ವಿಷಯಕ್ಕೆ ಹೋಗಿ

ಜೀವಜಗತ್ತಿನ ದೀಪಾವಳಿ

ಜೀವಜಗತ್ತಿನ ದೀಪಾವಳಿ ಇದು..

Noctilluca scintillan 

ಒಂದು ಬಗೆಯ ಸೂಕ್ಷ್ಮ ಜೀವಿ‌. ಸ್ವಯಂಪ್ರಕಾಶವಾದ ಬೆಳಕನ್ನು ಹೊರಸೂಸಿ ಇಡೀ ಸಮುದ್ರದ ತೀರವನ್ನು ನೀಲಿ ಸೀರಿಯಲ್ ಲೈಟ್ ಹಾಕಿ ಅಲಂಕರಿಸಿದಂತೆ ಕಾಣುತ್ತದೆ. 

ಇವುಗಳನ್ನು 1773 ರಲ್ಲಿ ಮೊದಲಬಾರಿಗೆ ಫೆಡ್ರಿಕ್ ಮುಲ್ಲರ್ sea sparkle ‌ಕಡಲ ತೀರದ ನಕ್ಷತ್ರ ಅಂತ ಹೆಸರಿಸಿದ. 

ನಮ್ಮ ಕರ್ನಾಟಕದ ಉಡುಪಿಯ ಮಟ್ಟು ಬೀಚ್ ಮತ್ತೆ ಗೋಕರ್ಣದ ಬೀಚ್ ನಲ್ಲಿ ಇವು ಕಾಣಸಿಗುತ್ತಿದ್ದು ಯಾವಾಗ ಅದು ಡಿಸ್ಟರ್ಬ್ ಆಗುತ್ತೋ ಆಗ ಈ ರೀತಿ ಬಣ್ಣಕೆ ಕಾರಣ ಆಗುತ್ತದೆ . 

ಆದರೆ ಈ ವಿಷಯ ತುಂಬ ಖುಷಿ ಪಡುವಂತದ್ದೇನೂ ಅಲ್ಲ . ಇದು ಅತಿ ವೇಗದಲ್ಲಿ ಪುನರುತ್ಪತ್ತಿ ಆಗುತ್ತಾ planktonic tide / red tide ಗೆ ಕಾರಣ ಆಗುತ್ತದೆ . 

ನೀರಿನ ಪೂರ್ತಿ ಈ ಬಗೆಯ ಶೈವಲಗಳು ಆವರಿಸಿ ನೀರಿನಡಿಯ ಜೀವ ವೈವಿಧ್ಯಕೆ ಬೇಕಾದ ಸೂರ್ಯನ ಕಿರಣಗಳನ್ನು ನೀರಿನಡಿಗೆ ತಲುಪಲು ಅಡ್ಡಿಯಾಗುತ್ತವೆ‌ 

ಈ ಸೂಕ್ಷ್ಮಜೀವಿಗಳು ಫ್ಲಾಜೆಲ್ಲಾ ಎಂಬ ವಿಶೇಷ ಚಲನಾಂಗವನ್ನು ಹೊಂದಿದ್ದು ಅದೇ ಕಾರಣಕ್ಕೆ ಇದನ್ನು ಡೈನೋಫ್ಲಾಜೆಲ್ಲೇಟ್ ಗುಂಪಿಗೆ ಸೇರಿಸುತ್ತಾರೆ. 

ಇದು ಥೇಟ್ ನಮ್ಮ ಮಿಂಚುಹುಳು ಹಳದಿ ಬೆಳಕನ್ನು ಬೀರಿದ ಹಾಗೆ ಲ್ಯೂಸಿಫೆರಿನ್ ಎಂಬ ಕೆಮಿಕಲ್ ಆಮ್ಲಜನಕದೊಡನೆ ವರ್ತಿಸಿ  ಈ ಬಣ್ಣ ಬೀರುತ್ತದೆ. 
ಇತ್ತೀಚೆಗೆ ಇದು ಪ್ರವಾಸಿಗರ ಮುಖ್ಯ ಆಕರ್ಷಣೆ ಕೂಡಾ... 😁

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಕಲ್ಕಿ ಬಗೆಗೆ ಒಂದು ಅಭಿಪ್ರಾಯ

ಯಾರವನಲ್ಲಿ ದೂರದಲಿ... ಧಾವಿಸಿ ಬರುತಿಹ ಕ್ರೌರ್ಯದಲಿ... ಹಸಿವೆ....ದಾಹ....ರಕ್ತಾ..... ಇನ್ನೂ ಹಸಿವೆ    ಬಡವರ ಹೊಟ್ಟೆಯ ಬೆಂಕಿಯ ಹಸಿವೆ ಇನ್ನೂ ದಾಹ    ಬಡವರ ಗಂಟಲ ಬೇಗೆಯ ದಾಹ... ತುಂಬದೋ ಹೊಟ್ಟೆ ...         ಈ ಸಾಲುಗಳ...

