ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ವಿಷಕ್ಕೆ ನಾವೆಷ್ಟು ಹತ್ತಿರ

ವಿಷಾನಿಲಕ್ಕೆ ನಾವೇನೂ ದೂರವಿಲ್ಲ . ವಿಶಾಖಪಟ್ಟಣದ ಅನಿಲ ದುರಂತ ಘಟಿಸಿದ ಹೊತ್ತಲ್ಲೇ ನಾವು ಎಷ್ಟು ಸುರಕ್ಷಿತ ಅನಿಸುತ್ತೆ.  ಕಳೆದ ನವೆಂಬರ್ ಹೊತ್ತಿಗೆ ತೋರಣಗಲ್ಲಿಗೆ ಹೋಗಿದ್ದೆ.  ಅಲ್ಲಿಂದ ಸ್ನೇಹಿತರೆಲ್ಲ ಸೇರಿ ಸಂಡೂರಿಗೂ ಕುಮಾರಸ್ವಾಮಿ ಬೆಟ್ಟಕ್ಕೂ ಹೋಗಿದ್ವಿ.  ಬೆಳಿಗ್ಗೆ ಹನ್ನೊಂದಾದರೂ ಬೆಟ್ಟಕ್ಕೆ ಅದೇನೋ ಮುಸುಕು . ಬಹುಷಃ ಚಳಿಗಾಲವಲ್ವಾ ಅದಕ್ಕೆ ಇಬ್ಬನಿ ಏನೋ ಅಂದುಕೊಳ್ಳೋದಕ್ಕೆ  ಆಗಲೆ 27°c ದಾಟಿದೆ ತಾಪಮಾನ .  ಯಾವ ಬೆಟ್ಟವೂ ಕ್ಲಿಯರ್ ಆಗಿ ಕಾಣದಷ್ಟು ಮುಸುಕು . ನಂತರ ಎರಡು ಗಂಟೆ ಹೊತ್ತಿಗೂ ಕೂಡಾ.. ನಮ್ಮ ಎದುರಿನ ಬೆಟ್ಟವೂ ಮಬ್ಬು .  ಇದೇನಪ ಅಂತ ನೋಡುವಾಗ  ಅದು ಖಾರ್ಕಾನೆಗಳಿಂದ ಬಂದ ಮಾಲಿನ್ಯಕಾರಕ ಹೊಗೆ‌.   ಕ್ಲಾಸಲ್ಲಿ ವಾಯುಮಾಲಿನ್ಯ ಅಂತ ಓದಿದ್ದು ಪ್ರಾಯೋಗಿಕವಾಗಿ ಎದುರಿಗ್ ನೋಡೋಕ್ ಸಿಕ್ತಾ ಇತ್ತು.  ಆರ್ಸೆನಿಕ್ , ನೈಟ್ರೋಜನ್ ಆಕ್ಸೈಡ್ , ಸಲ್ಫರ್ ಆಕ್ಸೈಡ್ , ಹೈಡ್ರೋಕಾರ್ಬನ್ ಗಳು ,  ಕ್ಯಾಡ್ಮಿಯಂ , ಲೆಡ್ , ಸತು , ಇನ್ನೂ ಇತ್ಯಾದಿ ಅನಿಲಗಳು ಅಲ್ಲೇ ಇರುವ ಸ್ಟೀಲ್ ಖಾರ್ಕಾನೆಗಳಿಂದ ಬಂದು ಎತ್ತರದಲ್ಲಿ  ಕೆಮಿಕಲ್ ಪದರವನ್ನೇ ನಿರ್ಮಾಣ ಮಾಡಿರುತ್ತೆ .  ಈ ಪದರದ ಮೂಲಕ ಮಳೆ , ಇಬ್ಬನಿ ಬಂದಾಗ ಆ ನೀರಿನ ಕಣಗಳ ಜೊತೆ ಈ ಕೆಮಿಕಲ್ ಗಳು ಸೇರಿ ವಾಪಸ್ ಭೂಮಿಗೆ ಬರುತ್ತವೆ . ಇದನ್ನ ಆಮ್ಲಮಳೆ  ಅಂತಲೂ ಇಬ್ಬನಿ ಮತ್ತು ಹೊಗೆ ತುಂಬಿದರೆ sm...

