ಬಾನಂಗಳದ ತುಂಬೆಲ್ಲ ಯಾರೋ ಚಿತ್ತಾರ ಬಿಡಿಸಿಟ್ಟರು ಎವೆಯಿಕ್ಕದೆ ನೋಡಿ ಕಣ್ಣನೋಯಿಸಿಕೊಂಡೆನಷ್ಟೇ ಒಮ್ಮೊಮ್ಮೆ ಬದುಕೂ ಕೂಡ ಖಾಲಿಯೆಂತೆನಿಸುವುದು ಥೇಟು ನೀಲಿ ಬಾನಂತೆ. ಬೆನ್ನ ಹುರಿಯ ನೋವಿಗೆ ಬೆಚ್ಚಗಿನ ಮಜ್ಜನವೊಂದಾಗಲೇಬೇಕು ಮೈಸೆಡವಿಗೆ ಒಂದಷ್ಟು ಅತೃಪ್ತ ಸುಖ. ನೆತ್ತಿಮೇಲಿನ ನೀರಿಗೆ ಪಾದ ನೋಡುವ ಹುರುಪಿದೆ ನಡುವೆ ನಡೆವ ಸವರಿಕೆಗೆಲ್ಲ ಹಾದರದ ಮೆಲುಕೇ?. ಜಗಜ್ಜಾಹಿರಾಗಲಿ ಎಲ್ಲವೂ ಮುಚ್ಚಿಡುವುದೇನಿದೆ ಜಗದಿ ನಾಲ್ಕು ಗೋಡೆಯೊಳಗಿನದ್ದು ಒಳಗೇ ಇರಲಿ ಕೆಲವೊಂದು ಮಾತ್ರ ಬಯಲಾಗದಿರಲಿ. ಈಗಷ್ಟೇ ಯಾರೋ ಬೆನ್ನಿಗಂಟಿಕುಳಿತರು ಬೆಚ್ಚಗಾಯಿತಷ್ಟೇ ದೇಹ ಒಂದೈದು ನಿಮಿಷ ಮತ್ತದೇ ಖಾಲಿತನದ ಪರಮಾವಧಿ ಮತ್ತೆ ತುಂಬಿಕೊಳಲು ಕಾಯಬೇಕು. ಕಡಲು😍