅಥವಾ ಕೆರೆಯಲ್ಲಿ ಕಂಡುಬರುವ ಪಾಚಿ ಇದ್ದಂತೆ. Chlamydomonas nivelis  ಎಂಬ ಒಂದು ಆಲ್ಗೆ  .  ಹಸಿರು ಶೈವಲಗಳ ಗುಂಪಿಗೆ ಸೇರಿದ ಇದು chlorophyta . 

ಇದರಲ್ಲಿ ಹಿಮವನ್ನು ತಿಳಿಗುಲಾಬಿ ಬಣ್ಣಕ್ಕೆ ತಿರುಗಿಸುವ ಕ್ಯಾರೋಟಿನಾಯ್ಡ್ ನ‌ ಅಂಶವಿದೆ . ಕ್ಯಾರೇಟ್ , ಬೆಣ್ಣೆ ಹಣ್ಣು , ಪಪಾಯದಲ್ಲಿ ಇದ್ದಂತೆ . ಈ ಕ್ಯಾರೋಟಿನಾಯ್ಡ್  ಆ ಆಲ್ಗಾದ ದೇಹವನ್ನು ಬಿಸಿಲಿನಿಂದ ,  ರೇಡಿಯೇಷನ್ ಇಂದ ರಕ್ಷಿಸುವ ಕಾರ್ಯ ಮಾಡುತ್ತವೆ. 

ಈ ಆಲ್ಗಾ ಗಳು ಸಿಹಿನೀರು ಮತ್ತು  ಉಪ್ಪು ನೀರು ಎರಡರಲ್ಲೂ ಕಾಣಿಸಿಕೊಳ್ಳುತ್ತವೆ ಹೆಚ್ಚಾಗಿ ನಿಂತ ನೀರಲ್ಲಿ ಇರುತ್ತವೆ.   30mm ನಷ್ಟು  ಇರುವ ಇವು ಅಂದಾಜು ನಮ್ಮ  ಕೆಂಪು ರಕ್ತದ ಕಣದಷ್ಟೇ ದೊಡ್ಡದು. 
ಒಂದು ಚಮಚ ಹಿಮದಲ್ಲಿ ಮಿಲಿಯನ್ ಗಟ್ಟಲೇ ಆಲ್ಗೇ ಇರುತ್ತವೆ‌ ‌‌‌.

ಇನ್ನೂ ಮಜಾ ಅಂದರೆ ಈ ಆಲ್ಗೆಗೆ ಈ ಹೆಸರ್ಯಾಕೆ ಬಂತು ಅಂತ... 
ನೋಡಲು ಪಿಂಕ್ ಬಣ್ಣ ಇರುವುದರಿಂದ ಕಲ್ಲಂಗಡಿ ಒಳಭಾಗ ನೆನಪಿಸುತ್ತದೆ ಮತ್ತೆ  ಇದರ ವಾಸನೆ ಕೂಡಾ ಕಲ್ಲಂಗಡಿ ಹಣ್ಣಿನ ತರ ಇರೊದು..  

ಹಿಮದ ಸಾಂದ್ರತೆ ಹೆಚ್ಚಿದಂತೆ ಈ ಆಲ್ಗೆಯ ಕಲರ್ ಕೂಡಾ ಹೆಚ್ಚುತ್ತದೆ. ಜೊತೆಗೆ ಹಿಮದ ಕೆಲ ತಗ್ಗುಗಳಲ್ಲಿ ರಾಶಿ ರಾಶಿ ಆಲ್ಗೆಗಳು ಸೇರಿ  ಸನ್ ಕಪ್ ಅನ್ನು  ರೂಪಿಸುತ್ತವೆ.  

ಹಿಮದ ಬಿಳಿಬಣ್ಣ ಸೂರ್ಯನಿಂದ ಬಂದ ಬೆಳಕು ಶಾಖವನ್ನು ವಾಪಸ್ ಪ್ರತಿಫಲಿಸಿ ಕಳಿಸುವುದರಿಂದ ತಣ್ಣನೆಯ ಅತಿ ಕಡಿಮೆ ತಾಪದ ವಾತಾವರಣವನ್ನು  ಸರಿದೂಗಿಸಿಕೊಂಡು ಹೋಗುತ್ತಿತ್ತು . 

ಈಗ ಹಿಮದ ಬಣ್ಣ ಬದಲಾದಂತೆ ಸೂರ್ಯನಿಂದ ಬರುವ ಬೆಳಕು ಮತ್ತು ಶಾಖವನ್ನು ಹೀರಿಕೊಂಡು  ಹಿಮವನ್ನು ಕರಗಿಸುತ್ತಾ ಹಿಮನದಿಗಳಿಗೆ ಹರಿವನ್ನು ಹೆಚ್ಚಿಸುತ್ತಿದೆ.  ಇದು ಬದಲಾಗುತ್ತಿರುವ ವಾತಾವರಣದ , ಪರಿಸರದ ಬಗ್ಗೆ ಸೂಚ್ಯವಾಗಿ ಹೇಳುತ್ತಿದ್ಯಾ ಅನ್ನುವ ಚರ್ಚೆ ಕೂಡಾ ನಡೆಯುತ್ತಿದೆ. 