ನೀಲಿ ನಾಯಿ

ನಾಯಿ ನೀಲಿಯಾದ ಕಥೆ ಪ್ರಕೃತಿ ಎಲ್ಲವನೂ ಸಹಿಸ್ತಾಳೆ ಅಂತ ನಾವು ಹಾಳುಗೆಡುವುದರಲ್ಲಿ ನಿಸ್ಸೀಮರು. ಲಾಭದ ಆಸೆಗೆ ಅಳತೆ ಮೀರಿ ಕಾರ್ಖಾನೆಗಳಿಗೆ ಪರವಾನಗಿ ನೀಡುವ ಸರ್ಕಾರದ ಸಂಸ್ಥೆಗಳಿಗೆ ಮುಂದಾಗುವ ಪರಿಣಾಮಗಳ ಅರಿವಿಲ್ಲ . ಕಠಿಣ ಕಾನೂನುಗಳು ಬರಬೇಕಿದೆ.  ಈಗ ಹೇಳೋಕ್ ಹೊರಟಿರೋದು ಮುಂಬೈನ ಬೀದಿನಾಯಿಗಳು ನೀಲಿಯಾದ ಕಥೆಯನ್ನ.  ಮುಂಬೈನ ತಲೋಜಾ ಜಿಲ್ಲೆಯ ಕೈಗಾರಿಕಾ ಪ್ರದೇಶದಲ್ಲಿ  ಬೀದಿನಾಯಿಗಳು ನೀಲಿ ಬಣ್ಣಕ್ಕೆ ತಿರುಗಿವೆ. ತುಸು ಲಕ್ಷ್ಯ ಕೊಟ್ಟು ಕೇಳಿಸಿಕೊಳ್ಳಬೇಕಿದೆ.. ಈ ಕೈಗಾರಿಕಾ ಪ್ರದೇಶ ಒಂದರಲ್ಲೇ ಸಾವಿರಕ್ಕೂ ಅಧಿಕ ಔಷಧ ತಯಾರಿಕಾ ಕಂಪನಿಯ ಕಾರ್ಖಾನೆಗಳು , ಬಣ್ಣವನ್ನು ಉತ್ಪಾದಿಸೋ ಕಾರ್ಖಾನೆಗಳಿಗೆ ,ಕೆಮಿಕಲ್ ಕಾರ್ಖಾನೆಗಳಿಗೆ ಅವಕಾಶ ನೀಡಿದೆ . ಈ ಕೈಗಾರಿಕೆಗಳ ವಿಷಯುಕ್ತ ತ್ಯಾಜ್ಯ ಸೇರುವುದು ಅಲ್ಲಿಯೇ ಸಮೀಪದ ಕಸಾಡಿ ಎಂಬ ನದಿಗೆ .  ಈ ನದಿಗೆ ಕೈಗಾರಿಕೆಗಳಿಂದ ಬರುವ ಹಾನಿಕಾರಕ ಸೈನೈಡ್ , ಹೈಡ್ರೋಕಾರ್ಬನ್ ,  ಇಂಡಿಗೋ , ಆಂಥ್ರಾಕ್ವಿನೋನ್,  ಸಲ್ಫರ್ , ನೈಟ್ರೋಜನ್  ಮುಂತಾದ ಆಸಿಡ್ ಡೈ ಗಳನ್ನು ಯಾವ ಶುದ್ಧಿಕರಣ ಇಲ್ಲದೇ ಬಿಡಲಾಗಿದೆ. ಜೊತೆ ಅತಿ ಹೆಚ್ಚು ಪ್ರಮಾಣದ ಕ್ಲೋರೈಡ್ ಆ ನೀರಿನಲ್ಲಿ  ಕಂಡುಬಂದಿದೆ.  ಕಸರಾಡಿ ನದಿಯ ಬಯಾಲಜಿಕಲ್ ಆಕ್ಸಿಜನ್ ಡಿಮಾಂಡ್  ನ ಪ್ರಮಾಣ 80mg/l  ಆಗಿದೆ . ಇದು ಅಪಾಯಕಾರಿ ಮಟ್ಟಕಿಂತ 14 ಪಟ್ಟು ಹೆಚ್ಚು .  BOD ಪ್ರಮಾಣ ಜಾಸ್...

