ಮೊನ್ನೆ ಮೊನ್ನೆ ಶಿವಮೊಗ್ಗದ ಬಳಿಯ ಹುಣಸೋಡಿನಲ್ಲಿ ಅಕ್ರಮ ಗಣಿಗಾರಿಕೆಯ ಜಿಲಾಟಿನ್ ಸ್ಪೋಟವಾಗಿ ಸುತ್ತಲಿನ ನಾಕು ಜಿಲ್ಲೆಗಳಲ್ಲಿ ಭೂಕಂಪ ಆಯ್ತೇನೋ ಎನ್ನುವಷ್ಟು ಸದ್ದಾಗಿ ಕಿಟಿಕಿಯ ಗಾಜುಗಳು ಆ ವೈಬ್ರೇಷನ್ ಗೆ ಪುಡಿಯಾಗಿ ಒಂದರೆ ಕ್ಷಣ ನಮ್ಮ ಸುತ್ತಲೇ ಇಷ್ಟು ಹತ್ತಿರದಲ್ಲೇ ನಮ್ಮ ವಿನಾಶದ ಮುನ್ನುಡಿ ಇದೆ ಅನ್ನೋದರ ಅರಿವಿರದೇ ಅರಾಮಾಗಿಯೇ ಇದ್ದೆವು. ಮುಂದೂ ಇರ್ತೀವೇನೋ
ಆದರೆ ಇದು ಮನುಷ್ಯರ ಕಥೆಯಾಯ್ತು...
ನಾವೆಲ್ಲ ಲಾಕ್ಡೌನ್ ಶುರುವಾಗಿ ಮನೆಮನೆಲೂ ಪಾನಿಪುರಿ ಮಾಡಿ ತಿಂದು ಸ್ಟೇಟಸ್ ಹಾಕುವ ಹೊತ್ತಿನಲ್ಲಿ ರಾಷ್ಟ್ರೀಯ ವನ್ಯಜೀವಿ ಮಂಡಳಿ
ಅಭಯಾರಣ್ಯ ದಲ್ಲಿಯೂ ಗಣಿಗಾರಿಕೆ ಮಾಡಿ ಅಡ್ಡಿ ಇಲ್ಲ ಎಂಬ ಅನುಮತಿ ಕೊಟ್ಟಿತ್ತು.
ಎಸ್ ಇದಾಗಿದ್ದು ಕಳೆದ ಏಪ್ರಿಲ್ ನಲ್ಲಿ ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಮಧ್ಯ ಇರುವ ದಿಹುಂಗ್ ಪಟ್ಕಾಯ್ ಅಭಯಾರಣ್ಯದಲ್ಲಿ ಕಲ್ಲಿದ್ದಲು ಗಣಿಗಾರಿಕೆ ಮಾಡಲು ಪ್ರಧಾನಿಯವರು ಅಧ್ಯಕ್ಷರಾಗಿರುವ ರಾಷ್ಟ್ರೀಯ ವನ್ಯಜೀವಿ ಮಂಡಳಿಯು ಈಶಾನ್ಯ ಕೋಲ್ ಫೀಲ್ಡ್ ಗೆ ಅನುಮತಿ ನೀಡಿದೆ .
ದಿಹುಂಗ್ ಎಂದರೆ ಬ್ರಹ್ಮಪುತ್ರ ನದಿ ಮತ್ತು ಪಟ್ಕಾಯ್ ಎಂದರೆ ಪರ್ವತ ಪ್ರದೇಶ ಅಂತ ಅರ್ಥ. ಈ ಪ್ರದೇಶವನ್ನು 2004 ರಲ್ಲಿ ಅಭಯಾರಣ್ಯ ಅಂತ ಘೋಷಣೆ ಮಾಡಲಾಗಿದೆ.
ಈ ಅಭಯಾರಣ್ಯವನ್ನು ಪೂರ್ವದ ಅಮೇಝಾನ್ ಕಾಡು ಅಂತಲೇ ಕರೆಯುತ್ತಾರೆ. ಅಷ್ಟು ಶ್ರೀಮಂತ ವನ್ಯಜೀವ ವೈವಿಧ್ಯ ಇರುವಂತ ಸ್ಥಳ . ಇದು ಭಾರತದ ಅತಿದೊಡ್ಡ ಮಳೆಕಾಡು. ಒಟ್ಟಾರೆ 111km ನಷ್ಟು ಇರುವ ಇದರ ವಿಸ್ತಾರ. ಕಾಡು ಚಿಕ್ಕದಾದರೂ ಸಹ 47 ವಿಧದ ಸಸ್ತನಿಗಳು , 47 ವಿಧದ ಸರೀಸೃಪಗಳೂ , 293 ವಿಧದ ಪಕ್ಷಿಗಳೂ , 30 ಬಗೆಯ ಚಿಟ್ಟೆಗಳೂ , ಆರ್ಕಿಡ್ ಸಸ್ಯವರ್ಗವನ್ನು ಇಲ್ಲಿ ಕಾಣಬಹುದಾಗಿದೆ. ಭಾರತದ ಪ್ರಮುಖ ಮತ್ತು ವಿಶಿಷ್ಟ ಅಭಯಾರಣ್ಯ ಏಕೆಂದರೆ ಇಲ್ಲಿ ಭಾರತದ ಏಳು ಬಗೆಯ ಬೆಕ್ಕುಗಳಿ ಇಲ್ಲೇ ಕಂಡು ಬರುತ್ತವೆ.
