ಲೋಕಸ್ಟ್ ಮಿಡತೆ ದಾಳಿ
ದುರ್ಭೀಕ್ಷದಲ್ಲಿ ಅಧಿಕ ಮಾಸ ಅನ್ನೋ ಹಾಗೆ ಒಂದೆಡೆ ಕೊರೋನಾ ಜೀವ ತೆಗಿತಾ ಇದ್ದರೆ ಮತ್ತೊಂದೆಡೆ ಅಂಫಾನ್ ನಂತಹ ಪ್ರಾಕೃತಿಕ ವಿಕೋಪಗಳು ಇಷ್ಟು ಸಾಲದು ಅಂತ ಈಗ ಗುಜಾರಾತ್ ರಾಜಸ್ಥಾನಗಳನ್ನು ಅಟ್ಯಾಕ್ ಮಾಡಿರುವ ಲೊಕಸ್ಟ್ ಅನ್ನೋ ಮಿಡತೆಗಳು ...
Locust ಅಥವಾ desert locust ಗಳು acredidae ಕುಟುಂಬಕ್ಕೆ ಸೇರಿವೆ. ನೋಡೋಕೆ ಮಿಡತೆ ತರ ಕಂಡರೂ ಅದಕಿಂತ ಭಿನ್ನ .
ಈ ಲೋಕಸ್ಟ್ ಮಿಡತೆಗಳು ತಮ್ಮ ದೇಹದ ತೂಕದಷ್ಟೇ ಆಹಾರ ತಿನ್ನಬಲ್ಲವು ಅಂದ್ರೆ ಒಬ್ಬ ಐವತ್ತು ಕೆಜಿ ಮನುಷ್ಯ ಇದ್ದರೆ ಐವತ್ತು ಕೆಜಿ ಆಹಾರ ಒಂದು ದಿನಕ್ಕೆ ತಿನ್ನುವ ಹಾಗೆ . ಒಂದು square km ನ ವಿಸ್ತಾರದಲ್ಲಿ 35000 ಜನರ ಆಹಾರವನ್ನು ಒಂದು ಗುಂಪು ತಿನ್ನಬಲ್ಲದು.
ಈ ಗುಂಪಿನಲ್ಲಿ 150000000 ಮಿಡತೆಗಳು ಅಂದರೆ ನೂರೈವತ್ತು ಮಿಲಿಯನ್ ಮಿಡತೆಗಳು ಏಕಕಾಲಕ್ಕೆ ದಾಳಿ ಮಾಡುತ್ತವೆ.
ಈ ರೀತಿಯ ಮಿಡತೆ ದಾಳಿಗೂ ಬದಲಾಗುತ್ತಿರುವ ಹವಾಮಾನಕ್ಕೂ ನೇರ ನಂಟಿದೆ.
ಈ ಮಿಡತೆಗಳ ಹೆಸರೇ ಡೆಸರ್ಟ್ ಲೋಕಸ್ಟ್ ಅಂದರೆ ಮರುಭೂಮಿ , ಒಣ ಪ್ರದೇಶದಲ್ಲಿ ಬದುಕುವ ಕೀಟಗಳು.
ಈಗ ಪ್ರಸ್ತುತ ಆಫ್ರಿಕಾ ಮತ್ತು ಏಷಿಯಾ ಖಂಡದ ಮೇಲೆ ದಾಳಿ ನಡೆಸಿವೆ. ಇದೇ ಎರಡು ಏಕೆ ಅಂದರೆ ಇಲ್ಲಿ ಮಳೆ 200mm ಗಿಂತ ಕಮ್ಮಿ ಇಲ್ಲಿನ ಶುಷ್ಕ ವಾತಾವರಣ ಅದರ ಸಂತಾನಾಭಿವೃದ್ಧಿಗೆ , ಮತ್ತು ಹೆಚ್ಚಾಗಿ ಸಿಗುವ ಆಹಾರಕ್ಕಾಗಿ ದಾಳಿ ಮಾಡುತ್ತವೆ..
ಕಳೆದ ಐದು ಹತ್ತು ವರ್ಷಗಳಲ್ಲಿ ಅತಿ ಹೆಚ್ಚು ತಾಪಮಾನ ಇದ್ದು ನಂತರ ಅಕಾಲಿಕವಾಗಿ ಮಳೆ ಆದಾಗ ಅದರ ಸಂತಾನೋತ್ಪತ್ತಿಗೆ ಬಹಳ ಪ್ರಶಸ್ತ .
