ವಿಷಾನಿಲಕ್ಕೆ ನಾವೇನೂ ದೂರವಿಲ್ಲ . ವಿಶಾಖಪಟ್ಟಣದ ಅನಿಲ ದುರಂತ ಘಟಿಸಿದ ಹೊತ್ತಲ್ಲೇ ನಾವು ಎಷ್ಟು ಸುರಕ್ಷಿತ ಅನಿಸುತ್ತೆ. ಕಳೆದ ನವೆಂಬರ್ ಹೊತ್ತಿಗೆ ತೋರಣಗಲ್ಲಿಗೆ ಹೋಗಿದ್ದೆ. ಅಲ್ಲಿಂದ ಸ್ನೇಹಿತರೆಲ್ಲ ಸೇರಿ ಸಂಡೂರಿಗೂ ಕುಮಾರಸ್ವಾಮಿ ಬೆಟ್ಟಕ್ಕೂ ಹೋಗಿದ್ವಿ. ಬೆಳಿಗ್ಗೆ ಹನ್ನೊಂದಾದರೂ ಬೆಟ್ಟಕ್ಕೆ ಅದೇನೋ ಮುಸುಕು . ಬಹುಷಃ ಚಳಿಗಾಲವಲ್ವಾ ಅದಕ್ಕೆ ಇಬ್ಬನಿ ಏನೋ ಅಂದುಕೊಳ್ಳೋದಕ್ಕೆ ಆಗಲೆ 27°c ದಾಟಿದೆ ತಾಪಮಾನ . ಯಾವ ಬೆಟ್ಟವೂ ಕ್ಲಿಯರ್ ಆಗಿ ಕಾಣದಷ್ಟು ಮುಸುಕು . ನಂತರ ಎರಡು ಗಂಟೆ ಹೊತ್ತಿಗೂ ಕೂಡಾ.. ನಮ್ಮ ಎದುರಿನ ಬೆಟ್ಟವೂ ಮಬ್ಬು . ಇದೇನಪ ಅಂತ ನೋಡುವಾಗ ಅದು ಖಾರ್ಕಾನೆಗಳಿಂದ ಬಂದ ಮಾಲಿನ್ಯಕಾರಕ ಹೊಗೆ. ಕ್ಲಾಸಲ್ಲಿ ವಾಯುಮಾಲಿನ್ಯ ಅಂತ ಓದಿದ್ದು ಪ್ರಾಯೋಗಿಕವಾಗಿ ಎದುರಿಗ್ ನೋಡೋಕ್ ಸಿಕ್ತಾ ಇತ್ತು. ಆರ್ಸೆನಿಕ್ , ನೈಟ್ರೋಜನ್ ಆಕ್ಸೈಡ್ , ಸಲ್ಫರ್ ಆಕ್ಸೈಡ್ , ಹೈಡ್ರೋಕಾರ್ಬನ್ ಗಳು , ಕ್ಯಾಡ್ಮಿಯಂ , ಲೆಡ್ , ಸತು , ಇನ್ನೂ ಇತ್ಯಾದಿ ಅನಿಲಗಳು ಅಲ್ಲೇ ಇರುವ ಸ್ಟೀಲ್ ಖಾರ್ಕಾನೆಗಳಿಂದ ಬಂದು ಎತ್ತರದಲ್ಲಿ ಕೆಮಿಕಲ್ ಪದರವನ್ನೇ ನಿರ್ಮಾಣ ಮಾಡಿರುತ್ತೆ . ಈ ಪದರದ ಮೂಲಕ ಮಳೆ , ಇಬ್ಬನಿ ಬಂದಾಗ ಆ ನೀರಿನ ಕಣಗಳ ಜೊತೆ ಈ ಕೆಮಿಕಲ್ ಗಳು ಸೇರಿ ವಾಪಸ್ ಭೂಮಿಗೆ ಬರುತ್ತವೆ . ಇದನ್ನ ಆಮ್ಲಮಳೆ ಅಂತಲೂ ಇಬ್ಬನಿ ಮತ್ತು ಹೊಗೆ ತುಂಬಿದರೆ sm...