ಆನೆ , ಹುಲಿ , ಚಿರತೆ , ಚಿಪ್ಪುಹಂದಿ , ಹಿಮಾಲಯದ ಕರಡಿ , ಹಿಮಾಲಯದ ವಿಶಿಷ್ಟ ಅಳಿಲು , ಸಾಂಬಾರ್ ಜಿಂಕೆ , ಕಾಡುಕೋಣ , ಬಾರ್ಕಿಂಗ್ ಡೀರ್ , ಗಿಬ್ಬನ್ , ಕಾಡುಪಾಪ , pig tailed ಸಿಂಗಳೀಕ , capped ಲಂಗೂರ್ ಮಂಗಗಳು ಮುಂತಾದ ಪ್ರಾಣಿವರ್ಗ ಇದೆ.
Tiger , leopard , marbled cat , clouded cat , golden cat , jungle cat , leopard cat ಏಳು ಬಗೆಯ ಬೆಕ್ಕುಗಳೂ ಒಂದೇ ಅಭಯಾರಣ್ಯದಲ್ಲಿ ಕಂಡುಬರುವುದು ಇಲ್ಲಿನ ವಿಶೇಷ .
1972 ರ ವನ್ಯಜೀವಿ ರಕ್ಷಣಾ ಕಾಯ್ದೆಯ ಅನ್ವಯ ರಚಿತವಾದ ರಾಷ್ಟ್ರೀಯ ವನ್ಯಜೀವಿ ಮಂಡಳಿ ಭಾರತ ಸರ್ಕಾರದ Moefcc ಅಂದರೆ ಪರಿಸರ , ಅರಣ್ಯ ಮತ್ತು ಹವಾಮಾನ ಇಲಾಖೆಯ ಅಡಿಯಲ್ಲಿ ಬರುತ್ತದೆ.
ಈ ಭಾಗದಲ್ಲಿ ಕಲ್ಲಿದ್ದಲಿನ ನಿಕ್ಷೇಪ ಇರುವುದರಿಂದ ಈಶಾನ್ಯ ಕೋಲ್ ಫೀಲ್ಡ್ ಎಂಬ ಸಂಸ್ಥೆ 1973 ರಲ್ಲಿ 30 ವರ್ಷಗಳ ಅನುಮತಿಯನ್ನು ಅಂದಿನ ಸರ್ಕಾರದಿಂದ ಪಡೆದಿತ್ತು. ಅದರ ಪ್ರಕಾರ 2003 ಒಪ್ಪಂದ ಮುಗಿದಿತ್ತಾದರೂ 2013 ರಲಿ ಮತ್ತೊಮ್ಮೆ ಅನುಮತಿ ಬೇಡಿತ್ತು.ಅಲ್ಲಿಯ ತನಕ ಅಕ್ರಮ ಕಲ್ಲಿದ್ದಲಿನ ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಈಗ 2020 ರಲ್ಲಿ 98 ಹೆಕ್ಟೇರ್ ಪ್ರದೇಶದಲ್ಲಿ ಅದಕ್ಕೆ ಅನುಮತಿ ಸಿಕ್ಕಿದೆ. ಕಾಯಬೇಕಾದ ಬೇಲಿ ಎದ್ದು ಹೊಲ ಮೇಯ್ದ ಕಥೆಯಾಯ್ತು ಇದು. ಅಲ್ಲಿ ಓಡಾಡುವ ಭೂತಾಕಾರದ ಲಾರಿಗಳು ಹೋಗಲು ರಸ್ತೆ ಮತ್ತೆ ಮರಗಳ ಕಡಿತವಂತೂ ಲೆಕ್ಕಕ್ಕಿಲ್ಲ .
