ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಕೆಮಿಸ್ಟ್ರಿ ಪದ್ಯ

ಮಸ್ತ್ ಪದ್ಯ ...😁😁 ಈ chemistry ಇರಬಾರದಿತ್ತು; ಇದ್ದರೂ, ನಾನಿದನ್ನ ಕಲಿಯಬಾರದಿತ್ತು; ಈ labನಲ್ಲಿ ಆ ಕಣ್ಣುಗಳೊಡನೆ ಅಪಘಾತವಾದರು ತಪ್ಪುತಿತ್ತು; ಈಗ ತಾನೆ practicalನಲ್ಲಿ ಎದುರಾದಳವಳು; testubeನ ಮುಗಿನವಳು; ಒಂದು ನಮೂನಿಯ ಪ್ರೀತಿ ಕಣ್ಣಿನಿಂದ ಚಿಮ್ಮುತಿತ್ತು ಕುಡಿಯದೆ ನನಗೆ alcohol ನೆತ್ತಿಗೇರುತಿತ್ತು; ಮಾತಿನಲಿ glucoseನ ಸಿಹಿ ಮಕರಂದ; ಉಸಿರಾಟವೊ, Ester ಬೆರೆತ ಸುಗಂಧ; benzenನಂತೆ ಅವಳ presenceನ ಸೂಕ್ಷಮತೆ; ಕತ್ತಲಲಿ ಮಿನುಗುವ rediumನ ಪ್ರಖರತೆ; ಅವಳ ಮನೆ ಬೀದಿಗಳಲ್ಲಿ ಒಡಾಟಗಳು ಶುರುವಾವಂದು; neucleus ಸುತ್ತ electron ಸುತ್ತುವಂತೆ; ಒಂದೆ semister ಅಂತರದಲ್ಲಿ ಅಮರ ಪ್ರೇಮದ production; ಮರುದಿನವೆ ನನ್ನ testನ confirmation; ಬಿಡಿಸಿ ಹೇಳಬೇಕೆ...? ಆ ದಿನ ಅವಳ ಅಪ್ಪನ ಜೊತೆ introduction; ಸುದ್ದಿ ಕೇಳಿ ಭಾವಿ ಮಾವನ ಜಿಗದಾಟವೊ; unstable reaction ವಿವರವಾಗಿ  ಹೇಳಿದಂತೆ; ignition tubeನಿಂದ sodium ಆರ್ಭಟಿಸಿದಂತೆ; ಸಿಟ್ಟಿನಲ್ಲೆ ನುಡಿದರು; "ಪಡ್ಡೆ ಹುಡುಗರ ಎಚ್ಚರಗೊಳಿರಿ ನಿಮ್ಮ ಕಿಮ್ಮತ್ತನು ಅರಿಯಿರಿ" iron ಒಡನೆ goldನ್ನು  ಎಂದು ಹುಡುಕದಿರಿ; ಆಸೆಯ beaker ಚೂರಾಯಿತೆಂದು; ಸುಮ್ಮನಿದ್ದೆ benzoldehydeನ ಕಹಿ ಗುಟುಕು ನುಂಗುತ್ತಾ  ಅಂದು; ಈಗ ಅವಳ ನೆನಪುಗಳಿಲ್ಲದೆ ಕೆಲಸಗಳು ಸಾಗುತಿಲ್ಲ; ಮತ್ತೆ, ಆ labನಲ್ಲಿ ನನ್ನ ಹೃದಯದ ಹೊರೆತು burner ಮೇಲೆ ಮತ್ತೇ...
ಇತ್ತೀಚಿನ ಪೋಸ್ಟ್‌ಗಳು

