ಪ್ರಿಯಾ
ಹೀಗೆ ಒಡಲ ಕತ್ತಲ ಚೆಲ್ಲಿ
ನೋವ ಅರಿವಿರದೇ
ಬೆಳಕ ಹೆರಬೇಕಿದೆ ನಾನು
ಮುಷ್ಟಿ ಬಿಡಿಸಿ ಬೆರಳ
ಎಣಿಸಿ ಲೆಕ್ಕ ಹಾಕಿಡು ನೀನು
ನಸುಕತ್ತಲಾಳದ ಸುಳಿಬೆಳಕ
ಹೆರಬೇಕಿದೆ ನಾನು .
ಹೂ ಮೊಗವಾಡದ ಹುಸಿ ನಗುವ
ಮೀಟಿ ತಣ್ಣಗೆ ಸುಡುವ ಸತ್ಯದ
ಚೂರನ್ನು ಹೆರಬೇಕಿದೆ ನಾನು
ನಮ್ಮ ಮನದ ಹನಿ ವಿಷಕೆ
ಎದ್ದು ನಿಂತ ಗೋಡೆಗಳ
ಒಡೆಯುವ ಅನುರಾಗದ ಎಳೆಯನ್ನು
ಹೆರಬೇಕಿದೆ ನಾನು
ಮೌನವನೇ ಸರಕಾಗಿಸಿಕೊಂಡ
ಕಾವ್ಯದ
ಒಳಸುಳಿಯ ಅರಿಯಲಾದರೂ
ಮಾತೊಂದನ್ನು ಹೆರಬೇಕಿದೆ ನಾನು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