ಇದರ ಜೀವನ ಚಕ್ರವು ಐದು ಇನ್ಸ್ಟಾರ್ ಗಳನ್ನಹೊಂದಿದೆ. Instar ಅಂದರೆ ವಯಸ್ಕನಾಗಿ ರೂಪಾಂತರ ಹೊಂದುವ ಮಧ್ಯಂತರ ಸ್ಥಿತಿ . ಇವು ತುಂಬ ಹಸಿವಿರುವ ಬಕಾಸುರನ ತರ . instar ಗಳು ಜಿಗಿಯುತ್ತವೆ .ವಯಸ್ಕ ಮಿಡತೆಗಳು ರೆಕ್ಕೆಯ ಸಹಾಯದಿಂದ ಹಾರುತ್ತವೆ .ಮಿಲನದ ನಂತರ ಹೆಣ್ಣು ತುಂಬ ತೇವಾಂಶ ಇರುವ ಮಣ್ಣಿನೊಳಗೆ ಮೊಟ್ಟೆಯಚೀಲಗಳನ್ನು ಇಡುತ್ತದೆ. ಅದರಲ್ಲಿ ನೂರರಿಂದ ನೂರೈವತ್ತು ಮೊಟ್ಟೆಗಳಿರಬಹುದು.
ಒಂದು ವಯಸ್ಕ ಕೀಟ 25 set ಗಳಾಗುವಷ್ಟು ಸಂತಾನೋತ್ಪತ್ತಿ ತುಂಬ ವೇಗವಾಗಿರುತ್ತದೆ. ಮತ್ತು ಫೆರಮೋನ್ ಎಂಬ ಕೆಮಿಕಲ್ ಅನ್ನು ಸ್ರವಿಸಿ ಅದರಿಂದ ಎಲ್ಲ ಮಿಡತೆಗಳು ಸಹ ಒಂದೇ ಗುಂಪಿನಲ್ಲಿ ಇದ್ದು ದಾಳಿ ಮಾಡಲು ಯೋಜಿಸುತ್ತವೆ .
ಆಫ್ರಿಕಾದ ಕೀನ್ಯಾ ಉಗಾಂಡ ,ಇಥಿಯೋಪಿಯಾ ತಾಂಜಾನಿಯಾ ಸೋಮಾಲಿಯಾ , ಸೂಡಾನ್ ಮುಂತಾದ ದೇಶಗಳಲ್ಲಿ ಅತಿ ಹೆಚ್ಚಿನ ಹಾನಿ ಮಾಡಿದೆ. ಕಳೆದ ಇಪ್ಪತ್ತೈದು ವರ್ಷದಲ್ಲಿ ಕೇಳರಿಯದಂತ ದಾಳಿ ಎಂದು ಹೇಳಲ್ಪಟ್ಟಿದೆ.
ಇವು ಎಷ್ಟುಶಕ್ತಿಶಾಲಿಗಳು ಅಂದ್ರೆ ಆಫ್ರಿಕಾದಿಂದ ಈಗ ಏಷಿಯಾಕ್ಕೂ ಬಂದಿವೆ. ಪಾಕಿಸ್ಥಾನ , ಸೋಮಾಲಿಯಾ ದೇಶಗಳು ಆಹಾರದ ತುರ್ತು ಪರಿಸ್ಥಿತಿಯನ್ನ ಘೋಷಿಸಿವೆ.
ಪಾಕಿಸ್ಥಾನದ ಮೂಲಕ ಗುಜರಾತ್ , ರಾಜಸ್ಥಾನ , ಪಂಜಾಬ್ ಹರ್ಯಾಣ ,ಮಧ್ಯಪ್ರದೇಶದ ತನಕ ಬಂದಿರುವ ದಾಳಿ ಒಣ ಪ್ರದೇಶ ಹೊಂದಿರುವ ಎಲ್ಲ ಸ್ಥಳಗಳಿಗೂ ಬರುವ ಸಾಧ್ಯತೆ ದಟ್ಟವಾಗಿದೆ.
ಈ ದಾಳಿಯ ಕೆಟ್ಟ ಪರಿಣಾಮಗಳನ್ನು ಎದುರಿಸುವುದು ಬಡ ರಾಷ್ಟ್ರಗಳೇ ಎಂಬುದನ್ನೂ ನಾವು ಗಮನಿಸಬೇಕು..
