ನೆನೆಸಿಕೊಂಡಷ್ಟೂ ಭೀತಳಾಗುತ್ತೆನೆ. .. ..
ನಿನ್ನೊಳಗಿನ ಕಡಲು ಶಾಂತವಾಗುವುದ ಕಂಡು....
ಇನ್ನೊಂದಷ್ಟು ದಿನಕ್ಕೆ
ನನ್ನ ನಿನ್ನ ನಡುವಿನ ಬಂಧದ ಪರಿಧಿಯು ಮಗ್ಗುಲು ಬದಲಾಯಿಸಿಕೊಳ್ಳುತ್ತದೆ.
ಕೇವಲ ಅಳುವನು ಕೊಡುಗೆ ಕೊಟ್ಟ ನಿನ್ ಮೇಲೊಂದು ಪುಟ್ಟ ಮುನಿಸಿದೆ .
ಮುದ್ದು ಅಂತ ರಮಿಸುವಾಗ ಮರೆಯುತಿದ್ದ ಜಗದ ಜಂಜಡ ಈಗ ನೆನಪಾಗಿದೆ.
ಮತ್ತೆ ಅವನಿಯಾಗಿದ್ದೇನೆ ಮಳೆಯಾಗಿ ಸುರಿದುಬಿಡು ನೀನು
ಇರುವಿನಂಗಳವ ದಾಟಿ...
ಕಾವ್ಯ ಎಸ್ ಕೋಳಿವಾಡ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