ಐದು ಶುಕ್ರವಾರದ ಹಾಡು

ಇವತ್ತು ಹಾಗೇ ಶ್ರಾವಣ ಮಾಸದ ಸಂಪ್ರದಾಯದ ಐದು ಶುಕ್ರವಾರದ ಹಾಡು ಹೇಳ್ತಿದ್ದೆ.... ನಂಗಿಷ್ಟ ಆಗಿರೋ ಸಾಲುಗಳು .. ಹಹಹಹ 😄 😄  .ಭಕ್ಷ್ಯ ಶ್ಯಾವಿಗೆ ಪರಮಾನ್ನ ಚಿತ್ರಾನ್ನ ಸಣ್ಣಕ್ಕಿ ಶಾಲ್ಯಾನ್ನ ಸೂಪಗಳು ಚಕ್ಕುಲಿ ಗಿಲಗಂಜಿ ಚೆಂದದ್  ಚಿರೋಟಿ ಹಪ್ಪಳ ಸಂಡಿಗೆ ಆಂಬೋಡೆಗಳು ಸಕ್ಕರೆ ಘೃತ ಕ್ಷೀರ ಸಕಲ ಪಕ್ವಾನ್ನ ಮಂಡಿಗೆ ಬೀಸೋರಿಗೆ ಗುಳ್ಳೋರಿಗೆಯು ಚಂದ್ರನಂತೆ ಹೊಳೆವ ಶ್ಯಾವಿಗೆಯ ಫೇಣಿಯು ದಿವ್ಯ ಬೂಂದಿ ಬುರುಬುರಿ ಅನಾರಸವು ಬೇಕಾದ ಬೇಸನ್ನು ಬಿಳಿಯಾದ ಅರಳಿನುಂಡೆ ಮೋತಿಚೂರು ಚೂರ್ಮಲಾಡು ಸೇತು ಬಿಳುಪಿನ ಚಕ್ರದಂಥ ಜಿಲೇಬಿ ಸುಕಿನುಂಡೆ ಮುಖವಿಲಾಸಗಳು ಹೋಳಿಗೆ ಎಣ್ಣೋರಿಗೆ ಹೊಯ್ಗಡವು ಗೇಹೂರಿ ಕಾಯಿಹಾಲು ಕರಿದ ಹೂರಣ ಕಡುಬು ತೇಂಗೋಳಲು ತಿರುವಿದ ಉದ್ದಿನಬೇಳೆ ಮೆಣಸು ಜೀರಿಗೆ ಇಂಗು ಹಾಕಿದ ಉಪ್ಪಿನ ಕಡುಬು ಸಾರು ಸಾಂಬಾರ ಪಡುವಲಕಾಯಿ ಪಳದ್ಯ ಉಪ್ಪೇರಿ ಉಪ್ಪಿನಕಾಯಿರಸವು ಖೀರು ಮಾಲದಿ ಗೌಲಿ ಪರಡಿ ಪರಮಾನ್ನ ಮುಚ್ಚೋರೆ ಚಟ್ಟಣಿ ಕೋಸಂಬರಿಯು ಹಾಗಲವು ಹೀರೆ ಸೌತೆ ಹಂದರದ ಅವರೆ ಚೌಳಿ ಬಾಳೆ ಬೆಂಡೆ ಕುಂಬಳವು ಮಾಗಿದ ಹಲಸಿನ ಕಾಯಿ ಕಲಸಿ ಮೇಲೋಗರ ಗೆಣಸು ಗುಳ್ಳದಕಾಯಿ ಬಜ್ಜಿಗಳು ಸಬ್ಜಿಭಾತು ಸೌತೆಭಾತು ಕೇಸರೀ ಭಾತು ಕೆನೆಕೆನೆ ಮೊಸರು ಒಗ್ಗರಣೆ ಹಸಿ ಅಲ್ಲ ಬಿಸಿ ಹಾಲು ಹೊಸಬೆಣ್ಣೆ ಇಂಗುಪ್ಪು ಕಲಸಿ ಬಕಾಳಿ ಭಾತುಗಳು ಕಡಲೆ ಹೂರಣ ಗಸಗಸೆ ಕೊಬ್ಬರಿ ಏಲಕ್ಕಿ ಪುಡಿ ದ್ರಾಕ್ಷಿ ಉತ್ತತ್ತಿ ಹಳಕು ಕಲಸಿ ಕಲ್ಲುಸಕ್ಕರೆ ಕರಿಗಡುಬು ಬೆಣ್ಣೆ ಕಾಸೀ ತುಪ್ಪವ...