ಇನ್ನು ಇದನ್ನು ನಿಯಂತ್ರಿಸುವ ಬಗ್ಗೆ ಬಹಳ ಚರ್ಚೆಗಳಾಗ್ತಾ ಇವೆ .
ಆರ್ಗಾನೊ ಫಾಸ್ಫೆಟ್ ಎಂಬ ಕೀಟನಾಶಕವನ್ನು ಏರಿಯಲ್ ಸ್ಪ್ರೇ ಮಾಡಬಹುದು . ಆದರೆ ಅದರ ಪರಿಣಾಮ ಎಂಡೋಸಲ್ಫಾನ್ ನಷ್ಟೇ ಅಪಾಯಕಾರಿ.
ಜೈವಿಕ ಕೀಟನಾಶಕಗಳ ಕೊರತೆ ಕೂಡ ಇದಕ್ಕೆ ಪ್ರಮುಖ ಕಾರಣ ಅನ್ನಬಹುದು .
ಜೈವಿಕ ಕೀಟನಾಶಕಗಳೆಂದರೆ
ಕೀಟಹಾರಿ ಕಣಜಗಳು , ಒಂದಷ್ಟು ಹಲ್ಲಿಯಂತಹ ಸರೀಸೃಪಗಳು ಮತ್ತು ಹಕ್ಕಿಗಳು ಮಾತ್ರ ಇದನ್ನು ನಾಶಪಡಿಸಬಹುದು ಅಥವಾ ಅವುಗಳ ಸಂಖ್ಯೆಯನ್ನು ನೈಸರ್ಗಿಕವಾಗಿ ಕಡಿಮೆ ಮಾಡಬಹುದು .
ಜೊತೆಗೆ entemo pathogenic fungus ಗಳನ್ನೂ ಬಳಸಬಹುದು .
(ಕೀಟಗಳಿಗೆ ಜೀವಹಾನಿ ಮಾಡಬಲ್ಲ ಫಂಗಸ್ ) ಇವು ಯಾವುದೇ ರೀತಿಯ ಪರಿಸರಕ್ಕೆ ಹಾನಿಯಾಗದ ರೀತಿಯ ಪರಿಹಾರಗಳು.
ಜೀವವೈವಿಧ್ಯದಲ್ಲಿ ಎಲ್ಲವೂ ಒಂದಕ್ಕೊಂದು ಅವಲಂಬಿತವಾದ ವ್ಯವಸ್ಥೆ ಇಲ್ಲಿ ಒಂದು ಕೊಂಡಿ ಸಡಿಲವಾದರೂ ಸಹ ಇಡೀ ವ್ಯವಸ್ಥೆ ಹಾಳಾಗುತ್ತದೆ.
ಬದಲಾಗುತ್ತಿರುವ ಹವಾಮಾನ , ಅಕಾಲಿಕ ಮಳೆ , ಎಲ್ಲವೂ ಸೇರಿ ಈಗ ಇಂತಹ ಸಂದಿಗ್ಧಕ್ಕೆ ಎಡೆ ಮಾಡಿಕೊಟ್ಟಿದೆ...
ಒಂದೇ ಒಂದು ಕಿಟಿಕಿಟಿ ಮಾಡೊ ಸಿಕಾಡಾನೋ , ಮಳೆ ಹುಳವೋ ರೆಕ್ಕೆ ಹುಳವೋ ಮನೆಯೊಳಗೆ ಬಂದರೆ ಅಸಹ್ಯ ಪಡುವ ನಾವು ಇಷ್ಟು ಪ್ರಮಾಣದಲ್ಲಿ ದಾಳಿ ಮಾಡಿದಾಗ ಹೇಗಿರಬಹುದು .
ಅಕಾಲಿಕವಾಗಿ ಯಾವಯಾವಾಗೋ ಮಳೆ ಬಂದ ದಿನ ನಮ್ಮ ಹಾಸ್ಟೆಲಿನ ಗೋಡೆ ಮೇಲೆಲ್ಲಾ ರಾಶಿ ರಾಶಿ ಕಪ್ಪು ಹುಳಗಳ ರಾಶಿ
ಎಷ್ಟು ಎಂದರೆ ಮಿನಿಮಮ್ ಐನೂರು ಒಂದು ರೂಮಿನಲ್ಲಿ ... ಇದೂ ಕೂಡ ಅಂತದ್ದೆ...
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