ವಿಷಯಕ್ಕೆ ಹೋಗಿ

ಹೀಗೊಂದು ಜುಗಲ್ಬಂದಿ

ನನ್ನ ಹೊಸತನದ ಪುರಾವೆಗೆ ನಿನ್ನೆ ಕಂಡ ಕನಸು 
ಉತ್ತಮ ಉದಾಹರಣೆಯಾಗಿದೆ
ಅವಳಳೊಂದಿಷ್ಟು ಕನಿಷ್ಟ ಅನುಮೋದನೆಗಳ ಕೇಳಬೇಕಾದ ನನ್ನ ಉಮೇದು ಈಡೇರಿದ್ದು ಚಂದ್ರನ ಉಪಸ್ಥಿಯ ರಾತ್ರಿಯಲ್ಲೇ

ಸುಳ್ಳು ಮಂಟಪಕ್ಕೆ ಕೂಡಿ ಹಾಕುವಿಕೆ  ಚಂದ್ರನ ವಹಿವಾಟು ನಿತ್ಯನೂತನ
ಅರೆಬೆಂದ ಎದೆಯೊಳಗೆ ಬಿಸಿ ಏರಿಸುವ ಇರಾದೆ ಅವನಲ್ಲಿ ಸ್ಫಟಿಕಛಾಯೆ
ಅವಳೊಳಗಿನ ನಾನು ಮಸಣ ದಾರಿ ಹಿಡಿಯುವ ವೇಳೆಗೂ ಕನಸಿನಲ್ಲಿ ಮಂಗಳಕಾರ್ಯ ಮಾಡಿಸುವುದು ಸೋತವನಿಗೆ ಮರು ಪ್ರಯತ್ನಕ್ಕೆ ನಾಂದಿ

ಮದರಂಗಿಯ ದಿನ ಅವಳ ಕೈ ಎಂದಿಗಿಂತ ಹೆಚ್ಚು ರಂಗೇರಿದ್ದು
ಅವಳೇ ಸುಟ್ಟ ತನ್ನ ಕನಸಿನ ಬಿಸಿಗೆ ಅನ್ನೊದನ್ನ ಸ್ವತಃ ಅವಳೂ ಮರೆತಿದ್ದಳು
ಮತ್ತೆ ಮತ್ತೆ ನೆನಪಿಸುತ್ತಿದ್ದ ಚಂದಿರ
ಶೀತಲ ಕಿರಣದ ಸಾಂತ್ವನ ದಿಂದ

ಚಿತ್ತಾರದ ಕಥೆ ಹೇಳುವ ಅವಳೊಳಗೆ ನನ್ನನ್ನು ಅಳಿಸುವ ಬಣ್ಣವಾಗಿಸಿದ ಹುನ್ನಾರ ತಿಳಿಯದ ಪ್ರಸಂಗ
ಹೆಜ್ಜೆ ಮೇಲೆ ಮುದ್ರೆ ಬಿಡಸಲೆಂದರೆ ಕಡಲ ದಾರಿಯಲ್ಲಿ ನಡೆಸಿದ್ದರ ಕಾರಣ ಅವಳಂತೆಯೇ ಸುಂದರ ಹುಸಿ ಅಲೆಗಳ ಒಳ ಒಪ್ಪಂದ ಹಿಂದಿನಿಂದ ಮಾಸಿದ್ದು ಈವಾಗಲೂ ತರ್ಕಕ್ಕೆ ನಿಲುಕದ್ದು

ಒಂಟಿ ಮೈಲಿಗಲ್ಲಿನ ಏಕಾಂತವ
ಹಲವರೊಡನೆ ನಿಂತು ಅನುಭವಿಸಿ
ಜಂಗುಳಿಯ ಗೋಜಲಲಿ ಬೆದರಿರುವ ಕಳೆದೋದ ಕೂಸಂತೆ
ಸಣ್ಣ ಮಿಡುಕೂ ಬೆಚ್ಚಿಬೀಳಿಸುವಾಗೆಲ್ಲ ಮಸಣದ ದಾರಿ ಸ್ವಾಗತ ಕೋರುವಾಗಲು
ಮತ್ತೆ ಮತ್ತೆ ನೆನಪಾಗಿ ಸಾಂತ್ವನ ಹೇಳುತ್ತಾನೆ ಚಂದ್ರ
ಅರ್ಹಳೋ ಅಲ್ವೊ ಅವಳಿಗೆ ಯಕ್ಷಪ್ರಶ್ನೆ