ವಾಟರ್ ಮೆಲನ್ ಹಿಮ

ವಾಟರ್ ಮೆಲನ್ ಹಿಮ  ಹಿಮ ಎಂದರೆ ಅಚ್ಚ ಬಿಳಿ ಹಿಮ ಎಂದರೆ ಶುಭ್ರ  ಹತ್ತಿಯ ಹಾಗೆ , ಹಾಲಿನಹಾಗೆ ಪರ್ವತಗಳನ್ನು ಆವರಿಸಿರುವ ಹಿಮವನ್ನು ನೋಡಿರುತ್ತೇವೆ.  ಪಿಂಕು ಪಿಂಕು ಬಣ್ಣದ ಹಿಮದ ಬಗ್ಗೆ ಕೇಳಿದ್ದೀರಾ‌..?  ಯುರೋಪಿನ ಆಲ್ಪ್ಸ್ ಪರ್ವತ ಶ್ರೇಣಿಯಲ್ಲಿ‌  ಹಿಮ ತಿಳಿಗುಲಾಬಿ ಬಣ್ಣಕ್ಕೆ ಬದಲಾಗಿದೆ.  ಎಷ್ಟು ಚಂದ ಅಲ್ವ... ಗುಲಾಬಿ ಹಿಮ  ಇದಕ್ಕೆ ಕಾರಣವೇನು ಅಂತ ಹುಡುಕ್ತಾ ಹೋದಾಗ ಮೊದಲಿಗೆ ಸ್ಥಳೀಯರು ಕಬ್ಬಿಣದ ಆಕ್ಸೈಡ್ ಹಿಮದೊಂದಿಗೆ ಬೆರೆತಿರಬಹುದು ಅಂದುಕೊಂಡಿದ್ದರೆ  ಮತ್ತೆ ಕೆಲವರು ಯಾವುದಾದರೂ ಮರದಿಂದ ಈ ಬಣ್ಣ ಬಂದಿರಬಹುದು ಅಂತ ಊಹಿಸಿದ್ದರು . ಇದೇನಾದ್ರೂ ಭಾರತದಲ್ಲಿ ಆಗಿದ್ದಿದ್ದರೆ ನಮ್ಮ ಮಾಧ್ಯಮಗಳು ರಕ್ತಪಿಪಾಸು ಹಿಮ , ರಣಗೆಂಪು ಬಣ್ಣದ ಹಿಮದ ಹಿಂದಿದ್ಯಾ ಮನುಕುಲದ ನಾಶ‌..?  ಅಂತ ಬ್ರೇಕಿಂಗ್ ನ್ಯೂಸ್ ಮಾಡ್ತಿದ್ವು ...  ವೈಜ್ಞಾನಿಕವಾಗಿ ಇದು ಒಂದು ಅಲಾರ್ಮಿಂಗ್ ಅಥವಾ ಅಲರ್ಟ್ ಆಗಬೇಕಾದ ಬದಲಾವಣೆ.  ಈ ಹಿಂದೆ ಗ್ರೀನ್ ಲ್ಯಾಂಡ್ , ಅಂಟಾರ್ಟಿಕಾದ ಕೆಲ ಭಾಗ , ಕ್ಯಾಲಿಫೋರ್ನಿಯಾದಲ್ಲಿ ಕೂಡಾ ಈ ಹಿಂದಿನ ಕೆಲ ವರ್ಷಗಳಲ್ಲಿ ಕಾಣಿಸಿಕೊಂಡಿತ್ತು.  ಇದಕ್ಕೆ ಕಾರಣ ಒಂದು ಬಗೆಯ  ಶೈವಲ ( ಆಲ್ಗಾ ) ಅಥವಾ ಕೆರೆಯಲ್ಲಿ ಕಂಡುಬರುವ ಪಾಚಿ ಇದ್ದಂತೆ. Chlamydomonas nivelis  ಎಂಬ ಒಂದು ಆಲ್ಗೆ  .  ಹಸಿರು ಶೈವಲಗಳ ಗುಂಪಿಗೆ ಸೇರಿದ ಇದು chl...