ಜೀವಜಗತ್ತಿನ ದೀಪಾವಳಿ

ಜೀವಜಗತ್ತಿನ ದೀಪಾವಳಿ ಇದು.. Noctilluca scintillan  ಒಂದು ಬಗೆಯ ಸೂಕ್ಷ್ಮ ಜೀವಿ‌. ಸ್ವಯಂಪ್ರಕಾಶವಾದ ಬೆಳಕನ್ನು ಹೊರಸೂಸಿ ಇಡೀ ಸಮುದ್ರದ ತೀರವನ್ನು ನೀಲಿ ಸೀರಿಯಲ್ ಲೈಟ್ ಹಾಕಿ ಅಲಂಕರಿಸಿದಂತೆ ಕಾಣುತ್ತದೆ.  ಇವುಗಳನ್ನು 1773 ರಲ್ಲಿ ಮೊದಲಬಾರಿಗೆ ಫೆಡ್ರಿಕ್ ಮುಲ್ಲರ್ sea sparkle ‌ಕಡಲ ತೀರದ ನಕ್ಷತ್ರ ಅಂತ ಹೆಸರಿಸಿದ.  ನಮ್ಮ ಕರ್ನಾಟಕದ ಉಡುಪಿಯ ಮಟ್ಟು ಬೀಚ್ ಮತ್ತೆ ಗೋಕರ್ಣದ ಬೀಚ್ ನಲ್ಲಿ ಇವು ಕಾಣಸಿಗುತ್ತಿದ್ದು ಯಾವಾಗ ಅದು ಡಿಸ್ಟರ್ಬ್ ಆಗುತ್ತೋ ಆಗ ಈ ರೀತಿ ಬಣ್ಣಕೆ ಕಾರಣ ಆಗುತ್ತದೆ .  ಆದರೆ ಈ ವಿಷಯ ತುಂಬ ಖುಷಿ ಪಡುವಂತದ್ದೇನೂ ಅಲ್ಲ . ಇದು ಅತಿ ವೇಗದಲ್ಲಿ ಪುನರುತ್ಪತ್ತಿ ಆಗುತ್ತಾ planktonic tide / red tide ಗೆ ಕಾರಣ ಆಗುತ್ತದೆ .  ನೀರಿನ ಪೂರ್ತಿ ಈ ಬಗೆಯ ಶೈವಲಗಳು ಆವರಿಸಿ ನೀರಿನಡಿಯ ಜೀವ ವೈವಿಧ್ಯಕೆ ಬೇಕಾದ ಸೂರ್ಯನ ಕಿರಣಗಳನ್ನು ನೀರಿನಡಿಗೆ ತಲುಪಲು ಅಡ್ಡಿಯಾಗುತ್ತವೆ‌  ಈ ಸೂಕ್ಷ್ಮಜೀವಿಗಳು ಫ್ಲಾಜೆಲ್ಲಾ ಎಂಬ ವಿಶೇಷ ಚಲನಾಂಗವನ್ನು ಹೊಂದಿದ್ದು ಅದೇ ಕಾರಣಕ್ಕೆ ಇದನ್ನು ಡೈನೋಫ್ಲಾಜೆಲ್ಲೇಟ್ ಗುಂಪಿಗೆ ಸೇರಿಸುತ್ತಾರೆ.  ಇದು ಥೇಟ್ ನಮ್ಮ ಮಿಂಚುಹುಳು ಹಳದಿ ಬೆಳಕನ್ನು ಬೀರಿದ ಹಾಗೆ ಲ್ಯೂಸಿಫೆರಿನ್ ಎಂಬ ಕೆಮಿಕಲ್ ಆಮ್ಲಜನಕದೊಡನೆ ವರ್ತಿಸಿ  ಈ ಬಣ್ಣ ಬೀರುತ್ತದೆ.  ಇತ್ತೀಚೆಗೆ ಇದು ಪ್ರವಾಸಿಗರ ಮುಖ್ಯ ಆಕರ್ಷಣೆ ಕೂಡಾ... 😁

