ಹುಡುಗಾ... !
ನಿನ್ನ ಹಚ್ಚಿಕೊಂಡಷ್ಟು ನನ್ನ ನಾ ಮೆಚ್ಚಿಕೊಂಡಿದ್ದರೆ
ನಿನ್ನ ನಂಬಿದಷ್ಟು ನನ್ನ ಆಂತರ್ಯವ ನಾ ನಂಬಿದ್ದರೆ
ನಿನ್ನ ನಗುವನ್ನ ಸಂಭ್ರಮಿಸುವಷ್ಟು ಹೊತ್ತು
ನನಗು ನಗಲು ಬರುವುದೆಂದು ನನಗನಿಸಿದ್ದರೆ
ನಿನ್ನ ದುಃಖವನ್ನ ನನ್ನದೆಂದು ಎದೆಗೆ ಹಚ್ಚಿಕೊಂಡಷ್ಟು
ನನ್ನ ದುಃಖವನೂ ಗಮನಿಸಿದ್ದರೆ
ನಿನ್ನ ಸಾಂಗತ್ಯದಲಿ ಮುಳಗುವಷ್ಟು ಕಾಲ ನನ್ನ ಒಳಗನೂ ನಾ ಬಲ್ಲವಳಾಗಿದ್ದರೆ
ಮಾಗಿದ ತಿರುಳಾಗಿ ಇರುತ್ತಿದ್ದೆ
ಜೀವದ ನಾಡಿ ಹಿಡಿದು ಮಿಡಿತಗಳ ಲೆಕ್ಕ ಹಾಕುತಿದ್ದೆ
ಎದೆಯ ದನಿಗೆ ಕಿವಿಗೊಟ್ಟು ಆಲಾಪಗಳ ಗುಡ್ಡೆ ಹಾಕಿಕೊಳ್ಳುತ್ತಿದ್ದೆ
ಬದುಕು ಸುರುವಿದ ರಾಶಿ ಕನಸುಗಳ ಎಣಿಸುತ್ತಲೇ ದಿನ ಕಳೆದಿದ್ದೇನೆ
ಇನ್ನಾದರೂ ತುಸು ಹೊತ್ತು
ಬದುಕನ್ನ ನನಗಾಗಿ ಬದುಕಿಬಿಡುವೆ
ಚಿಮ್ಮಿಸಿದ ಚಂದ್ರನ ಚೂರುಗಳು ಮರಳಿ ಬರುವ ಕ್ಷಣಕಾಗಿ ಹೀಗೆ ಕಾಯುತ್ತಲೇ ಇರುವೆ .
ಇನ್ನಾದರೂ ತುಸು ಹೊತ್ತು ... ❤
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