ಸಮಾಧಿ ಕಟ್ಟಿ ಬಿಟ್ಟಿದ್ದೇನೆ
ನನ್ನೊಳಗಿನ ಕನಸುಗಳಿಗೆ
..-----------
ಮುದ್ದು ಕೂಸಿನ ತರದ
ಕನಸುಗಳವು
ಅದೆಷ್ಟು ಪ್ರೀತಿಸಿದ್ದೆ ಅವುಗಳನ್ನು
ಇಂದು ಪ್ರತಿಯೊಂದೂ
ಕಲ್ಲಿಗೆ ಕುಕ್ಕಿ ಕೊಲೆಗೈಯಲ್ಪಟ್ಟಿವೆ...
ಕೊಲೆಗಡುಕರು ಯಾರೊ?? ಇನ್ನೂ ಸಿಕ್ಕಿಲ್ಲ
ನನ್ನ ಸತ್ತ ಕನಸುಗಳಿಗೆ ನಡೆಯುತಿದೆ ಶ್ರಾದ್ಧ ದಿನವೂ
ಸಿಗುತ್ತಿದೆ ನಿತ್ಯವೂ ಕಣ್ಣೀರಿನ ತರ್ಪಣ
ನಡಿಯುತಿದೆ ನಿತ್ಯವೂ ಮೌನಾಚರಣೆ
ಮನಸಿನ ಬೇಗೆಯೆ ಕನಸುಗಳ ಸುಟ್ಟ ಚಿತಾಗ್ನಿ
ಕುವೆಂಪುರವರ ಕಂಸಶಿಲೆಯಂತಾಗಿದೆ ನನ್ನ
ಮನಸು
ಮನವು ಕೂಗಿ ಕೂಗಿ ಅಳುತಲಿದೆ
"ಕನಸು ಕಾಣಬಾರದಾಗಿತ್ತೆ ನಾನು"
...????
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