ಕಡಲು

ಬಾನಂಗಳದ ತುಂಬೆಲ್ಲ‌ ಯಾರೋ  ಚಿತ್ತಾರ ಬಿಡಿಸಿಟ್ಟರು ಎವೆಯಿಕ್ಕದೆ ನೋಡಿ ಕಣ್ಣನೋಯಿಸಿಕೊಂಡೆನಷ್ಟೇ ಒಮ್ಮೊಮ್ಮೆ ಬದುಕೂ ಕೂಡ ಖಾಲಿಯೆಂತೆನಿಸುವುದು ಥೇಟು ನೀಲಿ ಬಾನಂತೆ. ಬೆನ್ನ ಹುರಿಯ ನೋವಿಗೆ ಬೆಚ್ಚಗಿನ ಮಜ್ಜನವೊಂದಾಗಲೇಬೇಕು ಮೈಸೆಡವಿಗೆ ಒಂದಷ್ಟು ಅತೃಪ್ತ ಸುಖ. ನೆತ್ತಿಮೇಲಿನ ನೀರಿಗೆ ಪಾದ ನೋಡುವ ಹುರುಪಿದೆ ನಡುವೆ ನಡೆವ ಸವರಿಕೆಗೆಲ್ಲ ಹಾದರದ ಮೆಲುಕೇ?. ಜಗಜ್ಜಾಹಿರಾಗಲಿ ಎಲ್ಲವೂ ಮುಚ್ಚಿಡುವುದೇನಿದೆ ಜಗದಿ ನಾಲ್ಕು ಗೋಡೆಯೊಳಗಿನದ್ದು ಒಳಗೇ ಇರಲಿ ಕೆಲವೊಂದು ಮಾತ್ರ  ಬಯಲಾಗದಿರಲಿ. ಈಗಷ್ಟೇ ಯಾರೋ ಬೆನ್ನಿಗಂಟಿಕುಳಿತರು ಬೆಚ್ಚಗಾಯಿತಷ್ಟೇ ದೇಹ ಒಂದೈದು ನಿಮಿಷ ಮತ್ತದೇ ಖಾಲಿತನದ ಪರಮಾವಧಿ ಮತ್ತೆ ತುಂಬಿಕೊಳಲು ಕಾಯಬೇಕು. ಕಡಲು😍

