ಕೃತಿ ; ಶಿಕಾರಿ
ನಾನು ಓದಿರುವ ಒಂದು ಚಂದದ ಕೃತಿ . ವಿಜ್ಞಾನದ ವಿದ್ಯಾರ್ಥಿ ಆದ ನನಗೆ ಇಷ್ಟ ಆಯ್ತು. ನನಗೆ ತೀರಾ ಗಂಭೀರ ಅನಿಸುವಂತ ಕೃತಿಗಳು ಆ ಕ್ಷಣಕೆ ರುಚಿಸದೇ ಇದ್ದರೂ ಸಹ ಮುಗಿಸಲೇಬೇಕು ಎಂಬ ಜಿದ್ದಿನಿಂದ ಮುಗಿಸಿದೆ.
ಕಾದಂಬರಿಯ ಪಾತ್ರ ನಾಗಪ್ಪ . ಅವನ ಸ್ವಗತಗಳಲಿ ಕಟ್ಟಲ್ಪಟ್ಟಿದೆ ಕಾದಂಬರಿ.
ಶಿಕಾರಿ ಎಂದರೆ ಬೇಟೆ . ಇಲ್ಲಿ ಶಿಕಾರಿ ಮಾಡುವುದು ಯಾರು ? ಇಲ್ಲಿ ಶಿಕಾರಿಯ ಬಲಿಪಶು ಯಾರು ಎಂದು ಗ್ರಹಿಸುತ್ತಾ ಹೋದಾಗ ಕಾದಂಬರಿಯ ಒಂದೊಂದು ಓದಿಗೂ ಉತ್ತರಗಳು ಬದಲಾಗುತ್ತವೆ .
ಉದ್ಯೋಗದ ಜಗತ್ತಿನಲ್ಲಿ ಮುಂದುವರಿಯಲು ಎಂತಹಾ ಅಸ್ತ್ರಗಳನ್ನು ಸಹ ಬಳಸುತ್ತಾರಲ್ಲಾ..ಅನಿಸುತ್ತದೆ. ಹಗರಣ ಒಂದರಲ್ಲಿ ಸಿಲುಕಿಸಬೇಕೆಂಬ ಹುನ್ನಾರಕ್ಕೆ ಪ್ರಾಮಾಣಿಕ ನಾಗಪ್ಪ ಬಲಿಪಶು.
ಇಲ್ಲಿ ನಾಗಪ್ಪನೇ ಹೇಳುವಂತೆ , ಜೀವನ ಎಂದರೆ , ಜೀವವಿಕಾಸವಾದದ ಹೇಳಿಕೆ , ಅರ್ಹರಿಗೆ ಮಾತ್ರ ಬದುಕಲು ಹಕ್ಕು ( survival of the fittest ) ನ ಜೊತೆಗೆ , ದಿನ ನಿತ್ಯವೂ ನವೆಯುತ್ತಾ ಸಾಗುತಿರುವ struggle for existence ಕೂಡ ಅನಿಸುತ್ತದೆ.
ಮತ್ತೊಮ್ಮೆ , ಈ survival of the fittest , ಅನ್ನೋದು ನಾಗಪ್ಪನ ಹತಾಷೆಯ ನುಡಿಗಳಾ ? ಎಂಬ ಸಂದೇಹ ಬರುತ್ತದೆ. ಈ ಸಾಲು ಕಾದಂಬರಿಯ ಮುಖ್ಯ ಸೂತ್ರ ಕೂಡ
ಕಾದಂಬರಿಯ ಮೊದಲಿಗೆ ನಾಗಪ್ಪನ ಮಾನಸಿಕ ಕ್ಲೇಷ , ಅವನ ತಳಮಳದಿಂದ ರಚಿತವಾಗಿದೆ ಅವನಲ್ಲಿ escapism ಕಂಡರೂ ನಂತರದ ಅರ್ಧ , ಜೀವನಪ್ರೀತಿ , ಛಲದ ಪ್ರತೀಕದ ಹಾಗೆ ಕಾಣುತ್ತಾನೆ.
ಮನುಷ್ಯ ಮನುಷ್ಯನ ನಡುವೆ ಎದ್ದಿರುವ ಗೋಡೆಯ ಕೆಳಗೆ ಮಾನವೀಯತೆ ಸತ್ತಿದೆ ಎಂಬುದನ್ನು ಗುರುತಿಸಬಹುದು.
ಅಂತರ್ವಿಮರ್ಶೆ ಮಾಡಿಕೊಳ್ಳಬೇಕಾದ ಕೃತಿ
ಸತ್ಯದ ಹುಡುಕಾಟ ಮಾಡಿಸುತ್ತಾ ಮಾಡಿಸುತ್ತಾ ನಮ್ಮ ಜೀವನದ ಅಧ್ವಾನಗಳನ್ನು ಬಿಚ್ಚಿಡುತ್ತೆ.
ಯಾಂತ್ರಿಕ ಜೀವನಶೈಲಿ , ಉನ್ನತಿಗೆ ಹಾತೊರೆಯುವ ಮನೋಭಾವ , ನಾನು ಬದುಕಬೇಕಾದರೆ ದುರ್ಬಲ ಸಾಯಲಿ , ಎನಿಸುವಂತೆ .ನಮ್ಮ ಭಾವನೆಗಳನ್ನು , ಸ್ಪಂದಿಸುವ ಮನೋಭಾವವನ್ನು , ಸಂವೇದನೆಯನ್ನು ಹತ್ತಿಕ್ಕಿದೆ ಎಂಬುದನ್ನು ಕಾದಂಬರಿ ತಿಳಿಸುತ್ತದೆ.
ಆತ್ಮಹತ್ಯೆ ಯ ಹಾದಿ ಹಿಡಿಯ ಹೊರಟಿದ್ದ ನಾಗಪ್ಪ ಕೊನೆಗೆ ಕೆಲಸದ ಜೊತೆಗೆ , ತನ್ನ ಜಂಜಡಗಳಿಗೂ , ಲೌಕಿಕ ತೊಳಲಾಟಕ್ಕೂ ಮುಕ್ತಿ ನೀಡಿ ಹೊಸದರತ್ತ ಸಾಗುವಲ್ಲಿ , ಕಾದಂಬರಿ ಕೊನೆಗೊಳ್ಳುತ್ತದೆ .
ಮಾನವೀಯತೆಯ ಅಗತ್ಯ , ತೀರಾ ಸ್ವಕೇಂದ್ರೀಕೃತ ಯೋಚನೆಗಳ ಪರಿಣಾಮದ ಬಗೆಗೆ , ಮನೋವೈಜ್ಞಾನಿಕ ನೆಲೆಯಲ್ಲಿ ಚಿತ್ರಿತಗೊಂಡಿದೆ.
ಕೊನೆಯಲ್ಲಿ ಇಲ್ಲಿ ಮಾನವೀಯ ಮೌಲ್ಯಗಳು ಶಿಕಾರಿಯ ಬಲಿಪಶುಗಳು ಎಂದೂ ಅರ್ಥೈಸಬಹುದು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