ಇವತ್ತು ಹಾಗೇ ಶ್ರಾವಣ ಮಾಸದ ಸಂಪ್ರದಾಯದ ಐದು ಶುಕ್ರವಾರದ ಹಾಡು ಹೇಳ್ತಿದ್ದೆ.... ನಂಗಿಷ್ಟ ಆಗಿರೋ ಸಾಲುಗಳು .. ಹಹಹಹ 😄 😄 .ಭಕ್ಷ್ಯ ಶ್ಯಾವಿಗೆ ಪರಮಾನ್ನ ಚಿತ್ರಾನ್ನ ಸಣ್ಣಕ್ಕಿ ಶಾಲ್ಯಾನ್ನ ಸೂಪಗಳು ಚಕ್ಕುಲಿ ಗಿಲಗಂಜಿ ಚೆಂದದ್ ಚಿರೋಟಿ ಹಪ್ಪಳ ಸಂಡಿಗೆ ಆಂಬೋಡೆಗಳು ಸಕ್ಕರೆ ಘೃತ ಕ್ಷೀರ ಸಕಲ ಪಕ್ವಾನ್ನ ಮಂಡಿಗೆ ಬೀಸೋರಿಗೆ ಗುಳ್ಳೋರಿಗೆಯು ಚಂದ್ರನಂತೆ ಹೊಳೆವ ಶ್ಯಾವಿಗೆಯ ಫೇಣಿಯು ದಿವ್ಯ ಬೂಂದಿ ಬುರುಬುರಿ ಅನಾರಸವು ಬೇಕಾದ ಬೇಸನ್ನು ಬಿಳಿಯಾದ ಅರಳಿನುಂಡೆ ಮೋತಿಚೂರು ಚೂರ್ಮಲಾಡು ಸೇತು ಬಿಳುಪಿನ ಚಕ್ರದಂಥ ಜಿಲೇಬಿ ಸುಕಿನುಂಡೆ ಮುಖವಿಲಾಸಗಳು ಹೋಳಿಗೆ ಎಣ್ಣೋರಿಗೆ ಹೊಯ್ಗಡವು ಗೇಹೂರಿ ಕಾಯಿಹಾಲು ಕರಿದ ಹೂರಣ ಕಡುಬು ತೇಂಗೋಳಲು ತಿರುವಿದ ಉದ್ದಿನಬೇಳೆ ಮೆಣಸು ಜೀರಿಗೆ ಇಂಗು ಹಾಕಿದ ಉಪ್ಪಿನ ಕಡುಬು ಸಾರು ಸಾಂಬಾರ ಪಡುವಲಕಾಯಿ ಪಳದ್ಯ ಉಪ್ಪೇರಿ ಉಪ್ಪಿನಕಾಯಿರಸವು ಖೀರು ಮಾಲದಿ ಗೌಲಿ ಪರಡಿ ಪರಮಾನ್ನ ಮುಚ್ಚೋರೆ ಚಟ್ಟಣಿ ಕೋಸಂಬರಿಯು ಹಾಗಲವು ಹೀರೆ ಸೌತೆ ಹಂದರದ ಅವರೆ ಚೌಳಿ ಬಾಳೆ ಬೆಂಡೆ ಕುಂಬಳವು ಮಾಗಿದ ಹಲಸಿನ ಕಾಯಿ ಕಲಸಿ ಮೇಲೋಗರ ಗೆಣಸು ಗುಳ್ಳದಕಾಯಿ ಬಜ್ಜಿಗಳು ಸಬ್ಜಿಭಾತು ಸೌತೆಭಾತು ಕೇಸರೀ ಭಾತು ಕೆನೆಕೆನೆ ಮೊಸರು ಒಗ್ಗರಣೆ ಹಸಿ ಅಲ್ಲ ಬಿಸಿ ಹಾಲು ಹೊಸಬೆಣ್ಣೆ ಇಂಗುಪ್ಪು ಕಲಸಿ ಬಕಾಳಿ ಭಾತುಗಳು ಕಡಲೆ ಹೂರಣ ಗಸಗಸೆ ಕೊಬ್ಬರಿ ಏಲಕ್ಕಿ ಪುಡಿ ದ್ರಾಕ್ಷಿ ಉತ್ತತ್ತಿ ಹಳಕು ಕಲಸಿ ಕಲ್ಲುಸಕ್ಕರೆ ಕರಿಗಡುಬು ಬೆಣ್ಣೆ ಕಾಸೀ ತುಪ್ಪವ...