ದಿಹುಂಗ್ ಪಟ್ಕಾಯ್ ಅಭಯಾರಣ್ಯದಲ್ಲಿ ಗಣಿಗಾರಿಕೆ

ಮೊನ್ನೆ ಮೊನ್ನೆ ಶಿವಮೊಗ್ಗದ ಬಳಿಯ ಹುಣಸೋಡಿನಲ್ಲಿ ಅಕ್ರಮ ಗಣಿಗಾರಿಕೆಯ ಜಿಲಾಟಿನ್ ಸ್ಪೋಟವಾಗಿ ಸುತ್ತಲಿನ ನಾಕು ಜಿಲ್ಲೆಗಳಲ್ಲಿ ಭೂಕಂಪ ಆಯ್ತೇನೋ ಎನ್ನುವಷ್ಟು  ಸದ್ದಾಗಿ ಕಿಟಿಕಿಯ ಗಾಜುಗಳು ಆ ವೈಬ್ರೇಷನ್ ಗೆ ಪುಡಿಯಾಗಿ ಒಂದರೆ ಕ್ಷಣ ನಮ್ಮ ಸುತ್ತಲೇ ಇಷ್ಟು ಹತ್ತಿರದಲ್ಲೇ ನಮ್ಮ ವಿನಾಶದ ಮುನ್ನುಡಿ ಇದೆ ಅನ್ನೋದರ ಅರಿವಿರದೇ ಅರಾಮಾಗಿಯೇ ಇದ್ದೆವು. ಮುಂದೂ ಇರ್ತೀವೇನೋ  ಆದರೆ ಇದು ಮನುಷ್ಯರ ಕಥೆಯಾಯ್ತು...  ನಾವೆಲ್ಲ ಲಾಕ್ಡೌನ್ ಶುರುವಾಗಿ ಮನೆಮನೆಲೂ ಪಾನಿಪುರಿ ಮಾಡಿ ತಿಂದು ಸ್ಟೇಟಸ್ ಹಾಕುವ ಹೊತ್ತಿನಲ್ಲಿ  ರಾಷ್ಟ್ರೀಯ ವನ್ಯಜೀವಿ ಮಂಡಳಿ  ಅಭಯಾರಣ್ಯ ದಲ್ಲಿಯೂ ಗಣಿಗಾರಿಕೆ ಮಾಡಿ ಅಡ್ಡಿ ಇಲ್ಲ ಎಂಬ ಅನುಮತಿ ಕೊಟ್ಟಿತ್ತು.  ಎಸ್ ಇದಾಗಿದ್ದು ಕಳೆದ  ಏಪ್ರಿಲ್ ನಲ್ಲಿ  ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಮಧ್ಯ ಇರುವ ದಿಹುಂಗ್ ಪಟ್ಕಾಯ್ ಅಭಯಾರಣ್ಯದಲ್ಲಿ  ಕಲ್ಲಿದ್ದಲು ಗಣಿಗಾರಿಕೆ ಮಾಡಲು ಪ್ರಧಾನಿಯವರು ಅಧ್ಯಕ್ಷರಾಗಿರುವ ರಾಷ್ಟ್ರೀಯ ವನ್ಯಜೀವಿ ಮಂಡಳಿಯು ಈಶಾನ್ಯ ಕೋಲ್ ಫೀಲ್ಡ್ ಗೆ ಅನುಮತಿ ನೀಡಿದೆ .  ದಿಹುಂಗ್ ಎಂದರೆ ಬ್ರಹ್ಮಪುತ್ರ ನದಿ ಮತ್ತು ಪಟ್ಕಾಯ್ ಎಂದರೆ ಪರ್ವತ ಪ್ರದೇಶ ಅಂತ ಅರ್ಥ. ಈ ಪ್ರದೇಶವನ್ನು 2004 ರಲ್ಲಿ ಅಭಯಾರಣ್ಯ ಅಂತ ಘೋಷಣೆ ಮಾಡಲಾಗಿದೆ.  ಈ ಅಭಯಾರಣ್ಯವನ್ನು ಪೂರ್ವದ ಅಮೇಝಾನ್ ಕಾಡು ಅಂತಲೇ ಕರೆಯುತ್ತಾರೆ. ಅಷ್ಟು ಶ್ರೀಮಂತ ವನ್ಯಜೀವ ವೈವಿಧ್ಯ ಇರ...

