ವಿಷಾನಿಲಕ್ಕೆ ನಾವೇನೂ ದೂರವಿಲ್ಲ .
ವಿಶಾಖಪಟ್ಟಣದ ಅನಿಲ ದುರಂತ ಘಟಿಸಿದ ಹೊತ್ತಲ್ಲೇ ನಾವು ಎಷ್ಟು ಸುರಕ್ಷಿತ ಅನಿಸುತ್ತೆ.
ಕಳೆದ ನವೆಂಬರ್ ಹೊತ್ತಿಗೆ ತೋರಣಗಲ್ಲಿಗೆ ಹೋಗಿದ್ದೆ. ಅಲ್ಲಿಂದ ಸ್ನೇಹಿತರೆಲ್ಲ ಸೇರಿ ಸಂಡೂರಿಗೂ ಕುಮಾರಸ್ವಾಮಿ ಬೆಟ್ಟಕ್ಕೂ ಹೋಗಿದ್ವಿ. ಬೆಳಿಗ್ಗೆ ಹನ್ನೊಂದಾದರೂ ಬೆಟ್ಟಕ್ಕೆ ಅದೇನೋ ಮುಸುಕು . ಬಹುಷಃ ಚಳಿಗಾಲವಲ್ವಾ ಅದಕ್ಕೆ ಇಬ್ಬನಿ ಏನೋ ಅಂದುಕೊಳ್ಳೋದಕ್ಕೆ ಆಗಲೆ 27°c ದಾಟಿದೆ ತಾಪಮಾನ .
ಯಾವ ಬೆಟ್ಟವೂ ಕ್ಲಿಯರ್ ಆಗಿ ಕಾಣದಷ್ಟು ಮುಸುಕು . ನಂತರ ಎರಡು ಗಂಟೆ ಹೊತ್ತಿಗೂ ಕೂಡಾ.. ನಮ್ಮ ಎದುರಿನ ಬೆಟ್ಟವೂ ಮಬ್ಬು .
ಇದೇನಪ ಅಂತ ನೋಡುವಾಗ
ಅದು ಖಾರ್ಕಾನೆಗಳಿಂದ ಬಂದ ಮಾಲಿನ್ಯಕಾರಕ ಹೊಗೆ.
ಕ್ಲಾಸಲ್ಲಿ ವಾಯುಮಾಲಿನ್ಯ ಅಂತ ಓದಿದ್ದು ಪ್ರಾಯೋಗಿಕವಾಗಿ ಎದುರಿಗ್ ನೋಡೋಕ್ ಸಿಕ್ತಾ ಇತ್ತು.
ಆರ್ಸೆನಿಕ್ , ನೈಟ್ರೋಜನ್ ಆಕ್ಸೈಡ್ , ಸಲ್ಫರ್ ಆಕ್ಸೈಡ್ , ಹೈಡ್ರೋಕಾರ್ಬನ್ ಗಳು , ಕ್ಯಾಡ್ಮಿಯಂ , ಲೆಡ್ , ಸತು , ಇನ್ನೂ ಇತ್ಯಾದಿ ಅನಿಲಗಳು ಅಲ್ಲೇ ಇರುವ ಸ್ಟೀಲ್ ಖಾರ್ಕಾನೆಗಳಿಂದ ಬಂದು ಎತ್ತರದಲ್ಲಿ ಕೆಮಿಕಲ್ ಪದರವನ್ನೇ ನಿರ್ಮಾಣ ಮಾಡಿರುತ್ತೆ . ಈ ಪದರದ ಮೂಲಕ ಮಳೆ , ಇಬ್ಬನಿ ಬಂದಾಗ ಆ ನೀರಿನ ಕಣಗಳ ಜೊತೆ ಈ ಕೆಮಿಕಲ್ ಗಳು ಸೇರಿ ವಾಪಸ್ ಭೂಮಿಗೆ ಬರುತ್ತವೆ . ಇದನ್ನ ಆಮ್ಲಮಳೆ ಅಂತಲೂ ಇಬ್ಬನಿ ಮತ್ತು ಹೊಗೆ ತುಂಬಿದರೆ smog ಅಂತಲೂ ಕರೀತಾರೆ . ಉಸಿರಾಟದ ತೊಂದರೆ ಮುಖ್ಯವಾಗಿ ಅಸ್ತಮಾ ಕಂಡುಬಂದರೆ ಹೀಗೆ ನೀರಿನಲ್ಲಿ ಮಣ್ಣಿನಲ್ಲಿ ಬೆರೆತ ರಾಸಾಯನಿಕಗಳು ನಮ್ಮ ಆಹಾರ ಸರಪಳಿಯಲ್ಲಿ ಸೇರಿ bio magnification ಅನ್ನು ಉಂಟು ಮಾಡುತ್ತದೆ.
