ಯಾವುದೋ ಊರಿನ ಸಂತೆ ನೆರೆದಿತ್ತು
ಎಲ್ಲೆಡೆಯೂ ಗದ್ದಲ
ಹಣ್ಣಿನಂಗಡಿ, ತರಕಾರಿಯಂಗಡಿಗಳ ನಡುವಲ್ಲಿ
ಜನರಿಂದ ಗಿಜಿಗುಡುವ ಒಂದು ಅಂಗಡಿ
ಅದೇ ಮುಖವಾಡದಂಗಡಿ
ಮುಖವಾಡ, ಮುಖವಾಡ,
ತನ್ನತನವನೇ ಮರೆಯಿಸುವ ಮುಖವಾಡ
ಭಾರೀ ಬೇಡಿಕೆಯಲ್ಲಿ ಮಾನವತೆಯ ಮುಖವಾಡ
ನೀವೂ ಕೊಳ್ಳಿರಿ ಮುಖವಾಡ
ಬಡವರು, ಧನಿಕರು , ಯುವಕರು, ಮುದುಕರು
ಹೀಗೇ ಎಲ್ಲರಿಂದ ಗಿಜಿಗುಡುತಿತ್ತು ಆ ಅಂಗಡಿ
ಅಲ್ಲಿಯೇ ಒಂದು ಬೋರ್ಡು ನೇತಾಡುತಿತ್ತು
ಒಂದು ಕೊಂಡರೆ ಒಂದು ಫ್ರೀ..
ನಗುವಿನ ಅಳುವಿನ ಸಂಚಿನ ಮಿಂಚಿನ
ಶಾಂತಿಯ ಸಹನೆಯ ಮುಖವಾಡ
ಬಗೆ ಬಗೆ ಬಣ್ಣದ ಬಗೆ ಬಗೆ ಕನಸಿನ
ಮುಖವಾಡ. ನೀವೂ ಕೊಳ್ಳಿರಿ ಮುಖವಾಡ
ಕೊಳೆತು ನಾರುತಿರುವ ಸಮಾಜಕ್ಕೆ ಔಷಧಿಯಂತೆ
ಸ್ವಸ್ಥತೆಯ ಮುಖವಾಡ
ಹೆಡ್ಡನೊಬ್ಬನು ಕೊಂಡನದೋ ಜ್ಞಾನಿಯ ಮುಖವಾಡ
ಸ್ವಾರ್ಥಿಯೊಬ್ಬ ಕೊಂಡುಕೊಂಡ ತ್ಯಾಗಿಯ ಮುಖವಾಡ
ಮನದೊಳಗೆ ಹಗೆಯ ಹೊಗೆಯನೇ ತುಂಬಿಕೊಂಡವನೊಬ್ಬ ಕೊಂಡ ಪ್ರೀತಿಯ ಮುಖವಾಡ
ಅನೈತಿಕತೆಯ ಕೆಸರು ಮೆತ್ತಿಸಿಕೊಂಡವನೊಬ್ಬ ಕೊಂಡ ನೈತಿಕತೆಯ ಮುಖವಾಡ
ನೀವೂ ಕೊಳ್ಳಿರಿ ಮುಖವಾಡ
ನಿತ್ಯ ಸಟೆಯನಾಡುವ ಅವನು ಕೊಂಡ
ಗಾಂಧಿಯ ಮುಖವಾಡ
ನೀಚರ ಕೈಯಲ್ಲಿ ಅನುಕಂಪದ ಮುಖವಾಡ
ಶೋಷಕನ ಬಳಿಯಲ್ಲಿ ಶೋಷಿತನ ಮುಖವಾಡ
ಉಗ್ರನೊಬ್ಬ ಕೊಳ್ಳುತಿದ್ದ ಬುದ್ಧನ ಮುಖವಾಡ
ಮುದುಕ ಕೊಳ್ಳುತಿದ್ದ ಯೌವ್ವನದ ಮುಖವಾಡ
ಪಕ್ಷಪಾತಿಯ ಕೈಯಲ್ಲಿ ನಿಷ್ಪಕ್ಷಪಾತದ ಮುಖವಾಡ
ಪ್ರೇಮಿಯೊಬ್ಬ ತೊಡಿಸಿದ್ದ ತನ್ನ ಪ್ರೇಯಸಿಯ ನೆನಪುಗಳಿಗೇ ಮರೆವಿನ ಮುಖವಾಡ
ಮರೆತಿದ್ದೆ ,
ನಮ್ಮನ್ನಾಳುವ ಜನ ಒಯ್ಯುತಿದ್ದರು
ಚೀಲಗಟ್ಟಲೇ ಮುಖವಾಡ.
ಸಮಯಕ್ಕೆ ತಕ್ಕಂತೆ ಬದಲಾಯಿಸಲು ಬೇಕಲ್ಲಾ..
ಮುಖವಾಡ ಇಲ್ಲದಿಹ ಮುಖವೊಂದೂ ಇಲ್ಲ
ಮುಖವಾಡದ ಹಿಂದೆ ನಿಜಮುಖವೇ ಮಾಯ
ಹುಡುಕ ಹೊರಟಿಹೆ ಮುಖವಾಡವಿಲ್ಲದಿಹ ಜನರನ್ನು
ಸಿಕ್ಕೇ ಸಿಗುತ್ತಾರೆ ಅನ್ನೋ ಭರವಸೆಯಿಂದಲ್ಲ
ಸಿಗಲಿ ಅನ್ನೋ ಸಣ್ಣ ನಿರೀಕ್ಷೆಯಿಂದ....
ಹೊಸ ಬ್ಲಾಗ್ ನಲ್ಲಿ ಹೊಸ ಕವನ - ಚೆನ್ನಾಗಿದೆ - ಅಭಿನಂದನೆಗಳು- ಮುರಳೀಧರ ಉಪಾಧ್ಯ ಹಿರಿಯಡಕ , link published in my blog- http://mupadhyahiri.blogspot.in
ಪ್ರತ್ಯುತ್ತರಅಳಿಸಿಹೊಸ ಬ್ಲಾಗ್ ನಲ್ಲಿ ಹೊಸ ಕವನ - ಚೆನ್ನಾಗಿದೆ - ಅಭಿನಂದನೆಗಳು- ಮುರಳೀಧರ ಉಪಾಧ್ಯ ಹಿರಿಯಡಕ , link published in my blog- http://mupadhyahiri.blogspot.in
ಪ್ರತ್ಯುತ್ತರಅಳಿಸಿಚೆನ್ನಾಗಿದೆ ಅಭಿನಂದನೆಗಳು
ಪ್ರತ್ಯುತ್ತರಅಳಿಸಿಚೆನ್ನಾಗಿದೆ ಅಭಿನಂದನೆಗಳು
ಪ್ರತ್ಯುತ್ತರಅಳಿಸಿಕಾವ್ಯಧ್ವನಿಪೂರ್ಣ ಕವಿತೆ
ಪ್ರತ್ಯುತ್ತರಅಳಿಸಿ-ರಾಜೇಂದ್ರ ಪಾಟೀಲ್
9591323453
ಕಾವ್ಯಧ್ವನಿಪೂರ್ಣ ಕವಿತೆ
ಪ್ರತ್ಯುತ್ತರಅಳಿಸಿ-ರಾಜೇಂದ್ರ ಪಾಟೀಲ್
9591323453
ಚೆನ್ನಾಗಿ ಬರೆದಿದ್ ಚೆನ್ನಾಗಿ ಬರೆದಿದ್ದೀರ ಧನ್ಯವಾದಗಳು
ಪ್ರತ್ಯುತ್ತರಅಳಿಸಿ