ಎದೆಯೂರಿನ ದಾರಿಯಲಿ ತಿರುವುಗಳ ನಡುವೆ ಕಳೆದೇ ಹೋಗಿವೆ ಸಾವಿರ ಕನಸುಗಳು
ನಾನು ನಿನ್ನಂತೆ ಹುಡುಕುತ್ತಾ ಕೂರುವವಳಲ್ಲ
ಹೊಸ ಕನಸ ಬಿತ್ತುವವಳು
ನೀ ಬಿತ್ತುವ ಕನಸು ಚಿಗುರೊಡೆಯಲು ಇದೆಯಾ ಏನಾದರೂ ಕರಾರು
ಕಪ್ಪು ಹುಡುಗ ಈಗೀಗ ಗೋರಿ ಕಡೆಯವನು ಏನಕ್ಕೂ ತಯಾರು
ನನ್ನ ಮನಸಿನೂರಲಿ ಬೆಳಕಿಲ್ಲ ಬರಿಯ ಕತ್ತಲು , ಮಾತಿಲ್ಲ ಬರೀ ಮೌನ , ಎಷ್ಟು ದೂರ ಸಾಗಿದರೂ ಮುಗಿಯದ ಪಯಣ ನೀ ಚಿರಸಂಚಾರಿ
ಮೌನದ ಹೊಡೆತಕ್ಕೆ ಅಪಘಾತವಾದ ಒಂಟಿ ಹೃದಯಕ್ಕೆ
ನೀರೆರೆಚ ಬಂದವಳೋ ಅದೇ ಹಾದಿಯ ಬೀಡಿನವಳು
ಅಪರೂಪಕ್ಕೆ ಹೆಜ್ಜೆ ತಿರುಗಿಸಲೆಂದರೆ ಅದೇ ಕತ್ತಲೆಗೆ ದಾರಿ ತಪ್ಪುತ್ತದೆ
ಅವನು ಎದುರಿಗಿದ್ದ ಮೇಲೆ ಕಾರ್ಗತ್ತಲ ರಾತ್ರಿಯಂತ ಮನಸಿನಲು
ಕೋಟಿ ದೀವಟಿಗೆಯ ಚೆಂಬೆಳಕು
ಅವ ಅತ್ತ ಸರಿದರೆ ಒಂಟಿ ಕ್ಷಣದಲಿ
ದೀಪವಾರಿಸಿ ಬಿಡುವ ತಂಗಾಳಿ
ಯಾರ ದೂಷಿಸಲಿ ?
ಅವಳ ದ್ವಂದ್ವ ನಿಲುವು ಚಿತ್ತ ಹೊರಳಿಸೋ ಈವಾಗಿನ ಸಮಾಚಾರ
ಕವಲುದಾರಿಯತ್ತ ಹಲ್ಕಾ ಮನಸ್ಸು
ಉತ್ತರವಿರದ ಗೊಂದಲ ಪ್ರಶ್ನೆ ಮತ್ತು ಅವನು ಕಪ್ಪು ಹುಡುಗ
*ಕಾವ್ಯ ಜುಗಲ್ಬಂದಿ*
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