ಅಂದರೆ ನೀರಿನಲ್ಲಿ ಬೆರೆತ ರಾಸಾಯನಿಕವನ್ನು ಮೀನು ತಿಂದು ನಂತರ ಮೀನನ್ನು ಯಾವುದಾದರೂ ಹಕ್ಕಿ ತಿಂದರೆ ಅದಕ್ಕೂ ಕೆಮಿಕಲ್ / ವಿಷ ವರ್ಗಾವಣೆ ಯಾಗುವುದು . ಇದಕ್ಕೆ ಕೊನೆಯೇ ಇಲ್ಲ .
ಸ್ವಲ್ಪಮಟ್ಟಿನ ಕಾಡು ಉಳಿದಿರುವ ಆ ಪ್ರದೇಶದಲ್ಲೇ ಈ ಪರಿಯ. ಮಾಲೀನ್ಯ ಅಂದ್ರೆ ಒಂದೆಡೆ ಗಣಿಧೂಳು ಇನ್ನೊಂದೆಡೆ ಕಾರ್ಖಾನೆಗಳ ಹೊಗೆ
ಈ ಬಳ್ಳಾರಿಯ ಜನ ಅದ್ಹೇಗೆ ಉಸಿರಾಡ್ತಾರಪ ಅನಿಸಿತ್ತು .
ಈ ಖಾರ್ಕಾನೆಗಳನ್ನ ನಮ್ಮ ಸುತ್ತಲೇ ಇಟ್ಟುಕೊಂಡ ನಾವು ಎಷ್ಟು ಸುರಕ್ಷಿತ ?
ಈ ದುರಂತ ನೋಡಿದಾಗ ನೆನಪಾಗುವುದು 1984 ರಲ್ಲಿ ನಡೆದ ಭೋಪಾಲ್ ಅನಿಲ ದುರಂತ . ಮೀಥೈಲ್ ಐಸೋ ಸೈನೇಟ್ ಅನ್ನೋ ಅನಿಲ ಸೋರಿಯಾಗಿತ್ತು ನಡುರಾತ್ರಿ .
ಈ ರೀತಿಯ ಕಾರ್ಖಾನೆಗಳು ತಾವೆಷ್ಟು ಸುರಕ್ಷಿತ ಮತ್ತು ತಮ್ಮಿಂದ ಪರಿಸರಕ್ಕೆ ಎಂತಾ ಹಾನಿಯನ್ನು ಸೃಷ್ಟಿಸಬಲ್ಲೆವು ಅಂತ ಮೊದಲೇ ಅದರ. Hazard ಅನ್ನು ಅಳೆಯುವ ಮಾನ ಅಂದ್ರೆ ಪರಿಸರದ ಮೇಲಿನ ಪರಿಣಾಮಗಳ ಮಾಪನ. Environmental impact assessment (EIA)
ಭೋಪಾಲ್ ಅನಿಲ ದುರಂತಕ್ಕೆ ಕಾರಣವಾದ ಕೀಟನಾಶಕ ತಯಾರಿಕಾ ಖಾರ್ಕಾನೆ ಯೂನಿಯನ್ ಕಾರ್ಬೈಡ್ ಆಫ್ ಇಂಡಿಯಾ ಕೂಡ ಈ ಮಾಪನವನ್ನು ಕೈಗೊಂಡಿರಲಿಲ್ಲ .
ವ್ಯವಸ್ಥೆ ಭ್ರಷ್ಟ ಆದಂತೆ ಪರಿಸರದ ಉಳಿವು ನಗಣ್ಯ ಆಗಲೇಬೇಕಲ್ಲಾ ..
ಸಂಡೂರಿನ ಆ ಬೆಟ್ಟಕ್ಕೆ ಹೋಗಿ ಸುಮಾರು ಎರಡು ಗಂಟೆಲಿ ಇರಿಟೇಷನ್ ಆಗಿ ಆಕ್ಷಿ ಹೋಡಿತಾ ಇಳಿವಾಗ ಒಂದೆ ಮಾತು ನೆನಪಾಗುತ್ತಿತ್ತು.
ಇರುವುದೊಂದೇ ಭೂಮಿ ನಾವೆಷ್ಟು ಹಾಳು ಮಾಡ್ತಾ ಇದ್ದೀವಲ್ಲಾ ಅಂತ ...
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