ಲೋಕಸ್ಟ್ ಮಿಡತೆ ದಾಳಿ ದುರ್ಭೀಕ್ಷದಲ್ಲಿ ಅಧಿಕ ಮಾಸ ಅನ್ನೋ ಹಾಗೆ ಒಂದೆಡೆ ಕೊರೋನಾ ಜೀವ ತೆಗಿತಾ ಇದ್ದರೆ ಮತ್ತೊಂದೆಡೆ ಅಂಫಾನ್ ನಂತಹ ಪ್ರಾಕೃತಿಕ ವಿಕೋಪಗಳು ಇಷ್ಟು ಸಾಲದು ಅಂತ ಈಗ ಗುಜಾರಾತ್ ರಾಜಸ್ಥಾನಗಳನ್ನು ಅಟ್ಯಾಕ್ ಮಾಡಿರುವ ಲೊಕಸ್ಟ್ ಅನ್ನೋ ಮಿಡತೆಗಳು ... Locust ಅಥವಾ desert locust ಗಳು acredidae ಕುಟುಂಬಕ್ಕೆ ಸೇರಿವೆ. ನೋಡೋಕೆ ಮಿಡತೆ ತರ ಕಂಡರೂ ಅದಕಿಂತ ಭಿನ್ನ . ಈ ಲೋಕಸ್ಟ್ ಮಿಡತೆಗಳು ತಮ್ಮ ದೇಹದ ತೂಕದಷ್ಟೇ ಆಹಾರ ತಿನ್ನಬಲ್ಲವು ಅಂದ್ರೆ ಒಬ್ಬ ಐವತ್ತು ಕೆಜಿ ಮನುಷ್ಯ ಇದ್ದರೆ ಐವತ್ತು ಕೆಜಿ ಆಹಾರ ಒಂದು ದಿನಕ್ಕೆ ತಿನ್ನುವ ಹಾಗೆ . ಒಂದು square km ನ ವಿಸ್ತಾರದಲ್ಲಿ 35000 ಜನರ ಆಹಾರವನ್ನು ಒಂದು ಗುಂಪು ತಿನ್ನಬಲ್ಲದು. ಈ ಗುಂಪಿನಲ್ಲಿ 150000000 ಮಿಡತೆಗಳು ಅಂದರೆ ನೂರೈವತ್ತು ಮಿಲಿಯನ್ ಮಿಡತೆಗಳು ಏಕಕಾಲಕ್ಕೆ ದಾಳಿ ಮಾಡುತ್ತವೆ. ಈ ರೀತಿಯ ಮಿಡತೆ ದಾಳಿಗೂ ಬದಲಾಗುತ್ತಿರುವ ಹವಾಮಾನಕ್ಕೂ ನೇರ ನಂಟಿದೆ. ಈ ಮಿಡತೆಗಳ ಹೆಸರೇ ಡೆಸರ್ಟ್ ಲೋಕಸ್ಟ್ ಅಂದರೆ ಮರುಭೂಮಿ , ಒಣ ಪ್ರದೇಶದಲ್ಲಿ ಬದುಕುವ ಕೀಟಗಳು. ಈಗ ಪ್ರಸ್ತುತ ಆಫ್ರಿಕಾ ಮತ್ತು ಏಷಿಯಾ ಖಂಡದ ಮೇಲೆ ದಾಳಿ ನಡೆಸಿವೆ. ಇದೇ ಎರಡು ಏಕೆ ಅಂದರೆ ಇಲ್ಲಿ ಮಳೆ 200mm ಗಿಂತ ಕಮ್ಮಿ ಇಲ್ಲಿನ ಶುಷ್ಕ ವಾತಾವರಣ ಅದರ ಸಂತಾನಾಭಿವೃದ್ಧಿಗೆ , ಮತ್ತು ಹ...