ಕನಸು ಇಳಿಜಾರು ಬೆಂಕಿ ಹಬ್ಬ .
ರೆಕ್ಕೆ ಮೂಡದ ಪುಟ್ಟ ಕನಸಿನ ಮರಿಗಳಿಗೆ
ಬೆಚ್ಚನೆ ಕಾವು ಕೊಟ್ಟು
ಜಡಿ ಮಳೆಯಲಿ ತಾನು ಒದ್ದೆಯಾದ ಅಮ್ಮನಂತ ಕವಿತೆ ಎದ್ದು ಬಂದಿತ್ತು .
ಈ ಕವಲು ಹಾದಿಯ ಇಳಿಜಾರಿನಲ್ಲೊಂದು
ಕೈ ಆಸರೆ ಬಯಸಿ ಚಡಪಡಿಸಿ
ಅಲೆಯಿರದ ಬದುಕನ್ನೂ ಹಬ್ಬವಾಗಿಸುವುದನ್ನು ಕಲಿಸಿದ ಅವನಂತ ಕವಿತೆ ಮಾತಿಗೆ ಕೂತಿತ್ತು .
ಪ್ರತಿ ತಲ್ಲಣಕ್ಕೂ ಚಿತ್ತಾಗಿ
ಗಮ್ಯಕು ಗಮನವಿತ್ತು
ಗಮಕದಲಿ ಉತ್ತರಿಸಿ
ಕಣ್ಮುಚ್ಚಿ ಅರೆದೂರ ನಿಡುಸುಯ್ದು
ಕಣ್ಬಿಡದ ಆಸೆ ಕೂಸುಗಳ ಬೆಂಕಿಗೆಸೆದು
ಸಂತೆಯ ಒಡಲೊಳಗೆ ಕರಗಿ ಹೋಗುವ ನಿಶ್ಚಿಂತ ಸಂತ
ಉಳಿದದ್ದು
ಎದೆ ಬೇಗುದಿಗಳಿಗೆ ಕಿವುಡಾದ ಕವಿತೆ ಮಾತುಗಳ ಹುಡುಕಿ ಸುಸ್ತಾದ ಇವಳು ಅಷ್ಟೇ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