ವಿಷಕ್ಕೆ ನಾವೆಷ್ಟು ಹತ್ತಿರ

ವಿಷಾನಿಲಕ್ಕೆ ನಾವೇನೂ ದೂರವಿಲ್ಲ . ವಿಶಾಖಪಟ್ಟಣದ ಅನಿಲ ದುರಂತ ಘಟಿಸಿದ ಹೊತ್ತಲ್ಲೇ ನಾವು ಎಷ್ಟು ಸುರಕ್ಷಿತ ಅನಿಸುತ್ತೆ.  ಕಳೆದ ನವೆಂಬರ್ ಹೊತ್ತಿಗೆ ತೋರಣಗಲ್ಲಿಗೆ ಹೋಗಿದ್ದೆ.  ಅಲ್ಲಿಂದ ಸ್ನೇಹಿತರೆಲ್ಲ ಸೇರಿ ಸಂಡೂರಿಗೂ ಕುಮಾರಸ್ವಾಮಿ ಬೆಟ್ಟಕ್ಕೂ ಹೋಗಿದ್ವಿ.  ಬೆಳಿಗ್ಗೆ ಹನ್ನೊಂದಾದರೂ ಬೆಟ್ಟಕ್ಕೆ ಅದೇನೋ ಮುಸುಕು . ಬಹುಷಃ ಚಳಿಗಾಲವಲ್ವಾ ಅದಕ್ಕೆ ಇಬ್ಬನಿ ಏನೋ ಅಂದುಕೊಳ್ಳೋದಕ್ಕೆ  ಆಗಲೆ 27°c ದಾಟಿದೆ ತಾಪಮಾನ .  ಯಾವ ಬೆಟ್ಟವೂ ಕ್ಲಿಯರ್ ಆಗಿ ಕಾಣದಷ್ಟು ಮುಸುಕು . ನಂತರ ಎರಡು ಗಂಟೆ ಹೊತ್ತಿಗೂ ಕೂಡಾ.. ನಮ್ಮ ಎದುರಿನ ಬೆಟ್ಟವೂ ಮಬ್ಬು .  ಇದೇನಪ ಅಂತ ನೋಡುವಾಗ  ಅದು ಖಾರ್ಕಾನೆಗಳಿಂದ ಬಂದ ಮಾಲಿನ್ಯಕಾರಕ ಹೊಗೆ‌.   ಕ್ಲಾಸಲ್ಲಿ ವಾಯುಮಾಲಿನ್ಯ ಅಂತ ಓದಿದ್ದು ಪ್ರಾಯೋಗಿಕವಾಗಿ ಎದುರಿಗ್ ನೋಡೋಕ್ ಸಿಕ್ತಾ ಇತ್ತು.  ಆರ್ಸೆನಿಕ್ , ನೈಟ್ರೋಜನ್ ಆಕ್ಸೈಡ್ , ಸಲ್ಫರ್ ಆಕ್ಸೈಡ್ , ಹೈಡ್ರೋಕಾರ್ಬನ್ ಗಳು ,  ಕ್ಯಾಡ್ಮಿಯಂ , ಲೆಡ್ , ಸತು , ಇನ್ನೂ ಇತ್ಯಾದಿ ಅನಿಲಗಳು ಅಲ್ಲೇ ಇರುವ ಸ್ಟೀಲ್ ಖಾರ್ಕಾನೆಗಳಿಂದ ಬಂದು ಎತ್ತರದಲ್ಲಿ  ಕೆಮಿಕಲ್ ಪದರವನ್ನೇ ನಿರ್ಮಾಣ ಮಾಡಿರುತ್ತೆ .  ಈ ಪದರದ ಮೂಲಕ ಮಳೆ , ಇಬ್ಬನಿ ಬಂದಾಗ ಆ ನೀರಿನ ಕಣಗಳ ಜೊತೆ ಈ ಕೆಮಿಕಲ್ ಗಳು ಸೇರಿ ವಾಪಸ್ ಭೂಮಿಗೆ ಬರುತ್ತವೆ . ಇದನ್ನ ಆಮ್ಲಮಳೆ  ಅಂತಲೂ ಇಬ್ಬನಿ ಮತ್ತು ಹೊಗೆ ತುಂಬಿದರೆ sm...

