ವಿಷಯಕ್ಕೆ ಹೋಗಿ

ಉರಿಯ ಉಯ್ಯಾಲೆ

ನನ್ನ ಮೆಚ್ಚಿನ ಪುಸ್ತಕ : ಉರಿಯ ಉಯ್ಯಾಲೆ
ಪುಸ್ತಕ ಓದೋದು ನನ್ನ ಹವ್ಯಾಸ .ಓದ್ತ ಓದ್ತಾ ನಾನೇ ಆ ಪಾತ್ರವಾಗಿ ತನ್ಮೂಲಕ ಆ ಪಾತ್ರದ ಭಾವನೆಗಳನ್ನು ಅರಿಯೋದು ನನಗೆ ಇಷ್ಟ
ಇದು ದ್ರೌಪದಿಯ ಸ್ವಗತ. ಹೆಸರಿಗೆ ತಕ್ಕಂತೆ ಅವಳ ಮನಸಿನ ಬೇಗುದಿಯ ಬೆಂಕಿಯ ಮೇಲೆಯೇ ಸದಾ ತೊಯ್ದಾಡುವ ಪರಿಸ್ಥಿತಿ ಅವಳದ್ದು....ಉರಿಯ ಉಯ್ಯಾಲೆ ಜೀಕಿದಂತೆಲ್ಲಾ ಅವಳ ವ್ಯಕ್ತಿತ್ವದ ವಿವಿಧ ಆಯಾಮಗಳೂ ತೆರದುಕೊಳ್ಳುತ್ತಾ ಹೋಗುತ್ತದೆ...ಮಹಾಭಾರತದ ಮಹತ್ತರ ಶಕ್ತಿ ಸ್ವರೂಪಿಣಿಯೂ, ಪ್ರಕೃತಿಯ ಪ್ರತಿರೂಪವೇ ದ್ರೌಪದಿ.ಅಗ್ನಿಸುತೆಯವಳು . ಅವಳು ಪ್ರಕೃತಿ-ಪುರುಷರ ನಡುವಿನ ಸಂಬಂಧದೆಡೆಗೆ ಬೆರಳು ತೋರಿ ತನ್ನ ಐವರು ಗಂಡಂದಿರ ಜೊತೆಗಿನ ಸಂಬಂಧವನ್ನೂ ಬಿಚ್ಚಿಡುತ್ತಾಳೆ.... ಈ ಐವರನ್ನೂ ಮೀರಿ ತನ್ನ ಮನಸಿಗೆ ಬರುತ್ತಿದ್ದ ಆ ಸುಂದರ ಯಾರು ಎಂಬ ಪ್ರಶ್ನೆಗೆ ಸ್ವತಃ ದ್ರೌಪದಿಯ ಬಳಿಯೂ ಉತ್ತರವಿಲ್ಲ . ವಸ್ತ್ರಾಪಹರಣ ಸಂದರ್ಭದಲ್ಲಿ , ತನ್ನ ಐವರು ಮಕ್ಕಳೂ ಒಂದೇದಿನ ಸತ್ತಾಗ ಆ ತಾಯಿ ಹೃದಯ ಅನುಭವಿಸಿದ ನೋವು,ತಲ್ಲಣ , ಅಸುರಕ್ಷತೆ, ಅಪಮಾನ, ಯಾರಿಗೂ ಬೇಡ. ದ್ರೌಪದಿಯ ಈ ನೋವು ಕೇವಲ ಸ್ತ್ರೀ ಸಹಜ ನರಳುವಿಕೆಯಲ್ಲದೇ ಪುರುಷ ಪ್ರಧಾನ ಸಮಾಜದ ಅಸ್ತಿತ್ವವನ್ನೇ ತಿವಿಯುತ್ತೆ.
ಮಾನಹರಣ ಕಾಲದಲ್ಲಿ ನೆರವಿಗೆ ಬರದ ಸಂಸ್ಕೃತಿ ನಿರುಪಯುಕ್ತ ಎನ್ನುತ್ತಾಳೆ. ಕೊನೆಗೆ ಮಳೆ ಬಂದು ತನ್ನ ಮನದ ಬಿಸಿ ತಣ್ಣಗಾಗಲಿ ಎಂದು ಆಶಿಸುತ್ತಾಳೆ. ದ್ರೌಪದಿ ಇಂದಿನ ಎಲ್ಲಾ ಹೆಣ್ಣು ಮಕ್ಕ‍ಳ ಶೋಷಿತ ದನಿಯಾಗಿದ್ದಾಳೆ.ಇಲ್ಲಿ ದ್ರೌಪದಿಯ ಸ್ವಗತ, ಸಂವೇದನೆ,ದೃಷ್ಟಿಕೋನದ ಮೂಲಕ ಕಾದಂಬರಿಯನ್ನು ಸುಂದರವಾಗಿ H S ವೆಂಕಟೇಶ್ ಮೂರ್ತಿಯವರು ಹೆಣೆದಿದ್ದಾರೆ. ನಾನಂತೂ ಭಾವುಕಳಾಗಿದ್ದೇನೆ...

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಕಲ್ಕಿ ಬಗೆಗೆ ಒಂದು ಅಭಿಪ್ರಾಯ

ಯಾರವನಲ್ಲಿ ದೂರದಲಿ... ಧಾವಿಸಿ ಬರುತಿಹ ಕ್ರೌರ್ಯದಲಿ... ಹಸಿವೆ....ದಾಹ....ರಕ್ತಾ..... ಇನ್ನೂ ಹಸಿವೆ    ಬಡವರ ಹೊಟ್ಟೆಯ ಬೆಂಕಿಯ ಹಸಿವೆ ಇನ್ನೂ ದಾಹ    ಬಡವರ ಗಂಟಲ ಬೇಗೆಯ ದಾಹ... ತುಂಬದೋ ಹೊಟ್ಟೆ ...         ಈ ಸಾಲುಗಳ...

ಮುಖವಾಡ

ಯಾವುದೋ ಊರಿನ ಸಂತೆ ನೆರೆದಿತ್ತು ಎಲ್ಲೆಡೆಯೂ ಗದ್ದಲ ಹಣ್ಣಿನಂಗಡಿ,  ತರಕಾರಿಯಂಗಡಿಗಳ ನಡುವಲ್ಲಿ ಜನರಿಂದ ಗಿಜಿಗುಡುವ ಒಂದು ಅಂಗಡಿ ಅದೇ ಮುಖವಾಡದಂಗಡಿ ಮುಖವಾಡ,  ಮುಖವಾಡ,  ತನ್ನತನವನೇ ಮರೆಯಿಸುವ ...

ಸಿಹಿ ನೆನಪಿನ ಸಂಚಿ

ನೀ ನನ್ನ ಸ್ವಂತ ಎಂಬ ಕನವರಿಕೆಯಲಿ ನೀನೀಗ ನನ್ನ ಜೊತೆಯಿಲ್ಲ ಎಂಬ ಕನಲಿಕೆಯೂ ಇದೆ ಈ ಕನಲಿಕೆ, ಕನವರಿಕೆಗಳ ನಡುವಲೂ ಒಂದು ಸಿಹಿಸುಖದ ಉಲುಹು ಇದೆ ಅದು ಸದಾ ನಿನ್ನನೇ ನೆನಪಿಸುತ್ತಿದೆ.