ಶ್ರೀರಾಮಚಂದ್ರಂ ಭುವನಕೀಯಲಿ ನಿತ್ಯ ಕ್ಷೇಮವಂ||ಪ||
ಸಾಧು ಜನ ಲೋಕದೊಳ್ ಸಾಧಿತಾರ್ಥರಾಗಿರಲಿ ಆದಿ ವ್ಯಾಧಿ ದುರ್ಭಿಕ್ಷಂಗಳ ಬಾಧೆ ತಪ್ಪಲಿ ||ಅಪ||
ವರವರ್ಣಾಶ್ರಮ ಧರ್ಮಗಳ್
ಮೆರೆಯಲಿ ಸಂಪೂರ್ಣತೆಯಿಂ
ಧರೆಯನಾಳದವ ನೃಪರು ಧರ್ಮದಿ ಪೊರೆಯಲೀ ಜನರ || ೧||
ಜನರೊಳೈಕಮತ್ಯಮಂ
ವಿಮಲ ವಿದ್ಯಾ ವೈಭವವಂ
ಅನಿಷಂ ಪೆರ್ಚುಗೆ ಹರಿಯಬಿಡದೇ
ನೆನೆವ ಸುಮತಿಯ ||೨||
ಕುಮತಿ ನಷ್ಟವಾಗಲಿ
ಸುಮ ಶರ ಜನ ಘನ ಕೃಪೆಯಿಂ
ವಿಮಲಜ್ಞಾನ ಸೂರ್ಯನಿಂ ಭ್ರಮ ತಮವು ಪೋಗಲಿ ||೩||
ಬನಶಂಕರಿ ಸೋದರಂ ಘನಸಚ್ಚಿದಾನಂದಮಯಂ
ಜನರ ದುರಿತಗಳನು ನೀಗಿ
ಮನದಿ ನೆಲೆಸಲಿ ||೪||
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