ಆಷಾಢ

ಮುಗಿಯಲೊಲ್ಲದ ಆಷಾಢ ಸಾಲು ದೀಪದ ಕುಡಿಯು ತುಡಿಯುವುದು ನಿನಗಾಗಿ  ನಿನ್ನ ಕನವರಿಕೆಯ ಸುಳಿಯ ನಡುವೆ.. ದೀಪವಾರಿಸೋ ಇರುಳ ಒಳ ಉಸಿರು ಸುಮ್ಮನೇ  ತೋಳಲ್ಲಿ ನನ್ನ ಬಳಸು.. ಈ ಎಲ್ಲ ಹಂಬಲ ಎಷ್ಟು ಎಳಸು ನಿಟ್ಟುಸಿರಿಗಿಲ್ಲಿ ತುಯ್ಯುತಿದೆ ದೀಪ   ಕಣ್ಣ ಕವಿತೆ ಓದುವ ನೀ ಬರುವಷ್ಟರಲೇ  ದೀಪವಾರಿಸಿ ಬಿಡಬಹುದು ತಂಗಾಳಿ  ನೆಪ ಹುಡುಕಿ ಮಾತು ಮರೆಸಿ ರೆಪ್ಪೆಯ ಆಯದಲಿ ಮಲಗಿಸಿಬಿಡು  ಜಗತ್ತು ಹೊಟ್ಟೆ ಕಿಚ್ಚಿನಲಿ ಉರಿದು ಹೋಗಲಿ   ಕಿಡಿ ಹಾರುವುದೇ ನಿಕ್ಕಿ ಎಂದಮೇಲೆ  ಕುಡಿಹುಬ್ಬು ಹಾರಿಸಿ  ತೆಕ್ಕೆಗೆಳೆದುಕೊಳ್ಳೋದೂ ಅಪರಾಧವಲ್ಲ ಬಿಡು  ನಿದ್ರಿಸದ ರಾತ್ರಿಗಳ ಹಿತದ ಮುಗುಳು  ಇರುಳಿಂದ ಜಾರಿ ಕೆನ್ನೆ ಬಟ್ಟಲ ಒಲವ ಪಾಕದಲಿ ಬಿದ್ದ ಜಾ ಮೂನು ರುಚಿನೋಡಲು ದಕ್ಕಿದ್ದು ಬೆರಳಿಗಂಟಿದ ಬೆರಗು

