ವಿಷಯಕ್ಕೆ ಹೋಗಿ

ನೀಲಿ ನಾಯಿ

ನಾಯಿ ನೀಲಿಯಾದ ಕಥೆ

ಪ್ರಕೃತಿ ಎಲ್ಲವನೂ ಸಹಿಸ್ತಾಳೆ ಅಂತ ನಾವು ಹಾಳುಗೆಡುವುದರಲ್ಲಿ ನಿಸ್ಸೀಮರು. ಲಾಭದ ಆಸೆಗೆ ಅಳತೆ ಮೀರಿ ಕಾರ್ಖಾನೆಗಳಿಗೆ ಪರವಾನಗಿ ನೀಡುವ ಸರ್ಕಾರದ ಸಂಸ್ಥೆಗಳಿಗೆ ಮುಂದಾಗುವ ಪರಿಣಾಮಗಳ ಅರಿವಿಲ್ಲ . ಕಠಿಣ ಕಾನೂನುಗಳು ಬರಬೇಕಿದೆ. 

ಈಗ ಹೇಳೋಕ್ ಹೊರಟಿರೋದು ಮುಂಬೈನ ಬೀದಿನಾಯಿಗಳು ನೀಲಿಯಾದ ಕಥೆಯನ್ನ. 
ಮುಂಬೈನ ತಲೋಜಾ ಜಿಲ್ಲೆಯ ಕೈಗಾರಿಕಾ ಪ್ರದೇಶದಲ್ಲಿ  ಬೀದಿನಾಯಿಗಳು ನೀಲಿ ಬಣ್ಣಕ್ಕೆ ತಿರುಗಿವೆ. ತುಸು ಲಕ್ಷ್ಯ ಕೊಟ್ಟು ಕೇಳಿಸಿಕೊಳ್ಳಬೇಕಿದೆ..

ಈ ಕೈಗಾರಿಕಾ ಪ್ರದೇಶ ಒಂದರಲ್ಲೇ ಸಾವಿರಕ್ಕೂ ಅಧಿಕ ಔಷಧ ತಯಾರಿಕಾ ಕಂಪನಿಯ ಕಾರ್ಖಾನೆಗಳು , ಬಣ್ಣವನ್ನು ಉತ್ಪಾದಿಸೋ ಕಾರ್ಖಾನೆಗಳಿಗೆ ,ಕೆಮಿಕಲ್ ಕಾರ್ಖಾನೆಗಳಿಗೆ ಅವಕಾಶ ನೀಡಿದೆ . ಈ ಕೈಗಾರಿಕೆಗಳ ವಿಷಯುಕ್ತ ತ್ಯಾಜ್ಯ ಸೇರುವುದು ಅಲ್ಲಿಯೇ ಸಮೀಪದ ಕಸಾಡಿ ಎಂಬ ನದಿಗೆ . 

ಈ ನದಿಗೆ ಕೈಗಾರಿಕೆಗಳಿಂದ ಬರುವ ಹಾನಿಕಾರಕ ಸೈನೈಡ್ , ಹೈಡ್ರೋಕಾರ್ಬನ್ ,  ಇಂಡಿಗೋ , ಆಂಥ್ರಾಕ್ವಿನೋನ್,  ಸಲ್ಫರ್ , ನೈಟ್ರೋಜನ್  ಮುಂತಾದ ಆಸಿಡ್ ಡೈ ಗಳನ್ನು ಯಾವ ಶುದ್ಧಿಕರಣ ಇಲ್ಲದೇ ಬಿಡಲಾಗಿದೆ. ಜೊತೆ ಅತಿ ಹೆಚ್ಚು ಪ್ರಮಾಣದ ಕ್ಲೋರೈಡ್ ಆ ನೀರಿನಲ್ಲಿ  ಕಂಡುಬಂದಿದೆ. 

ಕಸರಾಡಿ ನದಿಯ ಬಯಾಲಜಿಕಲ್ ಆಕ್ಸಿಜನ್ ಡಿಮಾಂಡ್  ನ ಪ್ರಮಾಣ 80mg/l  ಆಗಿದೆ . ಇದು ಅಪಾಯಕಾರಿ ಮಟ್ಟಕಿಂತ 14 ಪಟ್ಟು ಹೆಚ್ಚು . 
BOD ಪ್ರಮಾಣ ಜಾಸ್ತಿ‌ಯಾದಷ್ಟೂ ಆ ನೀರಿನ ಮಾಲಿನ್ಯದ ಪ್ರಮಾಣವೂ ಹೆಚ್ಚಾಗುತ್ತದೆ. ಇಂತ ನೀರಿನಲ್ಲಿ  ಯಾವ ಜಲಚರ ಮತ್ತು ಜಲಸಸ್ಯಗಳು ಯಾವುದೂ ಬೆಳೆಯುವುದಿಲ್ಲ . 