ಈಗ ವನ್ಯಜೀವಿಗಳ ದೈನಂದಿನ ಓಡಾಟಕ್ಕೆ ಅನುಗುಣವಾಗುವಂತೆ ತಮ್ಮ ಕಾರಿಡಾರ್ ಗಳನ್ನು ರಚಿಸಿಕೊಂಡಿರುತ್ತವೆ. ಅದರಲ್ಲೂ ಆನೆ , ಹುಲಿಗಳು ಒಂದು ರಾಜ್ಯದಿಂದ ಮತ್ತೊಂದು ರಾಜ್ಯದವರೆಗೂ ಸಹ ತಮ್ಮ ಸಂತಾನೋತ್ಪತ್ತಿ , ಆಹಾರಕಾಗಿ ಕಾರಿಡಾರನು ಆಶ್ರಯಿಸಿರುತ್ತವೆ . ಈ ಗಣಿಗಾರಿಕೆಯ ಲಾರಿಗಳು ಇವಕ್ಕೆ ಮಾಡಬಹುದಾದ ಹಾನಿ , ಆ ಶಬ್ದ ಅವಕ್ಕೆ ಉಂಟು ಮಾಡಬಹುದಾದ ಕಿರಿಕಿರಿ , ಅಥವಾ ಶಿವಮೊಗ್ಗದಲ್ಲಿ ಆದಂತ ಸ್ಪೋಟ ಉಂಟಾದರೆ ಭಾರತದ ಬಹುಮಟ್ಟಿನ ವೈವಿಧ್ಯ ಕಳೆದುಹೋಗುವುದರಲಿ ಸಂಶಯವಿಲ್ಲ . ಅತ್ಯಂತ ಹೆಚ್ಚಿನ ವೈವಿಧ್ಯ ಇರುವಂತ ಈ ಸ್ಥಳಗಳನ್ನು ಮಾನವನ ಹಸ್ತಕ್ಷೇಪ ಯಾವ ಮಟ್ಟಿಗೆ ಹಾಳು ಮಾಡಿವೆ ಎಂಬುದನ್ನು ಚಿತ್ರಗಳೇ ವಿವರಿಸುತ್ತವೆ ಒಮ್ಮೆ ನೋಡಿ.
ಈ ನಡೆಯನ್ನು ವಿರೋಧಿಸಿ ಅಸ್ಸಾಂ ನಲ್ಲಿ #SaveDehingPatkai ಎಂಬ ಹ್ಯಾ಼ಷ್ ಟ್ಯಾಗ್ ನ ಅಡಿಯಲ್ಲಿ ಅನೇಕ ಪ್ರತಿಭಟನೆಗಳು ನಡೆದಿವೆ. ಈ ಕಾರಣ ಸ್ವಲ್ಪ ಕಾಲ ಸ್ಥಗಿತ ಗೊಳಿಸಿದೆ .
ಡೆಹಿಂಗ್ ಪಟ್ಕೈನಲ್ಲಿ ಗಣಿಗಾರಿಕೆ ಚಟುವಟಿಕೆಗಳು ಈಶಾನ್ಯದ ಶ್ವಾಸಕೋಶವನ್ನು ಕೊಲ್ಲುತ್ತಿವೆ. ಕಲ್ಲಿದ್ದಲು ಗಣಿಗಾರಿಕೆ ನೈಸರ್ಗಿಕ ಪರಿಸರವನ್ನು ಕೆಡಿಸುತ್ತಿದೆ. ಅಕ್ರಮ ಗಣಿಗಾರಿಕೆಯಿಂದಾಗಿ, ಬೃಹತ್ ಧೂಳು ಮತ್ತು ಶಬ್ದ ಮಾಲಿನ್ಯವು ವನ್ಯಜೀವಿ ಅಭಯಾರಣ್ಯದ ಹತ್ತಿರದ ಪ್ರದೇಶಗಳಲ್ಲಿ ಕಂಡು ಬಂದಿದೆ. ಸಾಮಾನ್ಯವಾಗಿ ಕಲ್ಲಿದ್ದಲು ಸ್ತರಗಳನ್ನು ಗಣಿಗಾರಿಕೆ ನಡೆಸಿದ ನಂತರ ಗಣಿಗಳನ್ನು ತೆರೆದಿಡುತ್ತಾರೆ. ಇದೂ ಅಪಾಯಕ್ಕೆ ಆಹ್ವಾನ. ನಾವು ಕೇವಲ ನಮ್ಮ ಕಣ್ಣಿಗೆ ಕಾಣುವ ದೊಡ್ಡ ದೊಡ್ಡ ಪ್ರಾಣಿಗಳ ಬಗ್ಗೆ ಹೇಳುತ್ತಿದ್ದೇವೆ ಆದರೆ ಈ ಯಮ ಸ್ವರೂಪಿ ಲಾರಿಗಳ ಚಕ್ರಕೆ ಸಿಲಿಕಿದ ಅಸಂಖ್ಯಾತ ಸಣ್ಣ ಜೀವಿಗಳ ಲೆಕ್ಕವನ್ನಲ್ಲ .
ಕಾಯುವವನೇ ಕೊಲುವವನಾಗುವ ಸನ್ನಿವೇಶವನ್ನು ಭಾರತದ ಯುವಜನರಾದ ನಾವು ಕರೆಂಟ್ ಅಫೇರ್ ನಲ್ಲಿ ಓದಿ ಸುಮ್ಮನಾಗುತ್ತೇವೆ . ಅಷ್ಟೆ....
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