ನೆನಪಿನ ಕಂತೆಯದು
ಬಿಚ್ಚಿದಷ್ಟೂ ಗೋಜಲು
ಅನುಭವಕೆ ಒಂದಷ್ಟು
ಫಸಲು
ಭಾವುಕತೆಗೆ ಒಂದಷ್ಟು
ನೆರಳು
ಮನಸೆಂಬ ಆಭರಣದ
ಹೊಳೆವ ಹರಳು
ಇದು ತಪ್ಪು ಇದು ಸರಿ
ಎಂದು ತಿಳಿಸಿ ತಿದ್ದುವ
ಕರುಳು
ಅದು ಅನುಭಾವದ
ಒರಳು
ನೆನಪಿನಾಳಕೆ ಇಳಿಯೇ
ಉಬ್ಬರಿಸುವುದು ಭಾವನೆಯ ಕಡಲು
ನಾ ಅತ್ತು ಹಗುರಾಗೇ
ಕಂಪಿಸೀತು ಅದರ
ಒಡಲು
ಒಂದೆರಡು
ಕಣ್ಣಹನಿಗಳು
ತುಟಿಯ
ಮೇಲೊಂದಿಷ್ಟು ನಗು
ಹೊರಹೊಮ್ಮಲು
ಸುಮಧುರ ಭಾವದಿರಿತ
ಹಕ್ಕಿಯ
ಸವಿಗೊರಲು.
ಕಾವ್ಯ ಎಸ್ ಕೋಳಿವಾಡ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