6mg/l  ದಾಟಿದರೆ ಜಲಚರಗಳ ಪ್ರಾಣಕ್ಕೆ ಕುತ್ತು. 
2mg/l ದಾಟಿದರೆ ಮನುಷ್ಯನ ಉಪಯೋಗಕ್ಕೆ ಯೋಗ್ಯವಲ್ಲದ ನೀರು ಎಂದು ಹೇಳಲಾಗಿದೆ . 

ಈಗ ಊಹಿಸಿ ಆ ನದಿಯ Bod  ಎಷ್ಟು ಅಪಾಯಕಾರಿ ಮಟ್ಟಕ್ಕೆ ಏರಿಕೆಯಾಗಿದೆ ಎಂದು .

ಈ ನದಿಯ ಸುತ್ತ ಆಹಾರಕ್ಕಾಗಿ ಅಡ್ಡಾಡುವ , ಅದೇ ನೀರನ್ನು ಕುಡಿಯುವ , ಆ ನೀರಿನಲ್ಲಿ ಈಜಾಡುವ , ಹೊರಳಾಡುವ ನಾಯಿಗಳ ಚರ್ಮ ಆಕಾಶ ನೀಲಿ ಬಣ್ಣಕ್ಕೆ ಬದಲಾಗಿದೆ . 

ಈ ನಾಯಿಗಳಲ್ಲಿ ತುರಿಕೆ , ಕಣ್ಣಿನ infections ,  ಮತ್ತೆ ಆ ಗಾಯಗಳನ್ನು ಕೆರೆದುಕೊಂಡು ವಿಷ ಹೊಟ್ಟೆಗೂ ಸೇರುತ್ತಿವೆ . 

ಇದು ಬರಿಯ ನಾಯಿಯ ಕಥೆಯಷ್ಟೇ ಹಕ್ಕಿ  ಹಾವು , ಹುಳ , ನಮ್ಮ ಜೊತೆಗೆ ಮೂಕಪ್ರಾಣಿಗಳೂ ಒದ್ದಾಡ್ತಾ ಇರೋದು ನಿಜಕ್ಕೂ ಬೇಜಾರು ತರಿಸುತ್ತೆ.. 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಕಲ್ಕಿ ಬಗೆಗೆ ಒಂದು ಅಭಿಪ್ರಾಯ

ಯಾರವನಲ್ಲಿ ದೂರದಲಿ... ಧಾವಿಸಿ ಬರುತಿಹ ಕ್ರೌರ್ಯದಲಿ... ಹಸಿವೆ....ದಾಹ....ರಕ್ತಾ..... ಇನ್ನೂ ಹಸಿವೆ    ಬಡವರ ಹೊಟ್ಟೆಯ ಬೆಂಕಿಯ ಹಸಿವೆ ಇನ್ನೂ ದಾಹ    ಬಡವರ ಗಂಟಲ ಬೇಗೆಯ ದಾಹ... ತುಂಬದೋ ಹೊಟ್ಟೆ ...         ಈ ಸಾಲುಗಳ...

ವಾಸ್ತವ

ಕುವೆಂಪುರವರು ಬರೆದ ಮೀನಾಕ್ಷಿ ಮನೆ ಮೇಷ್ಟ್ರು ಅನ್ನೋ ಒಂದು ಕಥೆಯಲ್ಲಿ ಮೇಷ್ಟರು ತನ್ನ ಊಹಾ ಪ್ರಪಂಚದಲ್ಲಿ ಮೀನಾಕ್ಷಿಯ ಬಗ್ಗೆ ಇಲ್ಲದ ಕಲ್ಪನೆ ಕಟ್ಟಿಕೊಂಡು ಕೊನೆಗೆ ಅದು ನೆರವೇರದಿದ್ದಾಗ ಆಕೆಯ ಗಂಡ...

ಮುಖವಾಡ

ಯಾವುದೋ ಊರಿನ ಸಂತೆ ನೆರೆದಿತ್ತು ಎಲ್ಲೆಡೆಯೂ ಗದ್ದಲ ಹಣ್ಣಿನಂಗಡಿ,  ತರಕಾರಿಯಂಗಡಿಗಳ ನಡುವಲ್ಲಿ ಜನರಿಂದ ಗಿಜಿಗುಡುವ ಒಂದು ಅಂಗಡಿ ಅದೇ ಮುಖವಾಡದಂಗಡಿ ಮುಖವಾಡ,  ಮುಖವಾಡ,  ತನ್ನತನವನೇ ಮರೆಯಿಸುವ ...