ನೀಲಿ ನಾಯಿ

ನಾಯಿ ನೀಲಿಯಾದ ಕಥೆ ಪ್ರಕೃತಿ ಎಲ್ಲವನೂ ಸಹಿಸ್ತಾಳೆ ಅಂತ ನಾವು ಹಾಳುಗೆಡುವುದರಲ್ಲಿ ನಿಸ್ಸೀಮರು. ಲಾಭದ ಆಸೆಗೆ ಅಳತೆ ಮೀರಿ ಕಾರ್ಖಾನೆಗಳಿಗೆ ಪರವಾನಗಿ ನೀಡುವ ಸರ್ಕಾರದ ಸಂಸ್ಥೆಗಳಿಗೆ ಮುಂದಾಗುವ ಪರಿಣಾಮಗಳ ಅರಿವಿಲ್ಲ . ಕಠಿಣ ಕಾನೂನುಗಳು ಬರಬೇಕಿದೆ.  ಈಗ ಹೇಳೋಕ್ ಹೊರಟಿರೋದು ಮುಂಬೈನ ಬೀದಿನಾಯಿಗಳು ನೀಲಿಯಾದ ಕಥೆಯನ್ನ.  ಮುಂಬೈನ ತಲೋಜಾ ಜಿಲ್ಲೆಯ ಕೈಗಾರಿಕಾ ಪ್ರದೇಶದಲ್ಲಿ  ಬೀದಿನಾಯಿಗಳು ನೀಲಿ ಬಣ್ಣಕ್ಕೆ ತಿರುಗಿವೆ. ತುಸು ಲಕ್ಷ್ಯ ಕೊಟ್ಟು ಕೇಳಿಸಿಕೊಳ್ಳಬೇಕಿದೆ.. ಈ ಕೈಗಾರಿಕಾ ಪ್ರದೇಶ ಒಂದರಲ್ಲೇ ಸಾವಿರಕ್ಕೂ ಅಧಿಕ ಔಷಧ ತಯಾರಿಕಾ ಕಂಪನಿಯ ಕಾರ್ಖಾನೆಗಳು , ಬಣ್ಣವನ್ನು ಉತ್ಪಾದಿಸೋ ಕಾರ್ಖಾನೆಗಳಿಗೆ ,ಕೆಮಿಕಲ್ ಕಾರ್ಖಾನೆಗಳಿಗೆ ಅವಕಾಶ ನೀಡಿದೆ . ಈ ಕೈಗಾರಿಕೆಗಳ ವಿಷಯುಕ್ತ ತ್ಯಾಜ್ಯ ಸೇರುವುದು ಅಲ್ಲಿಯೇ ಸಮೀಪದ ಕಸಾಡಿ ಎಂಬ ನದಿಗೆ .  ಈ ನದಿಗೆ ಕೈಗಾರಿಕೆಗಳಿಂದ ಬರುವ ಹಾನಿಕಾರಕ ಸೈನೈಡ್ , ಹೈಡ್ರೋಕಾರ್ಬನ್ ,  ಇಂಡಿಗೋ , ಆಂಥ್ರಾಕ್ವಿನೋನ್,  ಸಲ್ಫರ್ , ನೈಟ್ರೋಜನ್  ಮುಂತಾದ ಆಸಿಡ್ ಡೈ ಗಳನ್ನು ಯಾವ ಶುದ್ಧಿಕರಣ ಇಲ್ಲದೇ ಬಿಡಲಾಗಿದೆ. ಜೊತೆ ಅತಿ ಹೆಚ್ಚು ಪ್ರಮಾಣದ ಕ್ಲೋರೈಡ್ ಆ ನೀರಿನಲ್ಲಿ  ಕಂಡುಬಂದಿದೆ.  ಕಸರಾಡಿ ನದಿಯ ಬಯಾಲಜಿಕಲ್ ಆಕ್ಸಿಜನ್ ಡಿಮಾಂಡ್  ನ ಪ್ರಮಾಣ 80mg/l  ಆಗಿದೆ . ಇದು ಅಪಾಯಕಾರಿ ಮಟ್ಟಕಿಂತ 14 ಪಟ್ಟು ಹೆಚ್ಚು .  BOD ಪ್ರಮಾಣ ಜಾಸ್...