ನೆನಪಿನ ಹಡಗಿನಲ್ಲಿ ಒಂಟಿ ಪಯಣಿಗನ ಕಡೇ ಆಸೆಯೂ ಇಲ್ಲದ ಮಿಡಿತವನ್ನು ಬರಸೆಳೆಯುವ ತಂತ್ರವೇನೋ ನಾ ಕಾಣೇ
ಮೌನದ ರಾತ್ರಿಯಲ್ಲಿ ನನ್ನ ಮಾತುಗಳ ಜಾಗರಣೆ
ಪರದೆ ಕಳಚದ ಅವಳ ಏಕಮುಖ ನಿರ್ಧಾರ ಮತ್ತು ಬಿಕರಿಯಾಗದ ಹೃದಯ

ನೆನಪಿನ ಯಾನದಲ್ಲಿ ಎಂದಿಗೂ ಒಂಟಿಯಾಗಿಯೆ ಇರಬೇಕೋ ಹುಡುಗ
ಹಂಚಿಕೊಂಡಷ್ಟು ಪೇಲವವಾಗುತ್ತದೆ ನೆನಪಿನ ಎಳೆಗಳು
ಚಂದ್ರನ ಹಸಿವ ಇಂಗಿಸುವುದು ಹುಸಿ  ನೆನಪುಗಳಿಂದ ಸಾಧ್ಯವಾಗದ್ದು
ಅನುಭವದ ಅಡುಗೆ ಮಾಡಿ ತಣಿಸಬೇಕು ಅವನ ಇಡೀ ಹಸಿವನ್ನು

*ಕಾವ್ಯ ಜುಗಲ್ಬಂದಿ*

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಕಲ್ಕಿ ಬಗೆಗೆ ಒಂದು ಅಭಿಪ್ರಾಯ

ಯಾರವನಲ್ಲಿ ದೂರದಲಿ... ಧಾವಿಸಿ ಬರುತಿಹ ಕ್ರೌರ್ಯದಲಿ... ಹಸಿವೆ....ದಾಹ....ರಕ್ತಾ..... ಇನ್ನೂ ಹಸಿವೆ    ಬಡವರ ಹೊಟ್ಟೆಯ ಬೆಂಕಿಯ ಹಸಿವೆ ಇನ್ನೂ ದಾಹ    ಬಡವರ ಗಂಟಲ ಬೇಗೆಯ ದಾಹ... ತುಂಬದೋ ಹೊಟ್ಟೆ ...         ಈ ಸಾಲುಗಳ...

ವಾಸ್ತವ

ಕುವೆಂಪುರವರು ಬರೆದ ಮೀನಾಕ್ಷಿ ಮನೆ ಮೇಷ್ಟ್ರು ಅನ್ನೋ ಒಂದು ಕಥೆಯಲ್ಲಿ ಮೇಷ್ಟರು ತನ್ನ ಊಹಾ ಪ್ರಪಂಚದಲ್ಲಿ ಮೀನಾಕ್ಷಿಯ ಬಗ್ಗೆ ಇಲ್ಲದ ಕಲ್ಪನೆ ಕಟ್ಟಿಕೊಂಡು ಕೊನೆಗೆ ಅದು ನೆರವೇರದಿದ್ದಾಗ ಆಕೆಯ ಗಂಡ...

ಮುಖವಾಡ

ಯಾವುದೋ ಊರಿನ ಸಂತೆ ನೆರೆದಿತ್ತು ಎಲ್ಲೆಡೆಯೂ ಗದ್ದಲ ಹಣ್ಣಿನಂಗಡಿ,  ತರಕಾರಿಯಂಗಡಿಗಳ ನಡುವಲ್ಲಿ ಜನರಿಂದ ಗಿಜಿಗುಡುವ ಒಂದು ಅಂಗಡಿ ಅದೇ ಮುಖವಾಡದಂಗಡಿ ಮುಖವಾಡ,  ಮುಖವಾಡ,  ತನ್ನತನವನೇ ಮರೆಯಿಸುವ ...