ಹೇಗೆಂದರೆ  ಒಂದು ವಾದದ ಪ್ರಕಾರ ಚಳಿಗಾಲ - ಬೇಸಿಗೆಯ ಸಂಗಮಕಾಲದಲ್ಲಿ ಇದು ಕಂಡು ಬಂದಿದೆ. ಇದುವರೆಗೂ ಈ ಆಲ್ಗೆಗಳು ಇದ್ದದಾದರೂ ಎಲ್ಲಿ ಎಂಬ ಪ್ರಶ್ನೆ .. 

ಹಿಮದಲ್ಲಿ ಇದ್ದ ಆಲ್ಗೆಗಳು  
ಜಾಗತಿಕ ತಾಪಮಾನದ ಕಾರಣಕ್ಕೆ ಬೃಹತ್ ಪ್ರಮಾಣದಲ್ಲಿ ಹಿಮ ಕರಗಿರುವುದಕ್ಕೆ ಆಚೆ ಬಂದು ನಂತರ ಹೆಚ್ಚಿನ ಪ್ರಮಾಣದಲ್ಲಿ ಹಿಮವನ್ನು ಕರಗಿಸಿ ಹಿಮನದಿಗಳ ಹರಿವನ್ನು ಹೆಚ್ಚಿಸುತ್ತಿವೆ. ಈ ಮೂಲಕ ಸಮುದ್ರದ ಮಟ್ಟದ ಹೆಚ್ಚಳಕ್ಕೆ ಒಂದು  ಸೂಕ್ಷ್ಮ ಕಾರಣ ಕೂಡಾ 

ಕೇವಲ ಒಂದು ಡಿಗ್ರಿ ಸೆಲ್ಸಿಯಸ್  ತಾಪಮಾನ ಹೆಚ್ಚಾದರೂ ಸಹ ಇಂತಹ ಅದೆಷ್ಟೋ ಜೀವಿಗಳು ಆಕ್ಟಿವೇಟ್ ಆಗಬಹುದು. 
ಹಾಗಂತ ಈ ಆಲ್ಗೆಗಳೇನೂ ಕೆಟ್ಟದ್ದಲ್ಲ 
ಇವು ಜಲವಾಸಿ ಆಹಾರ ಸರಪಳಿಯಲ್ಲಿ ಪ್ರಮುಖ ಉತ್ಪಾದಕ. 

ನಮ್ಮ ಸುತ್ತಲಿನ ಬದಲಾವಣೆಗಳನ್ನ ಸೂಕ್ಷ್ಮವಾಗಿ ಗಮನಿಸಿದರೆ ಮುಂದಾಗುವ ಅಪಾಯಗಳಿಂದ ಎಚ್ಚೆತ್ತುಕೊಳ್ಳಬಹುದೇನೋ 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಕಲ್ಕಿ ಬಗೆಗೆ ಒಂದು ಅಭಿಪ್ರಾಯ

ಯಾರವನಲ್ಲಿ ದೂರದಲಿ... ಧಾವಿಸಿ ಬರುತಿಹ ಕ್ರೌರ್ಯದಲಿ... ಹಸಿವೆ....ದಾಹ....ರಕ್ತಾ..... ಇನ್ನೂ ಹಸಿವೆ    ಬಡವರ ಹೊಟ್ಟೆಯ ಬೆಂಕಿಯ ಹಸಿವೆ ಇನ್ನೂ ದಾಹ    ಬಡವರ ಗಂಟಲ ಬೇಗೆಯ ದಾಹ... ತುಂಬದೋ ಹೊಟ್ಟೆ ...         ಈ ಸಾಲುಗಳ...

ವಾಸ್ತವ

ಕುವೆಂಪುರವರು ಬರೆದ ಮೀನಾಕ್ಷಿ ಮನೆ ಮೇಷ್ಟ್ರು ಅನ್ನೋ ಒಂದು ಕಥೆಯಲ್ಲಿ ಮೇಷ್ಟರು ತನ್ನ ಊಹಾ ಪ್ರಪಂಚದಲ್ಲಿ ಮೀನಾಕ್ಷಿಯ ಬಗ್ಗೆ ಇಲ್ಲದ ಕಲ್ಪನೆ ಕಟ್ಟಿಕೊಂಡು ಕೊನೆಗೆ ಅದು ನೆರವೇರದಿದ್ದಾಗ ಆಕೆಯ ಗಂಡ...

ಮುಖವಾಡ

ಯಾವುದೋ ಊರಿನ ಸಂತೆ ನೆರೆದಿತ್ತು ಎಲ್ಲೆಡೆಯೂ ಗದ್ದಲ ಹಣ್ಣಿನಂಗಡಿ,  ತರಕಾರಿಯಂಗಡಿಗಳ ನಡುವಲ್ಲಿ ಜನರಿಂದ ಗಿಜಿಗುಡುವ ಒಂದು ಅಂಗಡಿ ಅದೇ ಮುಖವಾಡದಂಗಡಿ ಮುಖವಾಡ,  ಮುಖವಾಡ,  ತನ್ನತನವನೇ ಮರೆಯಿಸುವ ...