ವಾಸ್ತವ

ಕುವೆಂಪುರವರು ಬರೆದ ಮೀನಾಕ್ಷಿ ಮನೆ ಮೇಷ್ಟ್ರು ಅನ್ನೋ ಒಂದು ಕಥೆಯಲ್ಲಿ ಮೇಷ್ಟರು ತನ್ನ ಊಹಾ ಪ್ರಪಂಚದಲ್ಲಿ ಮೀನಾಕ್ಷಿಯ ಬಗ್ಗೆ ಇಲ್ಲದ ಕಲ್ಪನೆ ಕಟ್ಟಿಕೊಂಡು ಕೊನೆಗೆ ಅದು ನೆರವೇರದಿದ್ದಾಗ ಆಕೆಯ ಗಂಡ...

ಕೆಮಿಸ್ಟ್ರಿ ಪದ್ಯ

ಮಸ್ತ್ ಪದ್ಯ ...😁😁 ಈ chemistry ಇರಬಾರದಿತ್ತು; ಇದ್ದರೂ, ನಾನಿದನ್ನ ಕಲಿಯಬಾರದಿತ್ತು; ಈ labನಲ್ಲಿ ಆ ಕಣ್ಣುಗಳೊಡನೆ ಅಪಘಾತವಾದರು ತಪ್ಪುತಿತ್ತು; ಈಗ ತಾನೆ practicalನಲ್ಲಿ ಎದುರಾದಳವಳು; testubeನ ಮುಗಿನವಳು; ಒಂದು ನಮೂನಿಯ ಪ್ರೀತಿ ಕಣ್ಣಿನಿಂದ ಚಿಮ್ಮುತಿತ್ತು ಕುಡಿಯದೆ ನನಗೆ alcohol ನೆತ್ತಿಗೇರುತಿತ್ತು; ಮಾತಿನಲಿ glucoseನ ಸಿಹಿ ಮಕರಂದ; ಉಸಿರಾಟವೊ, Ester ಬೆರೆತ ಸುಗಂಧ; benzenನಂತೆ ಅವಳ presenceನ ಸೂಕ್ಷಮತೆ; ಕತ್ತಲಲಿ ಮಿನುಗುವ rediumನ ಪ್ರಖರತೆ; ಅವಳ ಮನೆ ಬೀದಿಗಳಲ್ಲಿ ಒಡಾಟಗಳು ಶುರುವಾವಂದು; neucleus ಸುತ್ತ electron ಸುತ್ತುವಂತೆ; ಒಂದೆ semister ಅಂತರದಲ್ಲಿ ಅಮರ ಪ್ರೇಮದ production; ಮರುದಿನವೆ ನನ್ನ testನ confirmation; ಬಿಡಿಸಿ ಹೇಳಬೇಕೆ...? ಆ ದಿನ ಅವಳ ಅಪ್ಪನ ಜೊತೆ introduction; ಸುದ್ದಿ ಕೇಳಿ ಭಾವಿ ಮಾವನ ಜಿಗದಾಟವೊ; unstable reaction ವಿವರವಾಗಿ  ಹೇಳಿದಂತೆ; ignition tubeನಿಂದ sodium ಆರ್ಭಟಿಸಿದಂತೆ; ಸಿಟ್ಟಿನಲ್ಲೆ ನುಡಿದರು; "ಪಡ್ಡೆ ಹುಡುಗರ ಎಚ್ಚರಗೊಳಿರಿ ನಿಮ್ಮ ಕಿಮ್ಮತ್ತನು ಅರಿಯಿರಿ" iron ಒಡನೆ goldನ್ನು  ಎಂದು ಹುಡುಕದಿರಿ; ಆಸೆಯ beaker ಚೂರಾಯಿತೆಂದು; ಸುಮ್ಮನಿದ್ದೆ benzoldehydeನ ಕಹಿ ಗುಟುಕು ನುಂಗುತ್ತಾ  ಅಂದು; ಈಗ ಅವಳ ನೆನಪುಗಳಿಲ್ಲದೆ ಕೆಲಸಗಳು ಸಾಗುತಿಲ್ಲ; ಮತ್ತೆ, ಆ labನಲ್ಲಿ ನನ್ನ ಹೃದಯದ ಹೊರೆತು burner ಮೇಲೆ ಮತ್ತೇ...