ವಿಷಯಕ್ಕೆ ಹೋಗಿ

ಉಸಿರೂ ಮಾರಾಟಕ್ಕಿದೆ

ಊದುತ್ತಲೇ ಇದ್ದೇನೆ ಬದುಕನ್ನು ಹಾಗೆ ಹಾಗೆ
ಗಾಳಿ ತೂರಿ ಒಳಹೋಗಿ
ಅಷ್ಟುದ್ದ ಮೈಲುಗಲ್ಲನು ತಾಗುವ ಹಾಗೆ

ಜಾತ್ರೆಯ ಜಂಗುಳಿಯೊಳಗೆ ಕಳೆದೋದ ಆಸೆಗಳ ಎದೆಗವಚಿಕೊಂಡು ನಕ್ಕ‌ ನಗೆಯ ಜೊತೆ ಉಸಿರೂ ಮಾರಾಟಕ್ಕಿದೆ . ಇಲ್ಲಿ

ಬಣ್ಣದ ಕನಸುಗಳ ಬಲೂನೊಳಗೆ ತೂರಿ
ಕಪ್ಪುಬಿಳಿ ಜಗದೊಳಗೆ
ಬಿಕರಿಗಿಟ್ಟಿದಾಳೆ ಪುಟ್ಟಿ

ಉಸಿರೂದಿದಾಗ ಉದ್ದಕೇರುವ ಪೀಪಿ ,  ಪಿಂಕು ಬಣ್ಣದ ಬಾಂಬೆ ಮಿಠಾಯಿ , ಮಾಟಾಗಿ ನಗುತಿರುವ ಬಾರ್ಬಿಗೊಂಬೆಯ ಕನಸೂ ಕ್ಷಣಿಕ
ಮಾರುತಿರುವ ನೊರೆಗುಳ್ಳೆಯಂತೇ

ಹರಿದ ಜೇಬೂ ಅಪ್ಪನ ಪ್ರೀತಿಗೆ ಸಾಂತ್ವನ  ಹೇಳುತಿದೆ . ಕೊಳಲೂದಿ ದಣಿದ ಅಣ್ಣನ
ಹಸಿವಿಗು ಈಗೀಗ ಜೀವ ಬಂದಿದೆ

ಕಾಲು ಮಡಚಿ ಮಲಗಿದ ಕಾಲ ನೋಡುತ್ತಲೇ ಇದೆ ಬದುಕ ಉಸಿರು ಊದಿ ಊದಿ ಕಪ್ಪಿಟ್ಟ ತುಟಿಗಳನ್ನು .‌.

ಗಡಿಯಾರದ ಸುತ್ತು ಸುತ್ತಿಗೆ
ಜೀತಕಿರುವ ಮುಳ್ಳುಗಳ ನಡುವೆ ಕಾಲ ಕೊನೆದಿನಗಳನೆಣಿಸುತಿದೆ

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಕಲ್ಕಿ ಬಗೆಗೆ ಒಂದು ಅಭಿಪ್ರಾಯ

ಯಾರವನಲ್ಲಿ ದೂರದಲಿ... ಧಾವಿಸಿ ಬರುತಿಹ ಕ್ರೌರ್ಯದಲಿ... ಹಸಿವೆ....ದಾಹ....ರಕ್ತಾ..... ಇನ್ನೂ ಹಸಿವೆ    ಬಡವರ ಹೊಟ್ಟೆಯ ಬೆಂಕಿಯ ಹಸಿವೆ ಇನ್ನೂ ದಾಹ    ಬಡವರ ಗಂಟಲ ಬೇಗೆಯ ದಾಹ... ತುಂಬದೋ ಹೊಟ್ಟೆ ...         ಈ ಸಾಲುಗಳ...

ವಾಸ್ತವ

ಕುವೆಂಪುರವರು ಬರೆದ ಮೀನಾಕ್ಷಿ ಮನೆ ಮೇಷ್ಟ್ರು ಅನ್ನೋ ಒಂದು ಕಥೆಯಲ್ಲಿ ಮೇಷ್ಟರು ತನ್ನ ಊಹಾ ಪ್ರಪಂಚದಲ್ಲಿ ಮೀನಾಕ್ಷಿಯ ಬಗ್ಗೆ ಇಲ್ಲದ ಕಲ್ಪನೆ ಕಟ್ಟಿಕೊಂಡು ಕೊನೆಗೆ ಅದು ನೆರವೇರದಿದ್ದಾಗ ಆಕೆಯ ಗಂಡ...

ಮುಖವಾಡ

ಯಾವುದೋ ಊರಿನ ಸಂತೆ ನೆರೆದಿತ್ತು ಎಲ್ಲೆಡೆಯೂ ಗದ್ದಲ ಹಣ್ಣಿನಂಗಡಿ,  ತರಕಾರಿಯಂಗಡಿಗಳ ನಡುವಲ್ಲಿ ಜನರಿಂದ ಗಿಜಿಗುಡುವ ಒಂದು ಅಂಗಡಿ ಅದೇ ಮುಖವಾಡದಂಗಡಿ ಮುಖವಾಡ,  ಮುಖವಾಡ,  ತನ್ನತನವನೇ ಮರೆಯಿಸುವ ...