ಮುದ್ದು ಮನದ ಸಖಿಯ ಸೊಲ್ಲ
ಕೇಳಲೊಲ್ಲ ಯಾಕೋ ಗೊಲ್ಲ
ಆ ಬಿದಿರಿನ ಆಜನ್ಮ ಪುಣ್ಯ .
ನಿನ್ನ ನವಿರು ಬೆರಳಲಿ ವಿರಮಿಸಿದೆ
ಉಸಿರನಿತ್ತು ಕೊಳಲಾಗುವ ಪರಿ
ಜೀವ ತರಿಸಿದೆ ಕಲ್ಲೊಳಗೆ
ರಾಧೆಯಾಗುವ ತವಕದಿ ನಾನೂ
ನಿನ್ನ ಘಮದೊಳೆನ್ನ ಬೆರೆಸಿದೆ .
ಕಾದು ಕುದ್ದ ಹೃದಯದ
ಕಣ್ಣ ಹನಿಯ ಮಾಲೆ ಮಾಡಿ ನನ್ನ ಮುರಳಿಗದನು ತೊಡಿಸಿದೆ .
ಯಮುನೆ ತಟದ ಮರಳೂ ಕಾದಿದೆ , ಗೊಲ್ಲನ ಸವಿಯುಲಿಗೆ
ಯಮುನೆ ರಾಧೆ ಬೇರೆಯಲ್ಲ
ಕಾದ ವಿರಹದ ಬೇಗೆಗೆ
ಮನದ ಕಡಲು ಮೇರೆ ಮೀರಿ
ಸುಪ್ತ ಭಾವ ನರ್ತನ
ರಾಧೆಯಾಗ ಬಂದ ನಾನು ಧಾರೆಯಾದ ತಲ್ಲಣ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