ಲೋಕಸ್ಟ್ ಮಿಡತೆ ದಾಳಿ

ಲೋಕಸ್ಟ್ ಮಿಡತೆ ದಾಳಿ ದುರ್ಭೀಕ್ಷದಲ್ಲಿ ಅಧಿಕ ಮಾಸ ಅನ್ನೋ ಹಾಗೆ  ಒಂದೆಡೆ ಕೊರೋನಾ ಜೀವ ತೆಗಿತಾ ಇದ್ದರೆ ಮತ್ತೊಂದೆಡೆ ಅಂಫಾನ್ ನಂತಹ ಪ್ರಾಕೃತಿಕ ವಿಕೋಪಗಳು ಇಷ್ಟು ಸಾಲದು ಅಂತ ಈಗ ಗುಜಾರಾತ್ ರಾಜಸ್ಥಾನಗಳನ್ನು  ಅಟ್ಯಾಕ್ ಮಾಡಿರುವ ಲೊಕಸ್ಟ್ ಅನ್ನೋ ಮಿಡತೆಗಳು ...   Locust ಅಥವಾ desert locust ಗಳು  acredidae ಕುಟುಂಬಕ್ಕೆ ಸೇರಿವೆ. ನೋಡೋಕೆ ಮಿಡತೆ ತರ ಕಂಡರೂ ಅದಕಿಂತ ಭಿನ್ನ .    ಈ ಲೋಕಸ್ಟ್ ಮಿಡತೆಗಳು ತಮ್ಮ ದೇಹದ‌ ತೂಕದಷ್ಟೇ  ಆಹಾರ ತಿನ್ನಬಲ್ಲವು ಅಂದ್ರೆ  ಒಬ್ಬ ಐವತ್ತು ಕೆಜಿ ಮನುಷ್ಯ ಇದ್ದರೆ ಐವತ್ತು ಕೆಜಿ ಆಹಾರ ಒಂದು ದಿನಕ್ಕೆ ತಿನ್ನುವ ಹಾಗೆ . ಒಂದು square km ನ ವಿಸ್ತಾರದಲ್ಲಿ 35000 ಜನರ ಆಹಾರವನ್ನು ಒಂದು ಗುಂಪು ತಿನ್ನಬಲ್ಲದು.  ಈ ಗುಂಪಿನಲ್ಲಿ 150000000  ಮಿಡತೆಗಳು ಅಂದರೆ ನೂರೈವತ್ತು ಮಿಲಿಯನ್ ಮಿಡತೆಗಳು ಏಕಕಾಲಕ್ಕೆ ದಾಳಿ ಮಾಡುತ್ತವೆ.  ಈ ರೀತಿಯ ಮಿಡತೆ ದಾಳಿಗೂ  ಬದಲಾಗುತ್ತಿರುವ ಹವಾಮಾನಕ್ಕೂ ನೇರ ನಂಟಿದೆ.  ಈ ಮಿಡತೆಗಳ ಹೆಸರೇ ಡೆಸರ್ಟ್ ಲೋಕಸ್ಟ್ ಅಂದರೆ ಮರುಭೂಮಿ , ಒಣ ಪ್ರದೇಶದಲ್ಲಿ ಬದುಕುವ ಕೀಟಗಳು.  ಈಗ ಪ್ರಸ್ತುತ ಆಫ್ರಿಕಾ ಮತ್ತು ಏಷಿಯಾ ಖಂಡದ ಮೇಲೆ ದಾಳಿ ನಡೆಸಿವೆ. ಇದೇ ಎರಡು ಏಕೆ  ಅಂದರೆ  ಇಲ್ಲಿ ಮಳೆ 200mm ಗಿಂತ ಕಮ್ಮಿ ಇಲ್ಲಿನ ಶುಷ್ಕ ವಾತಾವರಣ ಅದರ ಸಂತಾನಾಭಿವೃದ್ಧಿಗೆ , ಮತ್ತು ಹ...

ಶ್ರೀರಾಮಚಂದ್ರಂ ಭುವನಕೀಯಲಿ

ಶ್ರೀರಾಮಚಂದ್ರಂ ಭುವನಕೀಯಲಿ ನಿತ್ಯ ಕ್ಷೇಮವಂ||ಪ|| ಸಾಧು ಜನ ಲೋಕದೊಳ್ ಸಾಧಿತಾರ್ಥರಾಗಿರಲಿ ಆದಿ ವ್ಯಾಧಿ ದುರ್ಭಿಕ್ಷಂಗಳ ಬಾಧೆ ತಪ್ಪಲಿ ||ಅಪ|| ವರವರ್ಣಾಶ್ರಮ ಧರ್ಮಗಳ್  ಮೆರೆಯಲಿ ಸಂಪೂರ್ಣತೆಯಿಂ  ಧರೆಯನಾಳದವ ನೃಪರು ಧರ್ಮದಿ ಪೊರೆಯಲೀ ಜನರ || ೧|| ಜನರೊಳೈಕಮತ್ಯಮಂ  ವಿಮಲ ವಿದ್ಯಾ ವೈಭವವಂ  ಅನಿಷಂ ಪೆರ್ಚುಗೆ ಹರಿಯಬಿಡದೇ  ನೆನೆವ ಸುಮತಿಯ ||೨|| ಕುಮತಿ ನಷ್ಟವಾಗಲಿ  ಸುಮ ಶರ ಜನ ಘನ ಕೃಪೆಯಿಂ  ವಿಮಲಜ್ಞಾನ ಸೂರ್ಯನಿಂ ಭ್ರಮ ತಮವು ಪೋಗಲಿ ||೩|| ಬನಶಂಕರಿ ಸೋದರಂ ಘನಸಚ್ಚಿದಾನಂದಮಯಂ  ಜನರ ದುರಿತಗಳನು ನೀಗಿ  ಮನದಿ ನೆಲೆಸಲಿ ||೪||